ಸಾರಾಂಶ
ಗ್ರಾಮೀಣ ಪ್ರದೇಶದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಜೀವಂತವಾಗಿ ಕೆಲಸ ಮಾಡುತ್ತಿವೆ. ರೈತರ ಬೆಳೆಗಳಿಗೆ ಬೆಲೆ ಸಿಗುತ್ತಿಲ್ಲ. ಹೈನುಗಾರಿಕೆ ಮಾಡುವ ರೈತರು ನಿತ್ಯ ಡೇರಿಗೆ ಹಾಲು ಹಾಕಿ ವಾರಕ್ಕೊಮ್ಮೆ ಹಣ ಪಡೆದುಕೊಳ್ಳುತ್ತಿದ್ದಾರೆ. ಹೈನುಗಾರಿಕೆ ರೈತರ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಆಡಳಿತ ಮಂಡಳಿ ಹಾಗೂ ಕಾರ್‍ಯದರ್ಶಿ ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮನ್ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಹೇಳಿದರು.ತಾಲೂಕಿನ ತಾಳಶಾಸನ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಮೇಲಂತಸ್ಥಿನ ಕಟ್ಟಡ ಉದ್ಘಾಟನೆ ಹಾಗೂ ಸರ್ವ ಸದಸ್ಯರ ವಾರ್ಷಕ ಸಭೆ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಜೀವಂತವಾಗಿ ಕೆಲಸ ಮಾಡುತ್ತಿವೆ. ರೈತರ ಬೆಳೆಗಳಿಗೆ ಬೆಲೆ ಸಿಗುತ್ತಿಲ್ಲ. ಹೈನುಗಾರಿಕೆ ಮಾಡುವ ರೈತರು ನಿತ್ಯ ಡೇರಿಗೆ ಹಾಲು ಹಾಕಿ ವಾರಕ್ಕೊಮ್ಮೆ ಹಣ ಪಡೆದುಕೊಳ್ಳುತ್ತಿದ್ದಾರೆ. ಹೈನುಗಾರಿಕೆ ರೈತರ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಿದೆ ಎಂದರು.ಡೇರಿಗಳಲ್ಲಿ ಹಾಲಿನ ಫ್ಯಾಟ್ ಆಧಾರದ ಮೇಲೆ ರೈತರಿಗೆ ದರ ನೀಡಿ, ಕಳಪೆ ಗುಣಮಟ್ಟದ ಹಾಲು ತಂದರೆ ಮುಲಾಜಿಲ್ಲದೆ ವಾಪಸ್ ಕಳುಹಿಸಿ. ಹಾಲಿನ ಗುಣಮಟ್ಟದಲ್ಲಿ ಯಾರೊಂದಿಗೆ ರಾಜಿಮಾಡಿಕೊಳ್ಳಬಾರದು ಎಂದರು.
ಉಪ ವ್ಯವಸ್ಥಾಪಕ ಆರ್.ಪ್ರಸಾದ್ ಮಾತನಾಡಿ, ತಾಳಶಾಸಕ ಡೇರಿಯೂ ರೈತರಿಗೆ ಹಾಲಿನ ಫ್ಯಾಟ್ ಆಧಾರದಲ್ಲಿ ದರ ನೀಡುತ್ತಿರುವ ತಾಲೂಕಿನ ಏಕೈಕ ಸಂಘವಾಗಿದೆ. ಮನ್‌ಮುಲ್ ನಿರ್ದೇಶಕರು ಉತ್ತಮ ರೀತಿಯಲ್ಲಿ ಕೆಲಸ ಮಾಡುವ ಮೂಲಕ ತಾಲೂಕಿನ ಎಲ್ಲಾ ಡೇರಿಗಳು ಲಾಭದಾಯಕವಾಗಿ ಕೆಲಸ ಮಾಡುವಂತೆ ಮಾಡಿದ್ದಾರೆ ಎಂದರು.ಧರ್ಮಸ್ಥಳ ಸಂಸ್ಥೆಯ ಯೋಜನಾಧಿಕಾರಿ ಸರೋಜ ಮಾತನಾಡಿ, ಧರ್ಮಸ್ಥಳ ಸಂಸ್ಥೆಯೂ ಹೈನುಗಾರಿಕೆಗೆ ಹೊತ್ತು ನೀಡುವ ಮೂಲಕ ರೈತರಿಗೆ ಪ್ರೋತ್ಸಾಹಿಸುತ್ತಿದೆ. ಡೇರಿ ಕಟ್ಟಡ ನಿರ್ಮಾಣಕ್ಕೆ ಸಹಾಯ ಧನ ನೀಡುತ್ತಿದೆ. ರೈತರಿಗೆ ತಾಂತ್ರಿಕ ತರಬೇತಿ ಸೇರಿದಂತೆ ಹಲವು ಉತ್ತೇಜನ ಕಾರ್‍ಯಕ್ರಮ ಹಮ್ಮಿಕೊಂಡಿದೆ ಎಂದರು.
ಸಭೆಯಲ್ಲಿ ಡೇರಿ ಅಧ್ಯಕ್ಷ ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಚ್.ಆರ್.ನಾಗ ಭೂಷಣ್, ಉಪವ್ಯವಸ್ಥಾಪಕ ಆರ್.ಪ್ರಸಾದ್, ಮಾರ್ಗವಿಸ್ತರ್ಣಾಧಿಕಾರಿ ಎನ್.ಜಗದೀಶ್, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಸ್.ಆನಂದ್, ಗ್ರಾಪಂ ಮಾಜಿ ಅಧ್ಯಕ್ಷೆ ಮಹದೇವಮ್ಮ, ಡೇರಿ ಉಪಾಧ್ಯಕ್ಷ ಬಸವಣ್ಣ, ನಿರ್ದೇಶಕರಾದ ಜಗದೀಶ್, ಟಿ.ಸಿ.ಚನ್ನಪ್ಪ, ಶಿವಸ್ವಾಮಿ, ಟಿ.ಸಿ.ಸತೀಶ್, ಎಂ.ಮಹದೇವಸ್ವಾಮಿ, ನಂಜುಂಡಪ್ಪ, ಪುಟ್ಟಸ್ವಾಮಿ, ಶಿವಣ್ಣ, ಟಿ.ಬಿ.ಚಂದ್ರು, ನಾಗಮ್ಮ, ನಾಗಮಣಿ, ಕಾರ್‍ಯದರ್ಶಿ ಟಿ.ಎಂ.ಮಹದೇವಸ್ವಾಮಿ, ಪರೀಕ್ಷಕ ಟಿ.ಎಂ.ಬಸಪ್ಪ, ಟಿ.ಕೆ.ನವೀನ್, ಮುಖಂಡರಾದ ಟಿ.ಎಂ.ನಂಜುಂಡಪ್ಪ, ಸಂಪತ್ತು, ಪದ್ಮರಾಜು, ಪುಟ್ಟಸ್ವಾಮಿ, ಪರಮೇಶ್, ಪುಟ್ಟಸ್ವಾಮಿ, ಗುರುಪಾದಸ್ವಾಮಿ, ಕಾಳಪ್ಪ, ಮಹದೇವಯ್ಯ ಸೇರಿದಂತೆ ಹಲವರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))