ಸಹಕಾರಿ ಕ್ಷೇತ್ರದಲ್ಲಿ ಕೆಲಸವನ್ನು ಮಾಡುವವರಿಗೆ ಯಾವುದೇ ಗೌರವ ನೀಡುತ್ತಿಲ್ಲ.ಸಮಯ ಸಂದರ್ಭಕ್ಕೆ ತಕ್ಕಂತೆ ಕೃಷಿಕರಿಗೆ ಸಾಲವನ್ನು ನೀಡಬೇಕು.ಹೆಚ್ಚು ಸಹಕಾರ ಕ್ಷೇತ್ರದಲ್ಲಿ ಅಧ್ಯಯನವನ್ನು ಮಾಡಬೇಕು ಎಂದು ರಾಷ್ಟ್ರೀಯ ಕಾರ್ಯಕಾರಿ ಸದಸ್ಯ, ಸಹಕಾರ ಭಾರತಿ ಉಪಾಧ್ಯಕ್ಷ ಎಚ್.ಎಸ್.ಮಹೇಶ್ ಹೇಳಿದರು.

ಕನ್ನಡಪ್ರಭವಾರ್ತೆ ಜಗಳೂರು

ಸಹಕಾರಿ ಕ್ಷೇತ್ರದಲ್ಲಿ ಕೆಲಸವನ್ನು ಮಾಡುವವರಿಗೆ ಯಾವುದೇ ಗೌರವ ನೀಡುತ್ತಿಲ್ಲ.ಸಮಯ ಸಂದರ್ಭಕ್ಕೆ ತಕ್ಕಂತೆ ಕೃಷಿಕರಿಗೆ ಸಾಲವನ್ನು ನೀಡಬೇಕು.ಹೆಚ್ಚು ಸಹಕಾರ ಕ್ಷೇತ್ರದಲ್ಲಿ ಅಧ್ಯಯನವನ್ನು ಮಾಡಬೇಕು ಎಂದು ರಾಷ್ಟ್ರೀಯ ಕಾರ್ಯಕಾರಿ ಸದಸ್ಯ, ಸಹಕಾರ ಭಾರತಿ ಉಪಾಧ್ಯಕ್ಷ ಎಚ್.ಎಸ್.ಮಹೇಶ್ ಹೇಳಿದರು.

ಪಟ್ಟಣದ ವಿನಾಯಕ ಕನ್ವೆನ್ಷನ್ ಹಾಲ್ ಕೆನರಾ ಬ್ಯಾಂಕ್ ಮೇಲೆ ಸಹಕಾರ ಭಾರತಿ ಜಗಳೂರು ತಾಲೂಕು ಅಭ್ಯಾಸ ವರ್ಗದ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ತಾಲೂಕಿನಲ್ಲಿ ಇತಿಹಾಸದ ದಿನ ಎಂದು ಹೇಳಬಹುದು. 82 ಸಹಕಾರ ಸಂಘಗಳು ಇವೆ. ಸಹಕಾರ ಕ್ಷೇತ್ರ ನಿರಂತರವಾಗಿ ನಡೆಯಬೇಕು ಎನ್ನುವುದು ಇದರ ಉದ್ದೇಶ. ಇದಕ್ಕೆ ಯಾವುದೇ ಜಾತಿ ಭೇದ ಮತ ಇಲ್ಲ. ಇದು ರಾಷ್ಟ್ರೀಯ ಮಟ್ಟದ ಸಂಘಟನೆ. ಎಲ್ಲಾ ಸಹಕಾರಿ ಸಂಘಗಳು ನಾವು ಶಿಕ್ಷಣಕ್ಕೆ ಶೇ.2ರಷ್ಟು ಹಣವನ್ನು ನೀಡಲಾಗುವುದು ಎಂದರು.

