ಸಾರಾಂಶ
- ಯಾವನೋ ಬಂದು ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂತ ಕೂಗಿದರೆ ಸಹಿಸಲು ಆಗುವುದಿಲ್ಲ
- ಈ ರೀತಿ ಘೋಷಣೆದವರಿಗೆ ನೇಣು ಇಲ್ಲ, ಗುಂಡು ಹಾರಿಸುವ ಕಾನೂನು ತರಬೇಕು- ಕೆಫೆಯಲ್ಲಿ ಬಾಂಬ್ ಸ್ಫೋಟ ಎಂದು ಬೊಬ್ಬೆ ಹೊಡೆಯುವ ಬಿಜೆಪಿಯವರು ಸಂಸತ್ತಿನಲ್ಲಿ ಪಾಸ್ ಕೊಟ್ಟವರದ್ದು ಏನ್ ಮಾಡಿದ್ರು?- - - ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪಾಕಿಸ್ತಾನ ಪರ ಘೋಷಣೆ ಹಾಕಿದವರಿಗೆ ಗುಂಡೇಟು ಹೊಡೆಯಬೇಕು. ಈ ವಿಚಾರದಲ್ಲಿ ಸರ್ಕಾರ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಈ ದೇಶ ಭಾರತೀಯರದು. ಯಾವನೋ ಬಂದು ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂತ ಕೂಗಿದರೆ ಸಹಿಸಲು ಆಗುವುದಿಲ್ಲ. ಸರ್ಕಾರ ಗಮನಿಸಿ ಆದಷ್ಟು ಬೇಗ ತನಿಖೆ ಆಗಬೇಕು. ಅಂತಹ ವ್ಯಕ್ತಿಗಳಿಗೆ ಕಾನೂನು ರೀತಿಯಲ್ಲಿ ಶಿಕ್ಷೆ ತರಬೇಕು. ಈ ರೀತಿ ಘೋಷಣೆದವರಿಗೆ ನೇಣು ಇಲ್ಲ, ಗುಂಡು ಹಾರಿಸುವ ಕಾನೂನು ತರಬೇಕು ಎಂದು ಹರಿಹಾಯ್ದರು.
ಸರ್ಕಾರಕ್ಕೆ ಕೆಟ್ಟ ಹೆಸರು ತರುವಂತಹ ಯಾವುದೇ ವ್ಯಕ್ತಿಯನ್ನು ಬಿಡಲ್ಲ. ಇದು ಸಿಲ್ಲಿ ಘಟನೆ ಅಲ್ಲ, ಶರಣ ಪ್ರಕಾಶ್ ಪಾಟೀಲ್ ಹೀಗೆ ಹೇಳೋದು ತಪ್ಪು. ಎನ್ಐಎ ಅವರಿಗಾದರೂ ಈ ಪ್ರಕರಣ ನೀಡಿ, ಆರೋಪಿಗಳನ್ನು ಕಂಡುಹಿಡಿಯಬೇಕು. ಯಾವನೇ ಆದ್ರೂ ಗಲ್ಲು ಶಿಕ್ಷೆ ನೀಡಬೇಕು ಎಂದರು.ಈಗ ಬಾಂಬ್ ಸ್ಫೋಟ ಎಂದು ಬೊಬ್ಬೆ ಹೊಡೆಯುವ ಬಿಜೆಪಿಯವರು ಸಂಸತ್ತಿನಲ್ಲಿ ಪಾಸ್ ಕೊಟ್ಟವರದ್ದು ಏನ್ ಮಾಡಿದ್ರೂ? ಅವಾಗ್ ಇವರು ದನ ಕಾಯುತ್ತಿದ್ದರಾ? ಅವರದ್ದು ಮುಚ್ಚಿಕೊಳ್ಳುತ್ತಾರೆ, ನಮ್ಮದನ್ನ ಮಾತ್ರ ಹೇಳುತ್ತಾರೆ. ಶೆಟ್ಟರ್ ಘರ್ ವಾಪ್ಸಿ ಆಗಿದ್ದಾರೆ. ನಮ್ಮ ಪಕ್ಷಕ್ಕೆ ಇನ್ನೂ ಜನ ಬರುವವರಿದ್ದಾರೆ. ಯಾರ್ಯಾರು ಬರುತ್ತಾರೆ ಎಂಬುದನ್ನು ಕಾದುನೋಡಿ ಎಂದು ಕುಟುಕಿದರು.
