ಈ ಚುನಾವಣೆ ಸಂವಿಧಾನ ಅಳಿವು - ಉಳಿವಿನ ಪ್ರಶ್ನೆ

| Published : Apr 08 2024, 01:01 AM IST

ಸಾರಾಂಶ

ಈ ಲೋಕಸಭೆ ಚುನಾವಣೆ ಸಂವಿಧಾನ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಹೀಗಾಗಿ ಸಂವಿಧಾನ ಪರವಾಗಿರುವ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ, ಅಧಿಕಾರಕ್ಕೆ ತರುವಂತೆ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಈ ಲೋಕಸಭೆ ಚುನಾವಣೆ ಸಂವಿಧಾನ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಹೀಗಾಗಿ ಸಂವಿಧಾನ ಪರವಾಗಿರುವ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ, ಅಧಿಕಾರಕ್ಕೆ ತರುವಂತೆ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮನವಿ ಮಾಡಿದರು.

ನಗರದ ವರ್ತಕರ ಭವನದಲ್ಲಿ ನಡೆದ ಮಾದಿಗ ಸಮುದಾಯದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಸಂವಿಧಾನ ಆಶಯಗಳನ್ನು ಜಾರಿ ಮಾಡುವ ಕೆಲಸ ನಮ್ಮದಾಗಿದೆ. ನಿಮ್ಮ ಪರ ಧ್ವನಿ ಮಾಡುವ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ. ಈ ಚುನಾವಣಾ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಉಳಿಸುವ ಪ್ರಶ್ನೆ ಯಾಗಿದೆ ಎಂದರು. ನಾವೆಲ್ಲರು ಅಂಬೇಡ್ಕರ್ ಅನುಯಾಯಿಗಳು, ಎಡಕೈ, ಬಲಗೈ ಎಂಬ ಬೇಧಬಾವ ಇಲ್ಲ. ನಮ್ಮದು ಒಂದೇ ಕೈ ಅದು ಅಂಬೇಡ್ಕರ್ ಕೈ ಆಗಿದೆ. ಅಂಬೇಡ್ಕರ್ ಆಶಯದಂತೆ ಎಲ್ಲ ವರ್ಗದವರಿಗೂ ಸಾಮಾಜಿಕ ನ್ಯಾಯ ದೊರೆಬೇಕು ಎಂಬುವುದು ನಮ್ಮೆಲ್ಲರ ಒತ್ತಾಸೆಯಾಗಿದೆ. ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರ ಸಂವಿಧಾನದಡಿಯಲ್ಲಿ ನಂಬಿಕೆಯನ್ನುಟ್ಟುಕೊಂಡು ಕೆಲಸ ಮಾಡುತ್ತಿದೆ. ಆದರೆ, ಬಿಜೆಪಿ ಸಂವಿಧಾನ ವಿರುದ್ಧವಾಗಿದ್ದು, ಸಂವಿಧಾನ ಬದಲಾಯಿಸುವ ಮಾತುಗಳನ್ನಾಡುತ್ತಿದ್ದಾರೆ. ಇದರಿಂದ ಜಾಗೃತರಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ಸಂವಿಧಾನದ ಸಂರಕ್ಷಣೆಗೆ ನಿಲ್ಲಬೇಕು ಎಂದರು.

