ಸಾರಾಂಶ
ಕನ್ನಡ ಪ್ರಭ ವಾರ್ತೆ ಹೊನ್ನಾಳಿ
ಚುನಾವಣೆಗಳ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಬೇಕು, ಆಡಳಿತ ಮತ್ತು ಅಭಿವೃದ್ದಿ ವಿಚಾರಗಳಲ್ಲಿ ಎಲ್ಲರೂ ಪಕ್ಷಾತೀತವಾಗಿ ಒಗ್ಗೋಡಿ ಕೆಲಸ ಮಾಡಿದಾಗ ಮಾತ್ರ ಗ್ರಾಮ, ರಾಜ್ಯ, ದೇಶ ಪ್ರಗತಿಯಾಗಲು ಸಾಧ್ಯವಾಗುತ್ತದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ತಾಲೂಕಿನ ಹಿರೇಗೋಣಿಗೆರೆಯಲ್ಲಿ ನೂತನವಾಗಿ ನಿರ್ಮಿಸಲಾದ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ರಾಷ್ಟ್ರ, ರಾಜ್ಯ ಜಿಲ್ಲೆ, ತಾಲೂಕು ನಂತರ ಗ್ರಾಮಗಳ ಹಂತದಲ್ಲಿ ಆಡಳಿತ ವ್ಯವಸ್ಥೆ ಇದ್ದು, ದೇಶದ ರಾಷ್ಟ್ರಪತಿ,ರಾಜ್ಯಪಾಲರಿಗೂ ಇಲ್ಲದ ವಿಶೇಷ ಅಧಿಕಾರ ಗ್ರಾಮಪಂಚಾಯಿತಿ ಅಧ್ಯಕ್ಷರಿಗೆ ಇದೆ ಅದು ನೇರವಾಗಿ ಚೆಕ್ ಗಳಿಗೆ ಸಹಿ ಮಾಡುವುದು ಇದರ ಜವಾಬ್ದಾರಿಯನ್ನು ಆರಿತು ಗ್ರಾಮಪಂಚಾಯಿತಿಗಳು ಆಡಳಿತ ನಡೆಸಬೇಕು, ಜನರ ಕಣ್ಣಲ್ಲಿ ನೀರು ಬರಿಸದ ರೀತಿಯಲ್ಲಿ ಗ್ರಾಮೀಣ ಜನತೆಯ ಕೆಲಸ ಕಾರ್ಯಗಳನ್ನು ಗ್ರಾಮಪಂಚಾಯಿತಿ ಅಡಳಿತ ವ್ಯವಸ್ಥೆ ಮಾಡಬೇಕು ಆಗ ಮಾತ್ರ ಗಾಂಧೀಜಿಯವರ ರಾಮ ರಾಜ್ಯದ ಕನಸು ನನಸಾಗುತ್ತದೆ ಎಂದು ಹೇಳಿದರು.
ಇಷ್ಟು ದಿನ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಹಾಗೂ ಅಧಿಕಾರಿಗಳು ಬೇರೆಡೆ ವರ್ಗಾವಣೆಯಾದ ಕಾರಣಗಳಿಂದ ಬಗರ್ ಹುಕುಂ ಸಮಿತಿ ಸಭೆ ಕರೆಯಲಾಗಿರಲ್ಲಿಲ್ಲ ಇದೀಗ ಪ್ರತಿ ಶನಿವಾರ ಬಗರ್ ಹುಕುಂ ಸಮಿತಿ ಸಭೆ ನಡೆಸುವ ಬಗ್ಗೆ ಕ್ರಮವಹಿಸಲಾಗುವುದು, ಗ್ರಾಮ ಸಭೆ ಕರೆದು ತನ್ಮೂಲಕ ಮನೆಗಳ ಫಲಾನುಭವಿಗಳ ಆಯ್ಕೆ ಮಾಡಬೇಕು ಎಂದು ಹೇಳಿದರು. ನಮೂನೆ 50 ಮತ್ತು 53 ಪ್ರಕರಣಗಳ ವಿವೇವಾರಿಗೆ ಕೂಡ ಗಮನಹರಿಸಲಾಗುವುದು ಎಂದು ಭರವಸೆ ನೀಡಿದರು.