ಕರ್ನಾಟಕದಲ್ಲಿ ಆಶ್ರಯ ಪಡೆದವರು ಕನ್ನಡ ಕಲಿತಿಲ್ಲ: ಟಿ.ಡಿ.ರಾಜೇಗೌಡ

| Published : Nov 03 2025, 02:03 AM IST

ಕರ್ನಾಟಕದಲ್ಲಿ ಆಶ್ರಯ ಪಡೆದವರು ಕನ್ನಡ ಕಲಿತಿಲ್ಲ: ಟಿ.ಡಿ.ರಾಜೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರಪ್ರಪಂಚದ ವಿವಿಧ ದೇಶಗಳಿಂದ ಬಂದ ಪರ ಭಾಷಿಗರಿಗೂ ಕರ್ನಾಟಕದಲ್ಲಿ ಆಶ್ರಯ ನೀಡಿದ್ದೇವೆ. ಆದರೆ, ನಮ್ಮ ರಾಜ್ಯಕ್ಕೆ ಬಂದವರು ಇನ್ನೂ ಕನ್ನಡ ಕಲಿತಿಲ್ಲ ಎಂದು ಶಾಸಕ ಟಿ.ಡಿ.ರಾಜೇಗೌಡ ಎಂದು ವಿಷಾದಿಸಿದರು.

- ಕುವೆಂಪು ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಪ್ರಪಂಚದ ವಿವಿಧ ದೇಶಗಳಿಂದ ಬಂದ ಪರ ಭಾಷಿಗರಿಗೂ ಕರ್ನಾಟಕದಲ್ಲಿ ಆಶ್ರಯ ನೀಡಿದ್ದೇವೆ. ಆದರೆ, ನಮ್ಮ ರಾಜ್ಯಕ್ಕೆ ಬಂದವರು ಇನ್ನೂ ಕನ್ನಡ ಕಲಿತಿಲ್ಲ ಎಂದು ಶಾಸಕ ಟಿ.ಡಿ.ರಾಜೇಗೌಡ ಎಂದು ವಿಷಾದಿಸಿದರು.

ಪಟ್ಟಣ ಕುವೆಂಪು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ಕನ್ನಡ ರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ ದೇವರಾಜ ಅರಸು ಮುಖ್ಯಮಂತ್ರಿ ಯಾಗಿದ್ದಾಗ ಮೈಸೂರು ರಾಜ್ಯಕ್ಕೆ ಕರ್ಣಾಟಕ ಎಂದು ನಾಮಕರಣ ಮಾಡಿದರು. ಈ ವರ್ಷ 50 ನೇ ವರ್ಷದ ಸಂಭ್ರಮಾ ಚರಣೆಯಲ್ಲಿದ್ದೇವೆ. ಕುವೆಂಪು ಬರೆದ ನಾಡಗೀತೆಗೆ 100 ವರ್ಷ ತುಂಬಿದೆ. ಕನ್ನಡ ಭಾಷೆಗೆ ದಕ್ಕೆ ಬಂದಾಗ ಲೆಲ್ಲಾ ಕನ್ನಡಪರ ಸಂಘಟನೆಗಳು, ಸಾಹಿತಿಗಳು, ಕಲಾವಿದರು ಬೀದಿಗಿಳಿದು ಹೋರಾಟ ಮಾಡಿದ್ದಾರೆ. ವರ ನಟ ಡಾ.ರಾಜಕುಮಾರ್ ಕನ್ನಡ ಭಾಷೆಗಾಗಿ ಗೋಕಾಕ್ ಚಳುವಳಿಯಲ್ಲಿ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ನಾನು ಸಹ ಗೋಕಾಕ್ ಹೋರಾಟದಲ್ಲಿ ಭಾಗವಹಿಸಿದ್ದೆ ಎಂದು ನೆನಪಿಸಿಕೊಂಡರು.

ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ವರ್ಷ ಕುವೆಂಪು ಬರೆದ ನಾಡ ಗೀತೆಗೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶಾಲಾ ಕಾಲೇಜುಗಳಲ್ಲಿ , ಸರ್ಕಾರಿ ಕಚೇರಿಗಳಲ್ಲಿ ಸಾಮೂಹಿಕ ನಾಡಗೀತೆ ಹಾಡಿಸಲು ಚಿಂತನೆ ನಡೆಸಲಾಗಿದೆ. ಅನೇಕ ನಗರ ಗಳಲ್ಲಿ ಅಂಗಡಿ, ಹೋಟೆಲ್ ಗಳಲ್ಲಿ ಇಂಗ್ಲೀಷ್ ನಾಮ ಫಲಕದಲ್ಲಿದೆ. ಅದನ್ನು ತೆಗೆದು ಕನ್ನಡ ನಾಮಫಲಕ ಹಾಕಬೇಕು. ಕನ್ನಡ ಸಮೃದ್ಧ ಭಾಷೆಯಾಗಿದ್ದು ಪ್ರತಿಯೊಬ್ಬರೂ ಕನ್ನಡದಲ್ಲೇ ಮಾತ ನಾಡಬೇಕು ಎಂದರು.

