ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲು, ಅಂಥದ್ಯಾವ ಬೆಳವಣಿಗೆ ಇಲ್ಲ: ಸಚಿವ ಈಶ್ವರ ಖಂಡ್ರೆ ಸ್ಪಷ್ಟನೆ

| N/A | Published : Apr 02 2025, 01:01 AM IST / Updated: Apr 02 2025, 01:12 PM IST

Eshwar Khandre
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲು, ಅಂಥದ್ಯಾವ ಬೆಳವಣಿಗೆ ಇಲ್ಲ: ಸಚಿವ ಈಶ್ವರ ಖಂಡ್ರೆ ಸ್ಪಷ್ಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೆಪಿಸಿಸಿ ಅಧ್ಯಕ್ಷ ಹುದ್ದೆ ಸೇರಿದಂತೆ ರಾಜ್ಯದಲ್ಲಿ ಸದ್ಯ ಯಾವುದೇ ಹುದ್ದೆ ಖಾಲಿ ಇಲ್ಲ ಎಂದು ಸಚಿವ ಈಶ್ವರ ಖಂಡ್ರೆ ಸ್ಪಷ್ಟ ಪಡಿಸಿದರು.

 ಬೀದರ್‌ :  ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರ ನನಗೇ ಗೊತ್ತೇ ಇಲ್ಲ. ಮಾಧ್ಯಮದಲ್ಲಿ ಬರುತ್ತಿರುವದೂ ಗಮನದಲ್ಲಿಲ್ಲ. ಅಂಥ ಯಾವುದೇ ಬೆಳವಣಿಗೆ ಈಗಿಲ್ಲ ಎಂದು ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ, ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಕೇಳಿಬರುತ್ತಿದೆ ಎಂಬ ಕುರಿತಾಗಿ ಅವರು ಭೇಟಿಯಾದ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಕೆಪಿಸಿಸಿ ಅಧ್ಯಕ್ಷ ಹುದ್ದೆ ಸೇರಿದಂತೆ ರಾಜ್ಯದಲ್ಲಿ ಸಧ್ಯ ಯಾವುದೇ ಹುದ್ದೆ ಖಾಲಿ ಇಲ್ಲ. ದೆಹಲಿಗೆ ಹೋಗಿದ್ದು ಬೇರೆ ಕೆಲಸಕ್ಕೆ ಅಷ್ಟಕ್ಕೂ ವರಿಷ್ಠರ ಭೇಟಿಯ ವಿಚಾರವಾಗಿ ಪ್ರತಿಕ್ರಿಯಿಸಲ್ಲ ಎಂದರು.

ಮರಗಳ ಮಾರಣಹೋಮ; ಪ್ರಕರಣ:

ಶಾಸಕ ವಿನಯ ಕುಲಕರ್ಣಿ ಅವರ ಕುಟುಂಬಸ್ಥರಿಂದ ಮರಗಳ ಮಾರಣ ಹೋಮ ನಡೆದಿದ್ದು ಹೀಗಾಗಿ ಅರಣ್ಯ ಇಲಾಖೆ ಕಾಯ್ದೆಯಡಿ ಈಗಾಗಲೇ ಅವರ ವಿರುದ್ದ ಪ್ರಕರಣ ದಾಖಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.ಅವರ ಪುತ್ರಿಗೆ ಕಾನೂನು ಬಗ್ಗೆ ಮಾಹಿತಿ ಇದೆ ಅವರೆಲ್ಲರೂ ಜಾಗೃತರಾಗಿದ್ದಾರೆ. ಯಾರು ಮಾಡಿದ್ದಾರೆ, ಯಾಕೆ ಮಾಡಿದ್ದಾರೆ ತನಿಖೆ ಆಗೇ ಆಗುತ್ತದೆ. ಇಲಾಖೆಯ ಅಧಿಕಾರಿಗಳು ಅದರ ಬಗ್ಗೆ ವಿಚಾರಣೆ ಮಾಡುತ್ತಾರೆ ಎಂದರು.ಮಸ್ಕಿ ಶಾಸಕನ ಪುತ್ರ ಇಕ್ಕಟ್ಟಿಗೆ, ಮೊಲಗಳ ಹತ್ಯೆ; ಎಫ್‌ಐಆರ್‌