ಎಸ್‌ಇಪಿ, ಟಿಎಸ್‌ಪಿ ಕಾಯ್ದೆ ಸಂವಿಧಾನ ಪೂರಕವಾಗಿದ್ದು, ಇದನ್ನು ೨೦೧೩ರಲ್ಲಿ ಸಚಿವನಾಗಿದ್ದಾಗ ಆಂಜನೇಯ ಅವರ ಸಹಕಾರದೊಂದಿಗೆ ಜಾರಿ ಮಾಡಿದೆವು. ಇದರಿಂದ ದಲಿತರ ಕಾಲೋನಿಗಳು ಅಭಿವೃದ್ದಿಯಾದವು. ಇಡೀ ದೇಶದಲ್ಲಿ ಮೊಟ್ಟ ಮೊದಲ ಅಂಬೇಡ್ಕರ್ ಜಾಗೃತಿ ಜಾಥಾವನ್ನು ಆಯೋಜನೆ ಮಾಡಿದ್ದು, ನಮ್ಮ ಸರ್ಕಾರ. ಇದು ಇತರೇ ರಾಜ್ಯಗಳಿಗೆ ಮಾದರಿಯಾಗಿದೆ. ಇದರ ಉದ್ದೇಶ ಸಮುದಾಯಗಳು ಗಟ್ಟಿಯಾಗಬೇಕೆಂಬುದಾಗಿದೆ ಎಂದರು. ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ ಮಾತನಾಡಿ, ಕಾಂಗ್ರೆಸ್ ಪಕ್ಷದ ನುಡಿದಂತೆ ನಡೆದ ಪಕ್ಷವಾಗಿದೆ. ಐದು ಗ್ಯಾರಂಟಿಗಳನ್ನು ಜಾರಿ ಮಾಡುವ ಮೂಲಕ ಎಲ್ಲಾ ವರ್ಗದವರಿಗೆ ಸಾಮಾಜಿಕ ನ್ಯಾಯ ಕಲ್ಪಿಸಿದೆ. ಮಾದಿಗ ಸಮುದಾಯಕ್ಕೆ ಕಾಂಗ್ರೆಸ್ ಕೊಡುಗೆ ಅಪಾರವಾಗಿದೆ. ನಾನು ವಿಧಾನ ಪರಿಷತ್ ಸದಸ್ಯನಾಗಲು ಕಾಂಗ್ರೆಸ್ ಕಾರಣ. ಅದೇ ರೀತಿ ಬಹಳಷ್ಟು ಯೋಜನೆಗಳನ್ನು ಮಾದಿಗ ಸಮುದಾಯ ಅಭಿವೃದ್ದಿಗೆ ನೀಡಿದೆ. ಹೀಗಾಗಿ ಮಾದಿಗ ಸಮುದಾಯದವರು ಕಾಂಗ್ರೆಸ್ ಅಭ್ಯರ್ಥಿಯಾದ ಸಚಿವ ಎಚ್.ಸಿ. ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಅವರನ್ನು ಅತ್ಯಧಿಕ ಮತಗಳ ಅಂತರದಲ್ಲಿ ಗೆಲ್ಲಿಸಬೇಕೆಂದು ಮನವಿ ಮಾಡಿದರು. ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಬ್ಲಾಕ್ ಅಧ್ಯಕ್ಷರಾದ ಎ.ಎಸ್. ಗುರುಸ್ವಾಮಿ, ಮಹಮದ್ ಅಸ್ಗರ್, ಜಿಪಂ ಮಾಜಿ ಸದಸ್ಯ ಕೆ.ಪಿ. ಸದಾಶಿವಮೂರ್ತಿ, ರಾಜ್ಯ ಉಪಾಧ್ಯಕ್ಷ ಸಿ.ಎ. ಮಹದೇವಶೆಟ್ಟಿ, ಅಂಬೇಡ್ಕರ್ ಅಭಿವೃದ್ದಿ ನಿಮಗದ ಮಾಜಿ ನಿರ್ದೇಶಕ ಶಿವಮೂರ್ತಿ, ಮುಖಂಡರಾದ ಎಚ್.ಎಚ್. ನಾಗರಾಜು, ಎನ್. ವಿನೋದ್, ಗುಂಡ್ಲುಪೇಟೆ ದೇವರಾಜು, ಸೇವಾದಳದ ಜಿಲ್ಲಾದ್ಯಕ್ಷ ಹೊಂಗನೂರು ಜಯರಾಜ್, ಕೊಳ್ಳೇಗಾಲ ಬಾಲರಾಜು, ಸೋಮು, ಪಾಳ್ಯ ರಾಚಪ್ಪ, ಬೂದಬಾಳು ಮಹದೇವ್, ಸುರೇಶ್, ಹೂಗ್ಯಂ ಸಂಪತ್ತು, ವೀರಪ್ಪ, ಗುಂಡ್ಲುಪೇಟೆ ಪುರಸಭಾ ಮಾಜಿ ಅಧ್ಯಕ್ಷ ರಂಗಸ್ವಾಮಿ, ನಿಟ್ರೆ ಮಹದೇವ್, ಯಳಂದೂರು ರಾಜಣ್ಣ, ಬೂದಿತಿಟ್ಟು ಇತರರು ಇದ್ದರು.