ಪ್ಲಾಸ್ಟಿಕ್ ತ್ಯಾಜ್ಯ ಎಸೆಯುವುದು ಅಪಾಯಕಾರಿ: ನ್ಯಾ. ಶಿವಣ್ಣ ಎಚ್.ಆರ್.

| Published : Sep 26 2025, 01:02 AM IST

ಪ್ಲಾಸ್ಟಿಕ್ ತ್ಯಾಜ್ಯ ಎಸೆಯುವುದು ಅಪಾಯಕಾರಿ: ನ್ಯಾ. ಶಿವಣ್ಣ ಎಚ್.ಆರ್.
Share this Article
  • FB
  • TW
  • Linkdin
  • Email

ಸಾರಾಂಶ

ಗಾಂಧೀ ಜಯಂತಿ ದಿನಾಚರಣೆಯ ಅಂಗವಾಗಿ ಆರ್ಯಾಪು ಗ್ರಾ.ಪಂನಲ್ಲಿ ಸ್ವಚ್ಚತಾ-ಹಿ-ಸೇವಾ ಕಾರ್ಯಕ್ರಮ ನೆರವೇರಿತು.

ಪುತ್ತೂರು: ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುವುದು ಭವಿಷ್ಯದಲ್ಲಿ ಬಹಳಷ್ಟು ಅಪಾಯಕಾರಿಯಾಗಿದ್ದು, ಸ್ವಚ್ಚತೆ ಕಾಪಾಡುವುದು ನಮ್ಮ ಕೆಲಸವಲ್ಲ ಎಂಬ ಭಾವನೆ ಸಲ್ಲದು. ನಮ್ಮ ಮನೆ, ನಮ್ಮ ಪರಿಸರ, ನಮ್ಮ ಹಳ್ಳಿ ನಗರಗಳಲ್ಲಿ ಸ್ವಚ್ಚತೆ ಕಾಪಾಡುವ ಮೂಲಕ ಇತರರಿಗೂ ಜಾಗೃತಿ ಹಾಗೂ ಪ್ರೇರಣೆ ನೀಡುವ ಕೆಲಸವನ್ನು ನಾವು ಮಾಡಬೇಕು. ನಮ್ಮ ನಗರದ ಸ್ವಚ್ಚತೆ ಕಂಡು ಹೊರಗಿನವರಿಗೆ ಕಸ ಎಸೆಯಲು ಭಯ ಪಡುವಷ್ಟು ಸ್ವಚ್ಚತೆಯಿರಬೇಕು ಎಂದು ಹೆಚ್ಚುವರಿ ವ್ಯವಹಾರಿಕ ನ್ಯಾಯಮೂರ್ತಿ ಶಿವಣ್ಣ ಎಚ್.ಆರ್. ಹೇಳಿದ್ದಾರೆ.ಜಿಲ್ಲಾ ಕಾನೂನು ಸೇವೆಗಳ ಪ್ರಾಧೀಕಾರ ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಪುತ್ತೂರು ಹಾಗೂ ಆರ್ಯಾಪು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಗಾಂಧೀ ಜಯಂತಿ ದಿನಾಚರಣೆಯ ಅಂಗವಾಗಿ ಆರ್ಯಾಪು ಗ್ರಾ.ಪಂನಲ್ಲಿ ನಡೆದ ಸ್ವಚ್ಚತಾ-ಹಿ-ಸೇವಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತಾ.ಪಂ ಮಾಜಿ ಅಧ್ಯಕ್ಷ, ಸಂಪ್ಯ ನವದುರ್ಗರಾಧನಾ ಸಮಿತಿ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್ ಮಾತನಾಡಿ, ತ್ಯಾಜ್ಯ ಎಸೆಯುವವರು ಯಾರೂ ಅವಿದ್ಯಾವಂತರಲ್ಲ. ನಮ್ಮಲ್ಲಿರುವ ತ್ಯಾಜ್ಯವನ್ನು ಎಲ್ಲಿಯೂ ಬಿಸಾಡುವುದಿಲ್ಲ ಎಂಬ ಮನೋಭಾರ ಎಲ್ಲರಲ್ಲಿಯೂ ಬರಬೇಕು ಎಂದರು.ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ ಮಾತನಾಡಿ, ಕಾನೂನು ಮಾಹಿತಿ ಪ್ರತಿಯೊಬ್ಬರಿಗೂ ತಿಳಿದಿರಬೇಕು. ಕಾನೂನಿನ ಮಾಹಿತಿ ಇಲ್ಲದಿರುವುದು ಅಪರಾದ. ಅದರಂತೆ ಸ್ವಚ್ಚತೆಯ ಬಗ್ಗೆಯೂ ಎಲ್ಲರಿಗೂ ಅರಿವಿರಬೇಕು ಎಂದರು.

ಆರ್ಯಾಪು ಗ್ರಾಪಂ ಅಧ್ಯಕ್ಷೆ ಗೀತಾ ಅಧ್ಯಕ್ಷತೆ ವಹಿಸಿದ್ದರು.

ಪುತ್ತೂರು ವಕೀಲರ ಸಂಘದ ಜೊತೆ ಕಾರ್ಯದರ್ಶಿ ಮಮತಾ ಸುವರ್ಣ, ಕಾರ್ಯಕ್ರಮದ ಸಂಯೋಜಕಿ ಜ್ಯೋತಿ, ಆರ್ಯಾಪು ಗ್ರಾ.ಪಂ. ಸದಸ್ಯರಾದ ನೇಮಾಕ್ಷ ಸುವರ್ಣ, ಹರೀಶ್ ನಾಯಕ್, ಯಾಕೂಬ್ ಯಾನೆ ಸುಲೈಮಾನ್, ಸಾಮಾಜಿಕ ಕಾರ್ಯಕರ್ತ ಕೇಶವ ಸುವರ್ಣ, ಗಿರೀಶ್ ರೈ ಮೂಲೆ ಮತ್ತಿತರರಿದ್ದರು.

ಆರ್ಯಾಪು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ನಾಗೇಶ್ ಸ್ವಾಗತಿಸಿದರು. ಕಾರ್ಯದರ್ಶಿ ಮೋನಪ್ಪ ವಂದಿಸಿದರು. ವಕೀಲರ ಸಂಘದ ಉಪಾಧ್ಯಕ್ಷ ಮೋನಪ್ಪ ನಿರೂಪಿಸಿದರು.