ಗ್ರಾಮೀಣ ಹಂತಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಒಂದು ವರದಾನವಾಗಿದ್ದು, ಈ ಯೋಜನೆ ಸದುಪಯೋಗಪಡಿಸಿಕೊಂಡು ಗ್ರಾಮೀಣ ಜನತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ ಕೆಲಸ ಮಾಡಬೇಕು ಎಂದು ಹೇಳಿದರು. ಗ್ರಾಮದ ಮುಖಂಡರು ಶಾಲಾ ಕಟ್ಟಡ, ಪದವಿಪೂರ್ವ ಕಾಲೇಜು, ಆಸ್ಪತ್ರೆ ಮಂಜೂರಾತಿಗಾಗಿ ಶಾಸಕರಿಗೆ ಬೇಡಿಕೆ ಇಟ್ಟ ಕಾರಣ ಇದಕ್ಕೆ ಸ್ಪಂದಿಸಿ ಶಾಸಕರು ಶಾಲಾ ಕಟ್ಟಡಗಳು ಸೇರಿದಂತೆ ಗ್ರಾಮಪಂಚಾಯಿತಿ ಕಟ್ಟಗಳು ಸೋರುತ್ತಿವೆ ಎಂದರೆ ಅದಕ್ಕೆ ಕಾರಣ ಜನಪ್ರತಿನಿಧಿಗಳು ಹಾಗೂ ಸ್ಥಳೀಯ ರಾಜಕಾರಣಗಳೇ ಕಾರಣವಾಗಿರುತ್ತಾರೆ ಈ ರೀತಿ ಅಗದಂತೆ ಸ್ಥಳೀಯ ಮುಖಂಡರು ಜನರು ಜವಾಬ್ದಾರಿವಹಿಸಬೇಕು ಎಂದು ಹೇಳಿದರುಗ್ರಾಮಪಂಚಾಯಿತಿಗಳಲ್ಲಿ 3ರಿಂದ 4 ತಿಂಗಳಿಗೆ ಅಧ್ಯಕ್ಷರ ಬದಲಾವಣೆಯಾಗುತ್ತಿರುವ ಕಾರಣ ಇದು ಕೂಡ ಅಭಿವೃದ್ದಿ ಕೆಲಸಗಳು ಸುಲಲಿತವಾಗಿ ಸಾಗುವಲ್ಲಿ ತೊಡಕಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಆರುಣ್ ಮಾತನಾಡಿ, ಸರ್ಕಾರದ ಸೌಲಭ್ಯಗಳು, ಯೋಜನೆಗಳನ್ನು ನಮರ್ಪಕವಾಗಿ ಸಮಾಜದ ಕಟ್ಟ ಕಡೆಯ ವ್ಯೆಕ್ತಿಗಳಿಗೆ ತಲುಪಿಸುವಲ್ಲಿ ಗ್ರಾಮಪಂಚಾಯಿತಿ ಅಡಳಿತಗಳು ಮಹತ್ತರ ಪಾತ್ರವಹಿಸುತ್ತವೆ ಸ್ವಾತಂತ್ರ್ಯ ಬಂದು ಏಳು ದಶಗಳು ಕಳೆದಿದ್ದರೂ ಕೂಡ ಇನ್ನೂ ಗ್ರಾಮೀಣ ಜನತೆಗೆ ಮೂಲಭೂತ ಸೌಕರ್ಯಗಳನ್ನು ತಲುಪಿಸಲಾಗುತ್ತಿಲ್ಲ ಎಂದು ಹೇಳದರು.ಅಧಿಕಾರ ವಿಕೇಂದ್ರೀಕರಣ ಎಂದರೆ ಅಧಿಕಾರ ನಡೆಸುವುದಲ್ಲ ಬದಲಿಗೆ ಜನರ ಜೀವನ ಮಟ್ಟ ಸುಧಾರಿಸುವುದಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಆದ್ಯಕ್ಷ ಎಚ್.ಬಿ.