ಪಪಂ ಅಧ್ಯಕ್ಷೆ ಜುಬೇದಾ ಮಾತನಾಡಿ, ನಮ್ಮ ನಾಡು, ನುಡಿ ಪ್ರತೀಕವೇ ಕನ್ನಡ ರಾಜ್ಯೋತ್ಸವ. ನಮ್ಮ ರಾಜ್ಯದಲ್ಲಿ ಜಾತಿ, ಧರ್ಮದ ಬೇಧವಿಲ್ಲದೆ ಎಲ್ಲರೂ ಒಟ್ಟಾಗಿ ಏಕತೆಯಿಂದ ಬದುಕುತ್ತಿದ್ದೇವೆ. ಬೇರೆ ರಾಜ್ಯದಿಂದ ವಲಸೆ ಬಂದು ನಮ್ಮ ರಾಜ್ಯದಲ್ಲಿ ನೆಲೆಸಿರುವುವರು ಕನ್ನಡ ಕಡ್ಡಾಯವಾಗಿ ಕಲಿಯಬೇಕು ಎಂದು ಕರೆ ನೀಡಿದರು.

ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ ಮಾತನಾಡಿ, ಕನ್ನಡ ಎಂಬುದು ಕೇವಲ ಭಾಷೆಯಲ್ಲ. ಅದು ನಮ್ಮ ಅಸ್ಮಿತೆ. ರಾಜ್ಯಗಳ ಏಕೀಕರಣ ಸಂದರ್ಭದಲ್ಲಿ ಕನ್ನಡ ಸಾಹಿತಿಗಳು, ಜನ ಪ್ರತಿನಿಧಿಗಳು ಹಾಗೂ ಕಲಾವಿದರು ಸೇರಿದಂತೆ ಎಲ್ಲರ ಕೊಡುಗೆ ಇದೆ. ಇಲ್ಲಿನ ಕುವೆಂಪು ಕ್ರೀಡಾಂಗಣಕ್ಕೆ ಶಾಸಕರು ಅನುದಾನ ನೀಡಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಎಸ್‌.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಕನ್ನಡದಲ್ಲಿ ಪೂರ್ಣ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಲಾವಿದೆ ನಿಷ್ಮಾ ಜೈನ್ ಅವರನ್ನು ಸನ್ಮಾನಿಸಲಾಯಿತು.ಇದಕ್ಕೂ ಮೊದಲು ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಮೂಲಕ ಕುವೆಂಪು ಕ್ರೀಡಾಂಗಣಕ್ಕೆ ಬರಲಾಯಿತು. ಕಸಾಪದಿಂದ 100 ಮೀ. ಉದ್ದದ ಕನ್ನಡ ಬಾವುಟ ಮೆರವಣಿಗೆಯಲ್ಲಿ ತರಲಾಯಿತು.ಪೊಲೀಸ್, ಹೋಂ ಗಾರ್ಡ್ಸ್,ಶಾಲಾ ಮಕ್ಕಳಿಂದ ಪಥ ಸಂಚಲನ ನಡೆಯಿತು.

ತಹಸೀಲ್ದಾರ್ ಡಾ.ನೂರಲ್ ಹುದಾ ರಾಷ್ಟ್ರ ದ್ವಜಾರೋಹಣ ನೆರವೇರಿಸಿದರು. ಅತಿಥಿಗಳಾಗಿ ಪಪಂ ಉಪಾಧ್ಯಕ್ಷೆ ಉಮಾ ಕೇಶವ್, ಸದಸ್ಯೆ ಸುರೈಯಾಭಾನು, ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಹರ್ಷವರ್ದನ್, ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ, ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮ ಶ್ರೀನಿವಾಸ್, ತಾಪಂ ಇಒ ನವೀನ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ನಾಯಕ್, ಆರಕ್ಷಕ ವೃತ್ತ ನಿರೀಕ್ಷಕ ಗುರುದತ್ ಕಾಮತ್, ತಾ.ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್ ಇದ್ದರು.

- ಬಾಕ್ಸ್-

ಶಾಸಕ ಟಿ.ಡಿ.ರಾಜೇಗೌಡರು ತಮ್ಮ ಭಾಷಣದ ಮದ್ಯೆ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡು ಸೇರಿದಂತೆ 3 ಕನ್ನಡ ಸಿನಿಮದ ಚಿತ್ರಗೀತೆಗಳ ಸ್ವಲ್ಪ ಭಾಗವನ್ನು ಹಾಡಿ ರಂಜಿಸಿದರು.