ಶರಾವತಿ ಮುಳುಗಡೆ ಸಂತ್ರಸ್ತರು ಹಿಂದಿನ ಸರ್ಕಾರದಿಂದ ಕೋರ್ಟ್‌ಗೆ ಹೋಗಬೇಕಾಯಿತು. ಜನರಿಗೆ ಸಾಕಷ್ಟು ಬೇಗ ಪರಿಹಾರ ನೀಡಬೇಕೆಂದು ನಮ್ಮ ಉದ್ದೇಶ. ಹೀಗಾಗಿ ಶರಾವತಿ ಸಂತ್ರಸ್ತರ ಸಭೆ ನಡೆಸಲಾಗುತ್ತಿದೆ. ಬೆಂಗಳೂರು ಸೇರಿದಂತೆ ಶಿವಮೊಗ್ಗದಲ್ಲೂ ಸಭೆ ನಡೆಸಲಾಗುತ್ತಿದೆ. ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಜಿಲ್ಲಾ ಮಂತ್ರಿಗಳು ಆಸಕ್ತಿಯನ್ನು ಹೊಂದಿದ್ದಾರೆ. ಆರ್ಡರ್ ಮಾಡಿಸಲು ಸಮಸ್ಯೆಗಳಿವೆ. ಹೀಗಾಗಿ, ಚರ್ಚೆ ನಡೆಸಲಾಗುತ್ತಿದೆ ಎಂದರು.- - - ಬಾಕ್ಸ್ ಈಡಿಗರ ಸಮಾವೇಶಕ್ಕೆ ಕರೆದಿದ್ದರೆ ಹೋಗ್ತಿದ್ದೆಸಾಗರದಲ್ಲಿ ನಡೆಯುತ್ತಿರುವ ಸಭೆ ಏನೂ ಈಡಿಗರು, ಹಿಂದುಳಿದವರ ಸಭೆ ಎಂದು ಹೇಳುತ್ತಿದ್ದಾರೆ. ಇದು ಒಂದು ಚುನಾವಣಾ ಗಿಮಿಕ್, ಯಡಿಯೂರಪ್ಪನವರಿಗೆ ಸನ್ಮಾನ ಮಾಡಲಿ. ಅದಕ್ಕೆ ನನ್ನ ಆಕ್ಷೇಪ ಇಲ್ಲ. ನನಗೆ ಕರೆದರೆ ಹೋಗುತ್ತಿದ್ದೆ. ಆದರೆ, ನನಗೆ ಆಹ್ವಾನ ಇಲ್ಲ. ಮಾಜಿ ಶಾಸಕರು ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಸನ್ಮಾನ ಮಾಡಲು ಹೊರಟಿದ್ದಾರೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ವ್ಯಂಗ್ಯವಾಡಿದರು.
ಕುಮಾರ್ ಬಂಗಾರಪ್ಪ ಅವರನ್ನು ಎಳೆಯಲು ನಾವು ನೋಡಿದ್ದೇವು, ಅಷ್ಟರಲ್ಲಿ ಯಡಿಯೂರಪ್ಪನವರು ಹಗ್ಗ ಹಾಕಿ ಎಳೆದುಕೊಂಡಿದ್ದಾರೆ. ಈಗ ಕುಮಾರ್ ಬಂಗಾರಪ್ಪ ಎರಡೂ ಕಡೆ ಇಲ್ಲ. ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಸಧ್ಯದಲ್ಲೇ ಬಿಡುಗಡೆ ಆಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.- - - -5ಎಸ್‌ಎಂಜಿಕೆಪಿ08: ಬೇಳೂರು ಗೋಪಾಲಕೃಷ್ಣ