ಮಸ್ಕಿ ಶಾಸಕ ಬಸವನಗೌಡ ತುರ್ವಿಹಾಳ ಸಹೋದರ ಸಿದ್ದನಗೌಡ ತುರ್ವಿಹಾಳ ಹಾಗೂ ಪುತ್ರ ಸತೀಶಗೌಡ ಅವರಿಂದ ಮೊಲಗಳಿಗೆ ಖಡ್ಗದಿಂದ ಹೊಡೆದು ಹಿಂಸೆ ಮಾಡಿ ಕೊಂದು ಕಟ್ಟಿಗೆಗೆ ಕಟ್ಟಿಕೊಂಡು ಮೆರವಣಿಗೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಈಶ್ವರ ಖಂಡ್ರೆ ಅವರು ಅರಣ್ಯ ಸಂರಕ್ಷಣೆ ಕಾಯ್ದೆ, ವನ್ಯಜೀವಿ ಸಂರಕ್ಷಣೆ ಕಾಯ್ದೆಯನ್ನು ಮಾಜಿ ಪ್ರಧಾನಿ ದಿ.ಇಂದೀರಾ ಗಾಂಧಿ ಅವರು ಜಾರಿಗೆ ತಂದಿದ್ದರು. 

ಪ್ರಕೃತಿ, ಪರಿಸರ, ವನ್ಯಜೀವಿಗಳ ಸಂರಕ್ಷಣೆಗಾಗಿ ಕಾನೂನು ತಂದಿದ್ದೇವೆ. ಈ ಕಾಯ್ದೆಯನ್ನು ಯಾರೇ ಉಲ್ಲಂಘನೆ ಮಾಡಿದರೂ ಅಪರಾಧ ಆಗುತ್ತದೆ. ಈಗಾಗಲೇ ಇಲಾಖೆ ಯವರು ಎಫ್‌ಐಆರ್‌ ದಾಖಲು ಮಾಡಿದ್ದು ತನಿಖೆ ಕೈಗೊಂಡಿದ್ದಾರೆ, ತನಿಖೆ ಯ ಆಧಾರದ ಮೇಲೆ‌ ಕಾನೂನು ರೀತಿ ಕ್ರಮ ಆಗುತ್ತದೆ. ನ್ಯಾಯ ಎಂಬುವದು ಎಲ್ಲರಿಗೂ ಒಂದೇ ಇರುತ್ತದೆ ಸರ್ಕಾರ ಇದರಲ್ಲಿ ಯಾವುದೇ ತಾರತಮ್ಯ ಮಾಡೋದಿಲ್ಲ ಎಂದು ಸ್ಪಷ್ಟಪಡಿಸಿದರು.ಪ್ರಕರಣ ದಾಖಲಾದ ಮೇಲೆ ತಾರ್ಕಿಕ ಅಂತ್ಯ ಕಾಣಿಸುತ್ತೇವೆ. ತನಿಖೆಗೆ ಆದೇಶ ಮಾಡಿದ್ದೇವೆ, ನಿಷ್ಪಕ್ಷಪಾತವಾದ ತನಿಖೆ ಆಗುತ್ತದೆ ಎಂಬ ಭರವಸೆ ಕೊಡುತ್ತೇವೆ ಎಂದ ಅವರು ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿ ವರದಿ ಕೊಡುತ್ತಾರೆ, ವರದಿ ಆಧಾರದ ಮೇಲೆ ಕ್ರಮ ಆಗುತ್ತದೆ ಎಂದು ಸಚಿವ ಖಂಡ್ರೆ ಹೇಳಿದರು.