Three arrested for illegally transporting 10 cattle.
ತೀರ್ಥಹಳ್ಳಿ: ಮಂಗಳೂರಿನ ಕಸಾಯಿಖಾನೆಗೆ ಅಕ್ರಮವಾಗಿ ಪಿಕ್ ಅಪ್ ವಾಹನದಲ್ಲಿ ಸಾಗಿಸುತ್ತಿದ್ದ 10 ಜಾನುವಾರುಗಳ ಸಹಿತ ಮೂವರು ಆರೋಪಿಗಳನ್ನು ಪಟ್ಟಣದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗುರುವಾರ ರಾತ್ರಿ ಆರಗ ಸಮೀಪದ ಕಲ್ಲುಗುಂಡಿ ಗ್ರಾಮದಲ್ಲಿ ಸಾರ್ವಜನಿಕರು ನೀಡಿದ ಖಚಿತ ಮಾಹಿತಿಯ ಮೇಲೆ ದಾಳಿ ನಡೆಸಿದ ಪೊಲೀಸರು ಪಿಕ್ ಅಪ್ ವಾಹನ ಸಹಿತ ಪ್ರಮುಖ ಆರೋಪಿ ಮಲ್ಲೇಸರ ಸಮೀಪದ ಬೊಂಬಳಿಗೆ ಗಿರೀಶ್ ಶೆಟ್ಟಿ ಮತ್ತು ಆತನ ಮಗ ಶಮಂತ್ ಹಾಗೂ ಚಾಲಕ ಇಲಿಯಾಸ್‍ನನ್ನು ಬಂಧಿಸಿದ್ದಾರೆ. ಹರ್ಷ, ನದೀಂ ಮತ್ತು ಮುತ್ತಾ ಎಂಬುವರು ತಲೆ ತಪ್ಪಿಸಿಕೊಂಡಿದ್ದಾರೆ.10 ಜಾನುವಾರುಗಳಲ್ಲಿ ಒಂದು ಎಮ್ಮೆಯೂ ಇದ್ದು ಇವುಗಳನ್ನು ಅಮಾನವೀಯವಾಗಿ ಪಿಕ್ ಅಪ್ ವಾಹನದಲ್ಲಿ ತುಂಬಿಸಲಾಗಿತ್ತು. ಒಂದು ಹಸು ಸಾಯುವ ಸ್ಥಿತಿಯಲ್ಲಿದೆ. ನೊಣಬೂರು ಮಲ್ಲೇಸರ ಈ ಭಾಗದ ಗ್ರಾಮಸ್ಥರ ಆರೋಪದಂತೆ ನಿರಂತರವಾಗಿ ಕನಿಷ್ಠ ಪ್ರತಿ ವಾರಕ್ಕೊಮ್ಮೆ ಜಾನುವಾರುಗಳನ್ನು ಸಾಗಣೆ ಮಾಡಲಾಗುತ್ತಿದೆ. ಕೆಲವು ವ್ಯಕ್ತಿಗಳು ಬೀದಿ ಬದಿಯಲ್ಲಿ ಮಲಗಿರುವ ಹಾಗೂ ಬೀಡಾಡಿ ಜಾನುವಾರುಗಳನ್ನು ಒಟ್ಟಗೂಡಿಸಿ ಕರಾವಳಿ ಭಾಗಕ್ಕೆ ಸಾಗಿಸುವ ದಂಧೆಯಲ್ಲಿ ನಿರತರಾಗಿದ್ದಾರೆ ಎಂದೂ ಆರೋಪಿಸಿದ್ದಾರೆ.
-------------------ಫೋಟೋ 11 ಟಿಟಿಎಚ್ 04:
ತೀರ್ಥಹಳ್ಳಿ ಪಟ್ಟಣದ ಪೊಲೀಸರು ವಶಪಡಿಸಿಕೊಂಡಿರುವ ಕಸಾಯಿಖಾನೆಗೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಪಿಕ್ ಅಪ್ ವಾಹನ.