ಉತ್ತಮವಾಗಿ ಕೆಲಸ ಮಾಡಿದ ಸಹಕಾರ ಸಂಘಗಳಿಗೆ ಅಭಿನಂದನೆಗಳನ್ನು ಸಲ್ಲಿಸಲಾಗುವುದು. ಕಾನೂನಿನ ಪರಿಮಿತಿಯೊಳಗೆ ಅಭ್ಯಾಸವನ್ನು ತಿಳಿದುಕೊಳ್ಳಬೇಕು. 1976ರಲ್ಲಿ ರಾಜ್ಯದ ಆರ್ಥಿಕ ಪ್ರಗತಿಯನ್ನು ಕಾಣಲು ಪತ್ತಿನ ಸಹಕಾರ ಸಂಘಗಳು ಉದಯ ಆಗುತ್ತವೆ. ನಿರ್ದೇಶಕರು ಸಹಕಾರ ಹಾಗೂ ಕಾನೂನು ಬಗ್ಗೆ ಅರಿವುಗಳನ್ನು ತಿಳಿದುಕೊಂಡಿರಬೇಕು. ಜೊತೆಗೆ ಹೋರಾಟವನ್ನು ಮಾಡಬೇಕು. ರಾಷ್ಟ್ರೀಯ ಮಂಡಳಿಗಳು ನಮ್ಮ ಜೊತೆ ಇವೆ. ಬದ್ಧತೆಯಿಂದ ಕೆಲಸ ಮಾಡಬೇಕು ಎಂದರು

ಪ್ರಾಂಶುಪಾಲ ಬಿ.ಎನ್.ಎಂ.ಸ್ವಾಮಿ ಮಾತನಾಡಿ, ಸಂಘ ಈ ವರ್ಷ ನೂರು ವರ್ಷಗಳ ಸಂಭ್ರಮಾಚರಣೆಯನ್ನು ಮಾಡುತ್ತಿದೆ. ನಾನು ಸೇರಿದಂತೆ ಕ್ಷೇತ್ರದಲ್ಲಿ ಬದಲಾವಣೆ ತರುವ ಕೆಲಸವನ್ನು ಮಾಡಬೇಕು.ಸಹಕಾರಿ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ.ನಮ್ಮ ತಾಲೂಕಿನ ಸಹಕಾರ ಕ್ಷೇತ್ರ ಬಹಳ ಬೆಳೆದಿದೆ.ಸಂಘ ನೂರು ವರ್ಷದಲ್ಲಿ ಯಾವ ರೀತಿ ನಡೆದುಕೊಂಡು ಬಂದಿದೆ ಅನ್ನುವುದಕ್ಕೆ ಕಾರಣ ಪಂಚಸೂತ್ರಗಳು ನಾವು ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಇ.ಎನ್. ಪ್ರಕಾಶ್, ಎಚ್ ಇಂದ್ರಪ್ಪ, ಡಾ ಜಿ ಎಸ್ ವೇಣುಗೋಪಾಲ ರೆಡ್ಡಿ, ಬಿ.ಎಚ್. ಪುಷ್ಪಾವತಿ, ಎಸ್ ಎಂ ಶಿವಕುಮಾರಸ್ವಾಮಿ, ಡಾ.ಎಚ್ಎಸ್ ಮಂಜುನಾಥ್ ಕುರ್ಕಿ, ಪಿ.ರವಿ, ಕೆ.ಜಿ.ಸಂತೋಷ್, ಡಿ.ಎಂ.ಶಿವಕುಮಾರ್, ಪ್ರಮೋದ್‌ಕುಮಾರ್, ಎಚ್ ಕೆ ಪಾಲಾಕ್ಷಪ್ಪ, ಐನಹಳ್ಳಿ ಶುಭಾ, ಗಡಿಮಾಕುಂಟೆ ಸಿದ್ದೇಶ್, ರಘು ಜಾಗ್ವಾರ್, ಸಹಕಾರ ಭಾರತಿ ಸಂಘದ ನಿರ್ದೇಶಕರು, ಸದಸ್ಯರು ಹಾಜರಿದ್ದರು.