ರಾಜ್ಯದಲ್ಲಿ ಜನಸಾಮಾನ್ಯರಿಗೆ ರಕ್ಷಣೆ ಇಲ್ಲ- ಬಿಜೆಪಿ ಪ್ರತಿಭಟನೆ

| Published : Dec 20 2023, 01:15 AM IST

ರಾಜ್ಯದಲ್ಲಿ ಜನಸಾಮಾನ್ಯರಿಗೆ ರಕ್ಷಣೆ ಇಲ್ಲ- ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರು ಚಿತ್ರದುರ್ಗದಲ್ಲಿ ನಡೆಸುತ್ತಿದ್ದ ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘಟನೆಯ ಮುಖಂಡರು ನುಗ್ಗಿ ಪತ್ರಿಕಾಗೋಷ್ಠಿಗೆ ಅಡ್ಡಿಪಡಿಸಿರುವ ಘಟನೆ ಹಾಗೂ ಬೆಳಗಾವಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿದ ಪ್ರಕರಣ ಖಂಡಿಸಿ ಬಿಜೆಪಿ ಗ್ರಾಮೀಣ ಹಾಗೂ ನಗರ ಮಂಡಳ ವತಿಯಿಂದ ಸೋಮವಾರ ಸಂಜೆ ನಗರದ ಶಿವಾಜಿ ಸರ್ಕಲ್‌ನಲ್ಲಿ ರಸ್ತೆ ತಡೆ ನಡೆಸಿತು.

ಕನ್ನಡ ಪ್ರಭ ವಾರ್ತೆ ಮುಧೋಳ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅರಾಜಕತೆ ತಾಂಡವವಾಡುತ್ತಿದೆ. ರಾಜ್ಯದಲ್ಲಿ ಜನಸಾಮಾನ್ಯರಿಗೆ ರಕ್ಷಣೆ ಇಲ್ಲದಂತಾಗಿದೆ. ಬಿಜೆಪಿ ಪಕ್ಷದ ಪ್ರಭಾವಿ ನಾಯಕರನ್ನು ಹೆದರಿಸುವ ಪ್ರಯತ್ನ ನಡೆದಿದೆ ಎಂದು ಬಿಜೆಪಿ ಮುಖಂಡ ನಾಗಪ್ಪ ಅಂಬಿ ಆರೋಪಿಸಿದರು.

ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರು ಚಿತ್ರದುರ್ಗದಲ್ಲಿ ನಡೆಸುತ್ತಿದ್ದ ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘಟನೆಯ ಮುಖಂಡರು ನುಗ್ಗಿ ಪತ್ರಿಕಾಗೋಷ್ಠಿಗೆ ಅಡ್ಡಿಪಡಿಸಿರುವ ಘಟನೆ ಹಾಗೂ ಬೆಳಗಾವಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿದ ಪ್ರಕರಣ ಖಂಡಿಸಿ ಬಿಜೆಪಿ ಗ್ರಾಮೀಣ ಹಾಗೂ ನಗರ ಮಂಡಳ ವತಿಯಿಂದ ಸೋಮವಾರ ಸಂಜೆ ನಗರದ ಶಿವಾಜಿ ಸರ್ಕಲ್‌ನಲ್ಲಿ ರಸ್ತೆ ತಡೆ ನಡೆಸಿ, ಟೈರ್‌ಗೆ ಬೆಂಕಿಹಚ್ಚಿ ಪ್ರತಿಭಟನೆ ನಡೆಸಿ, ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ ನಡೆದ ಮಹಿಳೆಯ ವಿವಸ್ತ್ರಗೊಳಿಸಿದ ಘಟನೆಯಿಂದ ಸಮಾಜ ತಲೆ ತಗ್ಗಿಸುವಂತಾಗಿದೆ. ಆದ್ದರಿಂದ ಇವೆರಡು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಹನುಮಂತ ತುಳಸಿಗೇರಿ, ನಗರ ಮಂಡಲ ಅಧ್ಯಕ್ಷ ಡಾ.ರವಿ ನಂದಗಾಂವ, ಪ್ರಧಾನ ಕಾರ್ಯದರ್ಶಿ ಕುಮಾರ ಹುಲಕುಂದ, ಬಿಜೆಪಿ ಮುಖಂಡ ಕೆ.ಆರ್‌.ಮಾಚಪ್ಪನವರ, ಭೀಮನಗೌಡ ಪಾಟೀಲ, ಸೋನಾಪ್ಪಿ ಕುಲಕರ್ಣಿ, ಮಹಮ್ಮದಸಾಬ ಶೇಖ, ಲಕ್ಷ್ಮಣ ಚಿಣ್ಣನವರ, ಬಸವರಾಜ ಮಳಲಿ, ಎಸ್.ಎಸ್.ಅಕ್ಕಿಮರಡಿ, ಶ್ರೀಶೈಲ ಚಿನ್ನನವರ, ಸಂಗಣ್ಣ ಕಾತರಕಿ, ಪ್ರದೀಪ ನಿಂಬಾಳ್ಕರ, ಶ್ರೀಕಾಂತ ಗುಜ್ಜನ್ನವರ, ಅನಂತರಾವ ಘೋರ್ಪಡೆ, ವಿಠಲ ಮ್ಯಾಗೇರಿ, ಸಾಹೇಬಲಾಲ ನದಾಫ, ಬಸವರಾಜ ಗಣಿ, ಸುರೇಶ ಸೂಕನಾದಗಿ, ಶಬ್ಬಿರ ಮುಲ್ಲಾ, ಬಂಡು ಘಾಟಗೆ, ಸದಾ ಜಾಧವ, ಸುನೀಲ ಕಂಬೋಗಿ, ಬಸವರಾಜ ಘಟ್ನಟ್ಟಿ, ಈರಯ್ಯ ಗೋವಿಂದಪೂರಮಠ, ಶಂಕರ ಮೋದಿ, ಸದಾಶಿವ ಇಟಕನ್ನವರ, ಪುಂಡಲಿಕ ಭೋವಿ, ತುಷಾರ ಬೋಪಳೆ ಸೇರಿದಂತೆ ಅನೇಕರು ಇದ್ದರು. ಸುಮಾರು ಒಂದು ಗಂಟೆವರೆಗೆ ರಸ್ತೆತಡೆ ನಡೆಸಿದ್ದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಯಿತು.