ಮೈತ್ರಿ ಪಕ್ಷಗಳಿಗೆ ಈ ಚುನಾವಣೆ ಅಗ್ನಿ ಪರೀಕ್ಷೆ: ಮಾವಿನಮರದ

| Published : Apr 26 2024, 12:45 AM IST

ಸಾರಾಂಶ

ಈ ಸಲದ ಚುನಾವಣೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳಿಗೆ ಅಗ್ನಿಪರೀಕ್ಷೆ ಮತ್ತು ಪ್ರತಿಷ್ಠೆ ಕಣವಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಹೇಳಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಈ ಸಲದ ಚುನಾವಣೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳಿಗೆ ಅಗ್ನಿಪರೀಕ್ಷೆ ಮತ್ತು ಪ್ರತಿಷ್ಠೆ ಕಣವಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಹೇಳಿದರು.

ಪಟ್ಟಣದಲ್ಲಿ ಬುಧವಾರ ಸಂಜೆ ಜರುಗಿದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಗುಳೇದಗುಡ್ಡದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಲಾವಣೆಯಾದ 20 ಸಾವಿರ ಮತಗಳಲ್ಲಿ ಜೆಡಿಎಸ್ 8897, ಬಿಜೆಪಿ 6109 ಮತ ತೆಗೆದುಕೊಂಡರೆ, ಕಾಂಗ್ರೆಸ್‌ ಕೇವಲ 4024 ಮತ ಪಡೆದು ಮೂರನೇ ಸ್ಥಾನದಲ್ಲಿತ್ತು. ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳು ಸೇರಿ 15 ಸಾವಿರಕ್ಕೂ ಅಧಿಕ ಮತಗಳನ್ನು ಗದ್ದಿಗೌಡರ ಅವರಿಗೆ ಕೊಡುವ ಪ್ರತಿಜ್ಞೆ ಮಾಡಬೇಕಿದೆ. ಮೈತ್ರಿ ಪಕ್ಷಗಳು ಸೇರಿ 1 ಲಕ್ಷಕ್ಕೂ ಅಧಿಕ ಮತಗಳನ್ನು ಪಿ.ಸಿ. ಗದ್ದಿಗೌಡರ ಅವರಿಗೆ ನೀಡಿದರೆ ಸಾಕು, ಮೈತ್ರಿ ಆಗಿದ್ದಕ್ಕೂ ಗೌರವ ಬರುತ್ತದೆ. ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರು ನಮ್ಮ ಜವಾಬ್ದಾರಿ ಅರಿತು ಮತದಾರರ ಮನೆ, ಮನಗಳನ್ನು ತಲುಪಬೇಕು. ಮೋದಿಯವರು ದೇಶಕ್ಕೆ ಮಾಡಿದ ಸಾಧನೆಗಳನ್ನು ಮನವರಿಕೆ ಮಾಡಬೇಕು ಎಂದು ಮನವಿ ಮಾಡಿದರು.

ಸಭೆಯ ಆರಂಭದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಮಹಾಂತೇಶ ಮಮದಾಪೂರ, ಬಿ.ಪಿ. ಹಳ್ಳೂರ ಮಾತನಾಡಿದರು. ಮಾಜಿ ಶಾಸಕರಾದ ರಾಜಶೇಖರ ಶೀಲವಂತ, ಎಂ.ಕೆ. ಪಟ್ಟಣಶೆಟ್ಟಿ, ಮಂಡಲ ಅಧ್ಯಕ್ಷ ನಾಗರಾಜ ಕಾಚೆಟ್ಟಿ, ಮುಖಂಡರಾದ ರವೀಂದ್ರ ಪಟ್ಟಣಶೆಟ್ಟಿ, ಸಂಜು ಕಾರಕೂನ, ರಾಜು ಚಿತ್ತರಗಿ, ಪುರಸಭೆ ಸದಸ್ಯರಾದ ಪ್ರಶಾಂತ ಜವಳಿ, ಸಂತೋಷ ನಾಯನೇಗಲಿ, ಜೆಡಿಎಸ್ ತಾಲೂಕು ಅಧ್ಯಕ್ಷ ಬಾಲು ಹುನಗುಂದ, ಮಲ್ಲು ಹುನಗುಂಡ, ಲಕ್ಷ್ಮಣ ಹಾಲನ್ನವರ್, ಸಿದ್ದಣ್ಣ ಶಿವನಗುತ್ತಿ, ಶಿವನಗೌಡ ಸುಂಕದ, ವಸಂತ ದೊಂಗಡೆ, ಸಂಪತ್ ರಾಠಿ, ಪ್ರಕಾಶ ವಾಳದುಂಕಿ, ಸಂಗಮೇಶ ಹುನಗುಂದ, ರಾಮಚಂದ್ರ ಹಾನಾಪೂರ, ನಾಗರತ್ನಾ ಎಣ್ಣಿ, ಗೌರಮ್ಮ ಕಲಬುರ್ಗಿ, ಭುವನೇಶ ಪೂಜಾರಿ, ಮಂಗಳಾ ಪೂಜಾರಿ, ಭಾಗ್ಯಾ ಉದ್ನೂರ ವೇದಿಕೆ ಮೇಲಿದ್ದರು.