ಟ್ರ್ಯಾಕ್ಟರ್‌ಗೆ ಟ್ಯಾಂಕರ್‌ ಡಿಕ್ಕಿ: ಮೂವರ ಸಾವು

| Published : Sep 21 2025, 02:03 AM IST

ಸಾರಾಂಶ

ಕೆರೂರ ಸಮೀಪದ ಯರಗೊಪ್ಪ ಗ್ರಾಮದ ಹತ್ತಿರ ಹುಬ್ಬಳ್ಳಿ ಸೊಲ್ಲಾಪೂರ ಹೆದ್ದಾರಿಯಲ್ಲಿ ಟ್ರ್ಯಾಕ್ಟರ್‌ಗೆ ಟ್ಯಾಂಕರ್‌ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶನಿವಾರ ರಾತ್ರಿ ನಡೆದಿದೆ.

ಕನ್ನಡಪ್ರಭ ವಾರ್ತೆ ಕೆರೂರ

ಸಮೀಪದ ಯರಗೊಪ್ಪ ಗ್ರಾಮದ ಹತ್ತಿರ ಹುಬ್ಬಳ್ಳಿ ಸೋಲ್ಲಾಪೂರ ಹೆದ್ದಾರಿಯಲ್ಲಿ ಟ್ರ್ಯಾಕ್ಟರ್‌ಗೆ ಟ್ಯಾಂಕರ್‌ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶನಿವಾರ ರಾತ್ರಿ ನಡೆದಿದೆ.

ಇನಾಂಹೂಲಗೇರಿ ಗ್ರಾಮದ ಗದಿಗೆಪ್ಪ ಯಲ್ಲಪ್ಪ ಹೊಸಮನಿ (54), ಯಂಕಪ್ಪ ಹನುಮಂತ ತೋಗುಣಶಿ (55), ಕ್ಯಾಂಟರ್‌ ಚಾಲಕ ಚಾಲಕ ನಂದಿಕೇಶ್ವರ ಗ್ರಾಮದ ಸಂಜು ಮಲ್ಲಪ್ಪ ಶಿರೂರ (32) ಮೃತರು.

ಇನಾಂಹೂಲಗೇರಿ ಗ್ರಾಮದಿಂದ ಕೆರೂರ ಕಡೆ ಬರುತ್ತಿದ್ದ ಟ್ಯ್ರಾಕ್ಟರ್ ಗೆ ಹಿಂದಿನಿಂದ ಟ್ಯಾಂಕರ್‌ ಲಾರಿ ಗುದ್ದಿದ ರಸಭಸಕ್ಕೆ ಟ್ರ್ಯಾಕ್ಟರ್ ಟ್ರೈಲರ್‌ ಮೇಲೆ ಕುಳಿತಿದ್ದ ಕಾರ್ಮಿಕರಾದ ಗದಿಗೆಪ್ಪ, ಯಂಕಪ್ಪ ಕೆಳಗೆ ಬಿದ್ದು, ಚಕ್ರದಡಿ ಸಿಲುಕಿ ಮೃತಪಟ್ಟರೆ, ಟ್ಯಾಂಕರ್‌ ಚಾಲಕ ಸಂಜು ತಲೆಗೆ ಪೆಟ್ಟಾಗಿ ಅಸುನೀಗಿದ್ದಾರೆ.

ರಬಕವಿ ಠಾಣೆ ಪಿಎಸ್‌ಐ ಭೀಮಪ್ಪ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಗಲಕೋಟೆ ಎಸ್ಪಿ ಸಿದ್ದಾರ್ಥ ಗೋಯಲ್‌, ಹೆಚ್ಚುವರಿ ಎಸ್ಪಿ ಮಹಾಂತೇಶ್ವರ ಜಿದ್ದಿ, ಡಿಎಸ್ಪಿ ವಿಶ್ವನಾಥರಾವ್‌ ಕುಲಕರ್ಣಿ, ಸಿಪಿಐ ಕರಿಯಪ್ಪ ಬನ್ನೆ ಘಟನಾ ಸ್ಥಳಕ್ಕೆ ಭೆಟ್ಟಿ ನೀಡಿ ಪರಿಶೀಲನೆ ನಡೆಸಿದರು.