ಡೊನೇಷನ್ ಹಾವಳಿ ಕಡಿವಾಣಕ್ಕೆ ಡಾ. ರಾಜ್‌ ಅಭಿಮಾನಿಗಳ ಸಂಘ ಆಗ್ರಹ

| Published : May 23 2024, 01:11 AM IST

ಡೊನೇಷನ್ ಹಾವಳಿ ಕಡಿವಾಣಕ್ಕೆ ಡಾ. ರಾಜ್‌ ಅಭಿಮಾನಿಗಳ ಸಂಘ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಖಾಸಗಿ ಶಾಲೆಗಳಲ್ಲಿ ನಡೆಯುತ್ತಿರುವ ವ್ಯಾಪಕ ಡೊನೇಷನ್ ಹಾವಳಿ ತಪ್ಪಿಸಿ ಮಕ್ಕಳಿಗೆ ನಿಗಧಿತ ದರದಲ್ಲಿ ವಿದ್ಯಾರ್ಜನೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಜಿಲ್ಲಾ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘ ಜಿಲ್ಲಾಡಳಿತವನ್ನು ಬುಧವಾರ ಒತ್ತಾಯಿಸಿತು.

ಜಿಲ್ಲಾಧಿಕಾರಿಗಳ ಕಚೇರಿ ಶಿರಸ್ತೇದಾರ್ ಗೆ ಸಂಘದ ಮುಖಂಡರ ಮನವಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಖಾಸಗಿ ಶಾಲೆಗಳಲ್ಲಿ ನಡೆಯುತ್ತಿರುವ ವ್ಯಾಪಕ ಡೊನೇಷನ್ ಹಾವಳಿ ತಪ್ಪಿಸಿ ಮಕ್ಕಳಿಗೆ ನಿಗಧಿತ ದರದಲ್ಲಿ ವಿದ್ಯಾರ್ಜನೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಜಿಲ್ಲಾ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘ ಜಿಲ್ಲಾಡಳಿತವನ್ನು ಬುಧವಾರ ಒತ್ತಾಯಿಸಿತು.ಈ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಶಿರಸ್ತೇದಾರ್ ಮನು ಅವರಿಗೆ ಮನವಿ ಸಲ್ಲಿಸಿದ ಸಂಘದ ಮುಖಂಡರು ಡೊನೇಷನ್, ಸಮವಸ್ತ್ರ ಹಾಗೂ ಪುಠ್ಯಪುಸ್ತಕ ಹೆಸರಿನಲ್ಲಿ ಅಧಿಕ ಹಣ ಪಡೆಯುತ್ತಿರುವ ಶಾಲೆಗಳಿಗೆ ಕಡಿವಾಣ ಹಾಕುವ ಮೂಲಕ ಸುಲಲಿತ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಬೇಕು ಎಂದರು.ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ಐ.ಕೆ.ಓಂಕಾರೇಗೌಡ ಅವರು, ಜಿಲ್ಲೆಯಾದ್ಯಂತ ಖಾಸಗೀ ಶಿಕ್ಷಣ ಸಂಸ್ಥೆ ಗಳಲ್ಲಿ ಡೊನೇಷನ್ ಹಾವಳಿ ಹೆಚ್ಚಾಗಿರುವುದು ಸೇರಿದಂತೆ ವಿವಿಧ ಸಮಸ್ಯೆಗಳು ತಲೆದೋರಿರುವುದನ್ನು ತ್ವರಿತವಾಗಿ ಗಮನಹರಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ಅತಿ ಹೆಚ್ಚು ಡೊನೇಷನ್ ವಸೂಲಿ ಮಾಡುತ್ತಿರುವ ಶಾಲೆಗಳು ರಶೀದಿ ನೀಡುತ್ತಿಲ್ಲ. ಪದವಿ ಹೊಂದಿರುವ ಶಿಕ್ಷಕರಿಗೆ ಕಡಿಮೆ ವೇತನ ನೀಡಿ ಶೋಷಿಸಲಾಗುತ್ತಿದೆ. ಸಮವಸ್ತ್ರ, ಪಠ್ಯಪುಸ್ತಕ ಸಾಮಗ್ರಿಗಳನ್ನು ಹೊರಗಿನಿಂದ ತರಿಸಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಪರಿಣಾಮ ಸ್ಥಳೀಯ ವರ್ತಕರಿಗೆ ವ್ಯವಹಾರಕ್ಕೆ ತೀವ್ರ ಸಮಸ್ಯೆ ಉಂಟಾಗುತ್ತಿದೆ ಎಂದರು.ನೆರೆಯ ರಾಜ್ಯದಿಂದ ಸಾರಿಗೆಗೆ ಯೋಗ್ಯವಲ್ಲದ ಬಸ್ ಸೇರಿದಂತೆ ಇನ್ನಿತರೆ ಮಾದರಿಗಳ ವಾಹನಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಖರೀದಿಸಿ ಅಧಿಕ ಮಕ್ಕಳನ್ನು ಸಾಗಿಸುತ್ತಿರುವುದು ಅಪಾಯಕಾರಿಯಾಗಿದೆ. ಆ ವಾಹನಗಳಿಂದ ವಿಷ ಅನಿಲ ಹೊರ ಸೂಸುತ್ತಿರುವ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಪರಿಸರಕ್ಕೆ ಹಾನಿಯಾಗುತ್ತಿದೆ ಎಂದು ಹೇಳಿದರು.ಹೀಗಾಗಿ ಖಾಸಗಿ ಶಾಲೆಗಳಲ್ಲಿ ನಡೆಯುತ್ತಿರುವ ಡೊನೇಷನ್ ಹಾವಳಿ, ಗುಣಮಟ್ಟದವಿಲ್ಲದ ವಾಹನಗಳ ಬಳಕೆ ಹಾಗೂ ಶಿಕ್ಷಕರಿಗೆ ಸೂಕ್ತ ವೇತನ ನೀಡದಿರುವ ಬಗ್ಗೆ ಪರಿಶೀಲನೆ ನಡೆಸಿ ಅಂತಹ ಶಾಲೆಗಳ ವಿರುದ್ಧ ಸಂಬಂಧಪಟ್ಟ ಇಲಾಖೆಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಜಿ.ಬಸವರಾಜ್, ಕಾನೂನು ಸಲಹೆಗಾರ ಎಂ.ಬಿ.ಆನಂದ್, ಮುಖಂಡರುಗಳಾದ ವಿಕ್ರಾಂತ್, ರೇವನಾಥ್, ಸೋಮಶೇಖರ್, ಯಶೋಧ, ಗವನಹಳ್ಳಿ ಮಂಜು ಇದ್ದರು.ಪೋಟೋ ಫೈಲ್‌ ನೇಮ್ 22 ಕೆಸಿಕೆಎಂ 2ಖಾಸಗಿ ಶಾಲೆಗಳಲ್ಲಿ ನಡೆಯುತ್ತಿರುವ ಡೊನೇಷನ್ ಹಾವಳಿಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ಜಿಲ್ಲಾ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶಿರಸ್ತೇದಾರ್‌ ಮನು ಅವರಿಗೆ ಬುಧವಾರ ಮನವಿ ಸಲ್ಲಿಸಿದರು.