ಸಾರಾಂಶ
ಬಾಳೆಹೊನ್ನೂರು, ಬೆಂಗಳೂರಿನಿಂದ ಶೃಂಗೇರಿಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದರ ಟಯರ್ ಚಲಿಸುತ್ತಿರುವಾಗಲೇ ಕಳಚಿ ಬಿದ್ದು ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ನಡೆದಿದೆ.
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಬೆಂಗಳೂರಿನಿಂದ ಶೃಂಗೇರಿಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದರ ಟಯರ್ ಚಲಿಸುತ್ತಿರುವಾಗಲೇ ಕಳಚಿ ಬಿದ್ದು ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ನಡೆದಿದೆ.ಬೆಂಗಳೂರಿನಿಂದ ಶೃಂಗೇರಿಗೆ ತೆರಳುತ್ತಿದ್ದ ಖಾಸಗಿ ಬಸ್ಸು ಬುಧವಾರ ಬೆಳಗ್ಗೆ 5 ಗಂಟೆ ವೇಳೆಗೆ ಪಟ್ಟಣದ ರೋಟರಿ ವೃತ್ತದ ಸಮೀಪದಲ್ಲಿ ಬರುತ್ತಿದ್ದಾಗ ಬಸ್ಸಿನ ಹಿಂಬದಿ ಚಕ್ರದ ಆಕ್ಸೆಲ್ ತುಂಡಾಗಿ ಹಿಂಬದಿಯ ಎರಡು ಚಕ್ರಗಳು ಕಳಚಿ ಬಸ್ಸು ರಸ್ತೆ ಮದ್ಯದಲ್ಲಿ ಜಖಂಗೊಂಡು ನಿಂತಿದೆ.ಬೆಂಗಳೂರಿನಿಂದ ಶೃಂಗೇರಿ, ಬಾಳೆಹೊನ್ನೂರು, ಜಯಪುರ ಸೇರಿದಂತೆ ವಿವಿಧ ಕಡೆಗಳಿಗೆ ತೆರಳುತ್ತಿದ್ದ 24 ಪ್ರಯಾಣಿಕರು ಬಸ್ಸಿನಲ್ಲಿದ್ದು, ಯಾವುದೇ ಪ್ರಯಾಣಿಕರಿಗೆ ಏನೂ ತೊಂದರೆಯಾಗಿಲ್ಲ. ಪ್ರಯಾಣಿಕರನ್ನು ಬೇರೆ ಬಸ್ಸಿನ ಮೂಲಕ ಅವರ ಊರುಗಳಿಗೆ ತಲುಪಿಸಲಾಯಿತು.ಸ್ಥಳಕ್ಕೆ ಬಾಳೆಹೊನ್ನೂರು ಪಿಎಸ್‌ಐ ರವೀಶ್ ಭೇಟಿ ನೀಡಿ ಪರಿಶೀಲಿಸಿದ್ದು, ಬಸ್ಸು ಮಧ್ಯ ದಾರಿಯಲ್ಲಿ ಜಖಂಗೊಂಡು ನಿಂತಿದ್ದ ಕಾರಣ ಐಎಂವಿ ಕಾಯ್ದೆಯಡಿ ಬಸ್ಸಿನ ಚಾಲಕನ ಉದಯ್ ಎಂಬಾತನನ್ನು ಠಾಣೆಗೆ ಕರೆಯಿಸಿ ಅಜಾಗರೂಕತೆಯ ಚಾಲನೆ ಯಡಿ ಲಘು ಪ್ರಕರಣ ದಾಖಲಿಸಲಾಗಿದೆ. ಮಧ್ಯಾಹ್ನ ವೇಳೆಗೆ ಬಸ್ಸನ್ನು ದುರಸ್ತಿಗೊಳಿಸಿ ಶೃಂಗೇರಿಗೆ ಕೊಂಡೊಯ್ಯಲಾಯಿತು.