ಸಂವಿಧಾನ ಉಳಿವಿಗೆ ಯೋಚಿಸಿ ಮತ ನೀಡಿ

| Published : Apr 22 2024, 02:02 AM IST

ಸಾರಾಂಶ

ಸಂವಿಧಾನ ಉಳಿವಿಗಾಗಿ ಪ್ರತಿಯೊಬ್ಬ ಮತದಾರರು ಯೋಚಿಸಿ ಮತ ನೀಡುವ ಮೂಲಕ ಸಂವಿಧಾನ ಸಂರಕ್ಷಿಸಿಕೊಳ್ಳಬೇಕಿದೆ. ಸಂವಿಧಾನ ರಕ್ಷಣೆಗೆ ಕಟಿಬದ್ಧವಾಗಿರುವ ಕಾಂಗ್ರೆಸ್ ಪಕ್ಷವನ್ನು ಈ ಚುನಾವಣೆಯಲ್ಲಿ ಬೆಂಬಲಿಸಿ ಅತ್ಯಧಿತ ಅಂತರದ ಗೆಲುವನ್ನು ಕಾಂಗ್ರೆಸ್ ಅಭ್ಯರ್ಥಿಗೆ ತಂದುಕೊಡಬೇಕು ಎಂದು ಚಲನಚಿತ್ರ ನಟ, ನಿರ್ದೇಶಕ ಎಸ್. ನಾರಾಯಣ್ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಸಂವಿಧಾನ ಉಳಿವಿಗಾಗಿ ಪ್ರತಿಯೊಬ್ಬ ಮತದಾರರು ಯೋಚಿಸಿ ಮತ ನೀಡುವ ಮೂಲಕ ಸಂವಿಧಾನ ಸಂರಕ್ಷಿಸಿಕೊಳ್ಳಬೇಕಿದೆ. ಸಂವಿಧಾನ ರಕ್ಷಣೆಗೆ ಕಟಿಬದ್ಧವಾಗಿರುವ ಕಾಂಗ್ರೆಸ್ ಪಕ್ಷವನ್ನು ಈ ಚುನಾವಣೆಯಲ್ಲಿ ಬೆಂಬಲಿಸಿ ಅತ್ಯಧಿತ ಅಂತರದ ಗೆಲುವನ್ನು ಕಾಂಗ್ರೆಸ್ ಅಭ್ಯರ್ಥಿಗೆ ತಂದುಕೊಡಬೇಕು ಎಂದು ಚಲನಚಿತ್ರ ನಟ, ನಿರ್ದೇಶಕ ಎಸ್. ನಾರಾಯಣ್ ಹೇಳಿದರು.

ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಪರವಾಗಿ ಮತಯಾಚಿಸಿ ಮಾತನಾಡಿ, ಕೊಳ್ಳೇಗಾಲ ಮಾತ್ರವಲ್ಲ ಜಿಲ್ಲಾದ್ಯಂತ ಉತ್ತಮ ಅಂಬೇಡ್ಕರ್ ಶಿಲಾ ಪ್ರತಿಮೆಗಳಿವೆ. ಅವುಗಳು ಉಳಿದು ಜೀವಂತಿಕೆ ಪಡೆಯಬೇಕಾದರೆ ಅದನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮುಂದಾಗಬೇಕು. ಸಂವಿಧಾನ ಬದಲಾದರೆ ಮತ್ತೆ ನಾವು ಗುಲಾಮರಾಗಬೇಕಾಗುತ್ತದೆ. ಹಾಗಾಗಿ ಈ ಚುನಾವಣೆಯಲ್ಲಿ ಸಂವಿಧಾನ ಬದಲಿಸುತ್ತೆವೆ ಅನ್ನುವವರನ್ನು ತಿರಸ್ಕರಿಸಿ ಎಂದು ಮನವಿ ಮಾಡಿದರು.

ಕಳೆದ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲೂ ಚಾಮರಾಜನಗರ ಜಿಲ್ಲಾದ್ಯಂತ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದೆ, ಪ್ರಚಾರ ನಡೆಸಿದ್ದೆ. ಹೀಗಾಗಿ ಜಿಲ್ಲೆಯಲ್ಲಿ ಮೂವರು ಗೆಲುವು ಕಂಡಿದ್ದೆವು. ಹಾಗಾಗಿ ಮತದಾರರಿಗೆ ಕೃತಜ್ಞತೆ ಸಲ್ಲಿಸುವೆ. ಚಾಮರಾಜನಗರ ಲೋಕಸಭೆ ಚುನಾವಣೆಗೂ ಮತ ಕೇಳಲು ನಾನು ಬಂದಿದ್ದೇನೆ, ಜಿಲ್ಲೆಯು ಕಾಂಗ್ರೆಸ್ ಭದ್ರಕೋಟೆಯಾದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎಂದರು.

ಈ ಸಂದರ್ಭದಲ್ಲಿ ಉಪ್ಪಾರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್, ಓಲೆ ಮಹದೇವ, ಮುಖಂಡ ಶಿವಮಲ್ಲು, ಪ್ರಜ್ವಲ್, ಮುಡಿಗುಂಡ ಮೂರ್ತಿ ಇನ್ನಿತರರು ಇದ್ದರು.