ಧರ್ಮದ ಹಾದಿಯಲ್ಲಿ ಮುನ್ನಡೆಯಬೇಕು: ಜೈನ ಮುನಿಗಳು

| Published : Dec 19 2023, 01:45 AM IST / Updated: Dec 19 2023, 01:46 AM IST

ಸಾರಾಂಶ

ಗದಗ ನಗರದ ಪಾರ್ಶ್ವನಾಥ ಜೈನ ದೇವಸ್ಥಾನದ ಸಭಾಂಗಣದಲ್ಲಿ ಸೋಮವಾರ ಜೈನ್ ಧರ್ಮದ ದೀಕ್ಷಾರ್ಥಿಗಳ (ಮುಮುಕ್ಷಗಳು)ಅನುಮೋದನೆ ಸಮಾರಂಭದಲ್ಲಿ ಜೈನ ಮುನಿಗಳಾದ ಪೂಜ್ಯ ಕೇಶರ ಸುರೀಶ್‌ವರ್ಜಿ ಎಂ.ಎಸ್. ಧರ್ಮೋಪದೇಶದ ಪ್ರವಚನ ನೀಡಿದರು.

ಜೈನ್ ಧರ್ಮದ ದೀಕ್ಷಾರ್ಥಿಗಳ ಅನುಮೋದನೆ ಸಮಾರಂಭ

ಗದಗ: ಸರ್ವ ಜನತೆ ಶಾಂತಿ, ನೆಮ್ಮದಿ ಹಾಗೂ ಸಂಯಮದಿಂದ ಜೀವನ ಮಾಡಬೇಕು. ಅಹಿಂಸೆ ಬೇಡ ಶಾಂತಿ, ಸನ್ಮಾರ್ಗದಿಂದ ಕಾಯಕ ಮಾಡಬೇಕು, ಧರ್ಮದ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಜೈನ ಮುನಿಗಳಾದ ಪೂಜ್ಯ ಕೇಶರ ಸುರೀಶ್‌ವರ್ಜಿ ಎಂ.ಎಸ್. ಹೇಳಿದರು.

ನಗರದ ಪಾರ್ಶ್ವನಾಥ ಜೈನ ದೇವಸ್ಥಾನದ ಸಭಾಂಗಣದಲ್ಲಿ ಸೋಮವಾರ ಜೈನ್ ಧರ್ಮದ ದೀಕ್ಷಾರ್ಥಿಗಳ (ಮುಮುಕ್ಷಗಳು)ಅನುಮೋದನೆ ಸಮಾರಂಭದಲ್ಲಿ ಧರ್ಮೋಪದೇಶದ ಪ್ರವಚನದಲ್ಲಿ ಅವರು ಮಾತನಾಡಿದರು.

ಜೈನ ಧರ್ಮದಲ್ಲಿ ಸನ್ಯಾಸ ದೀಕ್ಷೆ ಮಹತ್ವದ್ದಾಗಿದೆ. ಆಸ್ತಿ, ಅಂತಸ್ತು ಸಂಸಾರವನ್ನು, ಐಷಾರಾಮಿ ಜೀವನವನ್ನು ತ್ಯಜಿಸಿ ಲೋಕ ಕಲ್ಯಾಣಾರ್ಥವಾಗಿ ಧರ್ಮ ಗುರು, ಮುನಿಗಳಿಂದ ದೀಕ್ಷೆ ಪಡೆದು ಲೋಕ ಸಂಚಾರ ಮಾಡುತ್ತ ಧರ್ಮ ಪ್ರಚಾರ, ಭಕ್ತರಿಗೆ ಬೋಧನೆ ಮಾಡುವುದಾಗಿದೆ ಎಂದರು.

ಜೈನ್ ಧರ್ಮ, ತತ್ವ ಸಿದ್ಧಾತಗಳಿಂದ ಪ್ರೇರೇಪಿತರಾಗಿ ಸರ್ವಸ್ವವನ್ನು ತ್ಯಾಗ ಮಾಡಿ ಸನ್ಯಾಸ ದೀಕ್ಷೆ ಪಡೆಯಲು ಕುಟುಂಬದವರ ಅನುಮತಿಯೊಂದಿಗೆ ಮುಂದಾಗಿರುವ ಮುಮುಕ್ಷಗಳು ಧರ್ಮ ಕಾರ್ಯ ಕೈಗೊಂಡು ಭಕ್ತರಿಗೆ ಧರ್ಮೋದೇಶ ಮಾಡಲಿ ಧರ್ಮ ಪ್ರಚಾರಕ್ಕಾಗಿ ಬಿಟ್ಟು ಕೊಟ್ಟ ಇವರ ಪಾಲಕರ ತ್ಯಾಗವೂ ಸಹ ದೊಡ್ಡದು ಎಂದರು.

ಲಲಿತಕುಮಾರ ಮತ್ತು ಜಯಶ್ರೀ ಕೊಠಾರಿ ದಂಪತಿ ಪುತ್ರ ರುನಾಲಕುಮಾರ ಹಾಗೂ ಈಶ್ವರಚಂದ ಮತ್ತು ಸಾರಿಕಾ ಪರಮಾರ ದಂಪತಿ ಪುತ್ರ ವಿನಿತಕುಮಾರ ದೀಕ್ಷಾರ್ಥಿಗಳಾಗಿದ್ದು, ರುನಾಲಕುಮಾರ ಅವರ ಸಹೋದರ ಚೇತನ್ ಈಗಾಗಲೇ ದೀಕ್ಷೆ ಪಡೆದು ಪೂಜ್ಯ ಮುನಿರಾಜ ಆನಂದಶೇಖರ ವಿಜಯಾಜಿ ಮಹಾರಾಜ ಎಂಬ ನಾಮಾಂಕಿತದೊಂದಿಗೆ ಹಾಗೂ ಇನ್ನೋರ್ವ ಸಹೋದರ ಪೂಜ್ಯ ಮುನಿರಾಜ ಕಲ್ಯಾಣಶೇಖರ ವಿಜಯಾಜೀ ಮಹಾರಾಜ ಎಂಬ ನಾಮಾಂಕಿತದೊಂದಿಗೆ ಜೈನ ಧರ್ಮ ಪ್ರಚಾರ-ಸಂಚಾರದಲ್ಲಿದ್ದಾರೆ.

ಗದುಗಿನ ಮೊಮ್ಮಳಾದ ರುನಾಲಕುಮಾರ ಕೋಠಾರಿ ೨೦೨೪ ಜನವರಿ ೨೮ರಂದು ಹುಬ್ಬಳ್ಳಿಯಲ್ಲಿ ಜೈನ್ ಗುರುಗಳಾದ ಆಚಾರ್ಯ ಅಜೀತಶೇಖರ ಸುರಿಶ್ವರಜೀ ಮಹಾರಾಜರ ಸಾನಿಧ್ಯದಲ್ಲಿ ದೀಕ್ಷೆ ಪಡೆಯಲಿದ್ದಾರೆ. ವಿನಿತ್‌ಕುಮಾರ ಪರಮಾರ ೨೦೨೪ ಜನವರಿ ೧೫ರಂದು ಕರಾಡ್‌ದಲ್ಲಿ ದೀಕ್ಷೆ ಪಡೆಯಲಿದ್ದಾರೆ ಎಂದರು.

ದೀಕ್ಷಾರ್ಥಿಗಳಾದ ರುನಾಲಕುಮಾರ ಹಾಗೂ ವಿನಿತ್‌ಕುಮಾರ ಮಾತನಾಡಿ, ಸ್ವಯಂ ಪ್ರೇರಣೆಯಿಂದ ದೀಕ್ಷೆ ಪಡೆಯಲಿರುವ ನಮಗೆ ಕುಟುಂಬದ ಸಹಮತದ ಅನುಮೋದನೆ ಇದ್ದು, ಎಲ್ಲವನ್ನೂ ತ್ಯಾಗ ಮಾಡಿ ದೀಕ್ಷೆಯ ಬಳಿಕ ಧರ್ಮ ಪ್ರಚಾರಕ್ಕಾಗಿ ಸಂಚರಿಸುವುದಾಗಿ ತಿಳಿಸಿದರು.

ಈ ವೇಳೆ ವಿಗ್ನಾಯಣಪ್ರಭಾ ಸುರೀಶ್‌ವರ್ಜಿ.ಎಂ.ಎಸ್., ಸಾಧ್ವಿ ಅರಿಹಂತಪ್ರಭಾಶ್ರೀಜೀ. ಎಂ.ಎಸ್., ಪರಾಗಪ್ರಭಾಶ್ರೀ ಎಂ.ಎಸ್., ವಿಮಲಾಬಾಯಿ ಮಿಲಾಪಚಂದ ಕೊಠಾರಿ, ಜಯಶ್ರೀ ಲಲಿತಕುಮಾರ ಕೊಠಾರಿ, ಸಾರಿಕಾ ಈಶ್ವರಚಂದ ಪರಮಾರ, ರಾಣಮಲ್ಲ ಸೋಳಂಕಿ, ನರಭಯಲಾಲಜಿ ಹುಂಡಿಯಾ, ಪ್ರಕಾಶ ಬಾಫಣಾ, ಅಶೋಕ ಜೈನ್, ಚಂದ್ರಕಾಂತ ಜೈನ್, ಸುರೇಶ ಕೋಠಾರಿ, ನರೇಶ ಜೈನ್, ಸುರೇಶ ಓಸವಾಲ, ಪ್ರಕಾಶ ಶಹಾ, ಜೀತೇಂದ್ರ ಶಹಾ ಸೇರಿದಂತೆ ಜೈನ್ ಸಮಾಜ ಬಾಂಧವರು ಇದ್ದರು. ಪ್ರಾಚಿ ಜೈನ್ ಸ್ವಾಗತಿಸಿ, ನಿರೂಪಿಸಿದರು. ತನುಜಾ ಜೈನ್ ಪರಿಚಯಿಸಿದರು. ದಿಲೀಪ ಜೈನ್ ವಂದಿಸಿದರು.