ಮಂಜಪ್ಪ ಅವರು ಮಾತನಾಡಿ,ಗ್ರಾಮಪಂಚಾಯಿತಿಗಳು ಉತ್ತಮವಾಗಿ ಕೆಲಸ ಮಾಡಿದರೆ ಇದರಿಂದ ಗ್ರಾಮ ಮಟ್ಟದಿಂದ ತಾಲೂಕು, ಜಿಲ್ಲೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕೂಡ ಅಭಿವೃದ್ದಿ ಸಾಧ್ಯವಾಗುತ್ತದೆ ದೇಶ ಬಲಿಷ್ಛವಾಗುತ್ತದೆ ಎಂದರು.ಹಿರಿಯ ಮುಖಂಡ ಬಿ.ಸಿದ್ದಪ್ಪ ಅವರು ಮಾತನಾಡಿ, ಅಡಳಿತ ನಡೆಸುವ ಕಟ್ಟಡಗಳು ಸುಂದರವಾಗಿದ್ದರೆ ಸಾಲದು ಅದರೊಳಗೆ ನಡೆಯುವ ಜನಪರ ಕೆಲಸಗಳು ತೂಡ ಉತ್ತಮವಾಗಿರಬೇಕಾಗುತ್ತದೆ ಗ್ರಾಮ ಪಂಚಾಯಿತಿಗಳಲ್ಲಿ ಸ್ಥಳೀಯ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬಗೆಹರಿಸಬಹುದಾಗಿದೆ ಎಂದು ಹೇಳಿದರು. ಜಿ.ಪಂ.ಮಾಜಿ ಅಧ್ಯಕ್ಷ ಆರ್.ನಾಗಪ್ಪ, ಇತರರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಗ್ರಾಮಪಂಚಾಯಿತಿ ಆಧ್ಯಕ್ಷ ಸೋಮಪ್ಪ ಮಾತನಾಡಿ ಇಂದು ತಾಲೂಕಿನಲ್ಲಿಯೇ ಹಿರೇಗೋಣಿಗೆರೆ ಗ್ರಾಮಪಂಚಾಯಿತಿ ಉತ್ತಮ ಕೆಲಸಮಾಡಿಕೊಂಡು ಇಂದು ಒಂದು ಸುಂದರ ಗ್ರಾಮಸೌಧ ಕಟ್ಟಡ ನಿರ್ಮಿಸಿದೆ ಎಂದರೆ ಇದಕ್ಕೆ ಗ್ರಾಮಪಂಚಾಯಿತಿ 17 ಜನ ಸದಸ್ಯರುಗಳು, ಅಧಿಕಾರಿಗಳ ಪರಿಶ್ರಮ ಕಾರಣವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಗ್ರಾಮಪಂಚಾಯಿತಿ ಎಲ್ಲಾ ಸದಸ್ಯರುಗಳು, ಮಾಜಿ ಸದಸ್ಯರುಗಳು, ಪಿ.ಡಿ.ಓಅರುಣ್ ಕೆ., ಹರಳಹಳ್ಳಿ ಪಿ.ಡಿ.ಓ,ಎಂ.ವಿ.ರವಿ, ಪಂಚಾಯತ್ ರಾಜ್ ಉಪವಿಭಾಗದ ಇಂಜಿನಿಯರ್ ನಾಗರಾಜ್, ತಾ.ಪಂ.ಇ.ಒ.ರಾಘವೇಂದ್ರ, ಕಾರ್ಯದರ್ಶಿ ರಾಜೇಂದ್ರ ಎಸ್. ಯುವ ಮುಖಂಡ ಸುರೇಶ್, ತಾ.ಪಂ. ಮಾಜಿ ಸದಸ್ಯೆ ಕವಿತಾ ಪ್ರಭುಗೌಡ, ಗ್ರಾಮಸ್ಥರು ಇದ್ದರು.
- - - -28ಎಚ್.ಎಲ್.ಐ1:ಹೊನ್ನಾಳಿ ತಾಲೂಕಿನ ಹಿರೇಗೋಣಿಗೆರೆ ನೂತನ ಗ್ರಾಪಂ ಕಟ್ಟಡ ಲೋಕಾರ್ಪಣೆಗೊಳಿಸಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿದರು.