ಸಾರಾಂಶ
three cheeters arrested in chitraduga
ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಕಡಿಮೆ ಬೆಲೆಗೆ ಚಿನ್ನ ಕೊಡುವುದಾಗಿ ಹೇಳಿದ್ದ ವಂಚಕರ ಜಾಲ ಬೇಧಿಸಿದ ಚಿಕ್ಕಜಾಜೂರು ಪೊಲೀಸರು ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ.ಕಡಿಮೆ ಬೆಲೆಗೆ ಚಿನ್ನ ಕೊಡುವುದಾಗಿ ನಂಬಿಸಿ ಹೈದ್ರಾಬಾದ್ ನ ಜಗದೀಶ್ ಮತ್ತಿಬ್ಬರಿಗೆ ವಂಚಿಸಿದ್ದರು. 25 ಲಕ್ಷ ರುಪಾಯಿಗೆ ಕೆಜಿ ಚಿನ್ನ ಕೊಡುವುದಾಗಿ ಹೇಳಿದ್ದರು. ಅದರಂತೆ ಹೊಳಲ್ಕೆರೆ ತಾಲೂಕಿನ ಸಾಸಲು ಹಳ್ಳದ ಬಳಿ 54 ಲಕ್ಷ ರುಪಾಯಿ ಹಣ ಪಡೆದು ಎಸ್ಕೇಪ್ ಆಗಿದ್ದರು. ಈ ಸಂಬಂಧ ಚಿಕ್ಕಜಾಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ಬೇಧಿಸಲು ಪಿಎಸ್ಐ ಎಂ.ಟಿ ದೀಪು ಹಾಗೂ ಸಚಿನ್ ಪಟೇಲ್ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, ದಾವಣಗೆರೆ ಜಿಲ್ಲೆ ಚನ್ನಗಿರಿ ಮೂಲದ 3 ಆರೋಪಿಗಳ ಬಂಧಿಸಿ ಅವರಿಂದ 47.18 ಲಕ್ಷ ರು. ವಶಪಡಿಸಿಕೊಂಡಿದ್ದಾರೆ. ಚನ್ನಗಿರಿ ಮೂಲದ ಪರಶುರಾಂ, ರುದ್ರಪ್ಪ, ಧರ್ಮಪ್ಪ ಬಂಧಿತರು.-----------