ಹುಲಿ ಉಗುರು ಪ್ರಕರಣ: ಸರ್ಕಾರಕ್ಕೆ ಕಿಮ್ಮನೆ ರತ್ನಾಕರ್ ಪತ್ರ
KannadaprabhaNewsNetwork | Published : Oct 29 2023, 01:00 AM IST
ಹುಲಿ ಉಗುರು ಪ್ರಕರಣ: ಸರ್ಕಾರಕ್ಕೆ ಕಿಮ್ಮನೆ ರತ್ನಾಕರ್ ಪತ್ರ
ಸಾರಾಂಶ
ತಾತ್ಕಾಲಿಕ ಸುಗ್ರೀವಾಜ್ಞೆ ಮೂಲಕ ಅವಕಾಶ ನೀಡುವುದು ಸೂಕ್ತ
ತೀರ್ಥಹಳ್ಳಿ: ಹುಲಿ ಉಗುರು ಸಮಸ್ಯೆ ಕುರಿತಂತೆ ಅರಣ್ಯ ಕಾಯ್ದೆಗೆ ಸರ್ಕಾರ ತಾತ್ಕಾಲಿಕ ತಡೆ ತರಬೇಕಾದ ಅಗತ್ಯವಿದೆ. ಇಲ್ಲವಾದಲ್ಲಿ ಜನರು ಕಾಯ್ದೆಗೆ ಹೆದರಿ, ಅಮೂಲ್ಯವಾದ ಸಂಗ್ರಹಗಳನ್ನು ನಾಶಪಡಿಸುವ ಸಾಧ್ಯತೆ ಇದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮುಖ್ಯಮಂತ್ರಿ ಅವರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ. ಈ ದೇಶದಲ್ಲಿ ಅನೇಕ ಅನುಪಯುಕ್ತ ಕಾಯ್ದೆಗಳು ಜನಮಾನಸಕ್ಕೆ ಬಾರದೇ ಜೀವಂತವಾಗಿವೆ. ಕಾನೂನಿನ ಅಜ್ಞಾನ ಕ್ಷಮಾರ್ಹವಲ್ಲ. ಆದರೆ, ಅದಕ್ಕೆ ಪೂರಕವಾದ ತಿದ್ದುಪಡಿ ಅಗತ್ಯ. ಹುಲಿ ಉಗುರು ಮತ್ತು ಇತರೆ ಪ್ರಾಣಿಗಳಿಗೆ ಸಂಬಂಧಪಟ್ಟಂತೆ ಜನರು ಕಾನೂನುಬಾಹಿರವಾಗಿ ವಸ್ತುಗಳನ್ನು ಸಂಗ್ರಹಿಸಿದ್ದಾರೆ. ಈ ವಸ್ತುಗಳನ್ನು ಸರ್ಕಾರಕ್ಕೆ ಹಸ್ತಾಂತರ ಮಾಡುವಂತೆ ಕಾಲಾವಕಾಶ ನೀಡುವ ಸಲುವಾಗಿ, ತಾತ್ಕಾಲಿಕ ಸುಗ್ರೀವಾಜ್ಞೆ ಮೂಲಕ ಅವಕಾಶ ನೀಡುವುದು ಸೂಕ್ತ ಎಂದು ಕಿಮ್ಮನೆ ರತ್ನಾಕರ್ ಮನವಿ ಮಾಡಿದ್ದಾರೆ.