ಹೊಸ ಪೀಠ ಇಲ್ಲ, ಮೂಲಪೀಠದಿಂದಲೇ ನಿರ್ವಹಣೆ:ಧರೆಪ್ಪ ಸಾಂಗ್ಲಿಕರ

| Published : Oct 04 2025, 01:00 AM IST

ಹೊಸ ಪೀಠ ಇಲ್ಲ, ಮೂಲಪೀಠದಿಂದಲೇ ನಿರ್ವಹಣೆ:ಧರೆಪ್ಪ ಸಾಂಗ್ಲಿಕರ
Share this Article
  • FB
  • TW
  • Linkdin
  • Email

ಸಾರಾಂಶ

ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿಯಿಂದ ಹೊಸ ಪೀಠ ರಚನೆಯಾಗದು. ಬದಲಾಗಿ ಮೂಲಪೀಠವೇ ನಿರ್ವಹಣೆಯಾಗಲಿದ್ದು, ಇದಕ್ಕಾಗಿ ಕೂಡಲಸಂಗಮದಲ್ಲಿಯೇ ಭಕ್ತರಿಂದ ಸ್ಥಳಾವಕಾಶಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಧರೆಪ್ಪ ಸಾಂಗ್ಲಿಕರ ತಿಳಿಸಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿಯಿಂದ ಹೊಸ ಪೀಠ ರಚನೆಯಾಗದು. ಬದಲಾಗಿ ಮೂಲಪೀಠವೇ ನಿರ್ವಹಣೆಯಾಗಲಿದ್ದು, ಇದಕ್ಕಾಗಿ ಕೂಡಲಸಂಗಮದಲ್ಲಿಯೇ ಭಕ್ತರಿಂದ ಸ್ಥಳಾವಕಾಶಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಧರೆಪ್ಪ ಸಾಂಗ್ಲಿಕರ ತಿಳಿಸಿದರು.

ಬನಹಟ್ಟಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 4ನೇ ಪೀಠ ತಯಾರಿಯಲ್ಲಿರುವ ಬಗ್ಗೆ ನಡೆದಿರುವ ನಿರ್ಧಾರ ಕೈಬಿಟ್ಟು, ಇರುವ ಮೂಲಪೀಠವೇ ಕಾರ್ಯ ನಿರ್ವಹಣೆಯಾಗಲಿದೆ. ಟ್ರಸ್ಟ್‌ನಿಂದ ಶ್ರೀಗಳ ಪದಚ್ಯುತಿಯಾಗಿದೆಯೇ ಹೊರತು, ಪೀಠದಿಂದಲ್ಲ. ಇಡೀ ಪಂಚಮಸಾಲಿ ಸಮುದಾಯವೇ ಶ್ರೀಗಳ ಬೆನ್ನಿಗೆ ನಿಂತಿದ್ದು, ಶೀಘ್ರವೇ ಹೊಸ ಸ್ಥಳದಲ್ಲಿ ಪ್ರಥಮ ಜಗದ್ಗುರುಗಳ ಸಮಾಜಮುಖಿ ಕೆಲಸ ನಿರಂತರ ಮುನ್ನಡೆಯಲಿದೆ ಎಂದು ಸಾಂಗ್ಲಿಕರ ಸ್ಪಷ್ಟಪಡಿಸಿದರು.ಟ್ರಸ್ಟ್‌ ನಿರ್ಧಾರಕ್ಕೆ ಬೇಸರ:

ಕೂಡಲಸಂಗಮದಲ್ಲಿ ಪಂಚಮಸಾಲಿ ಪೀಠಕ್ಕೆ ಪ್ರಥಮ ಜಗದ್ಗುರುಗಳಾಗಿ ಬವಸಜಯ ಮೃತ್ಯುಂಜಯ ಸ್ವಾಮೀಜಿಗಳ ಆಯ್ಕೆಯ ಬಳಿಕ ಟ್ರಸ್ಟ್ ಸೃಷ್ಟಿಯಾಗಿದೆ. ಹೀಗಾಗಿ ಟ್ರಸ್ಟ್ ಗೂ ಪೀಠಕ್ಕೂ ಯಾವುದೇ ಸಂಬಂಧವಿಲ್ಲ. ಶ್ರೀಗಳನ್ನು ಅಧ್ಯಕ್ಷರನ್ನಾಗಿ ಮಾಡುವುದಾಗಿ ತಿಳಿಸಿ, ಅದರಂತೆ ಜಾಗವನ್ನೂ ಒದಗಿಸುವ ಬಗ್ಗೆ ಟ್ರಸ್ಟ್ ತಿಳಿಸಿತ್ತು. 4 ವರ್ಷಗಳ ಹಿಂದೆ ಸ್ವಾಮೀಜಿಗಳನ್ನು ಸದಸ್ಯರನ್ನಾಗಿ ಮಾಡಿ, ಅದೇ ಸಂದರ್ಭ ಶಾಸಕ ವಿಜಯಾನಂದ ಕಾಶಪ್ಪನವರ ಕೂಡ ಸದಸ್ಯರಾಗಿ ಸಮುದಾಯದಿಂದ ಆಯ್ಕೆ ಮಾಡಿತ್ತು. ಕಳೆದೆರಡು ತಿಂಗಳ ಹಿಂದೆ ಕಾಶಪ್ಪನವರ ಅಧ್ಯಕ್ಷರಾದ ನಂತರ ವ್ಯವಸ್ಥಿತ ಪಿತೂರಿಯಿಂದ ಶ್ರೀಗಳನ್ನು ಟ್ರಸ್ಟ್‌ ನಿಂದ ಹೊರಹಾಕುವ ವಿಚಾರ ಸಾಕಾರವಾಗಿರುವುದು ಎಲ್ಲರಿಗೂ ತಿಳಿದ ವಿಷಯ. ಟ್ರಸ್ಟ್‌ ನಡೆಯಿಂದ ಬಸವಜಯ ಮೃತ್ಯುಂಜಯ ಶ್ರೀಗಳ ಎಲ್ಲ ಭಕ್ತರಿಗೆ ನೋವಾಗಿದೆ ಎಂದರು.ನಾಲ್ಕನೇ ಪೀಠ ಪ್ರಸ್ತಾಪಿಸಿಲ್ಲ: ಶ್ರೀಗಳುಇದೇ ವೇಳೆ ಮದಭಾಂವಿಯಲ್ಲಿ ಮಾತನಾಡಿದ ಬಸವಯಮೃತ್ಯುಂಜಯ ಸ್ವಾಮೀಜಿ, ಕೂಡಲಸಂಗಮದಲ್ಲಿ ಭಕ್ತರು ನಮ್ಮ ಮೂಲ ಪೀಠಕ್ಕೆ ಜಾಗ ಖರೀದಿಸಿದ್ದಾರೆ ಎಂದು ಹೇಳಿಕೆ ನೀಡಿದ್ದೇನೆ ಹೊರತು ನಾಲ್ಕನೇ ಪೀಠ ಸ್ಥಾಪನೆ ಕುರಿತು ಪ್ರಸ್ತಾಪಿಸಿಲ್ಲ ಎಂದು ಸ್ಪಷ್ಟಪಡಿಸಿದರು.