ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗೆಲ್ಲಲು ಛಲ ಮತ್ತು ಹಂಬಲವಿರಬೇಕು: ಡಾ.ಸಿ.ಎಸ್.ಕೇದಾರ್

| Published : Mar 18 2024, 01:46 AM IST

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗೆಲ್ಲಲು ಛಲ ಮತ್ತು ಹಂಬಲವಿರಬೇಕು: ಡಾ.ಸಿ.ಎಸ್.ಕೇದಾರ್
Share this Article
  • FB
  • TW
  • Linkdin
  • Email

ಸಾರಾಂಶ

ಇಂದು ತಮ್ಮ ಮೊಬೈಲ್‌ಗಳಲ್ಲಿ ಸಾಮಾನ್ಯ ಜ್ಞಾನಕ್ಕೆ ಅಗತ್ಯವಿರುವ ಮಾಹಿತಿಳನ್ನೆಲ್ಲಾ ಪಡೆಯಬಹುದು. ಲಭ್ಯವಿರುವ ತಾಂತ್ರಿಕತೆ ಬಳಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉತ್ತಮ ಐಎಎಸ್ ಅಧಿಕಾರಿಗಳಾಗಬಹುದು. ಭಾರತೀಯ ಆಡಳಿತ ಸೇವೆಯ ಅಧಿಕಾರಿಗಳಾಗಿ ಜಪಾನ್ ದೇಶದಂತೆಯೇ ನಮ್ಮಲ್ಲಿಯೂ ಅಭಿವೃದ್ಧಿಯ ಕ್ರಾಂತಿ ಮಾಡಬೇಕು.

ಕನ್ನಡಪ್ರಭ ವಾರ್ತೆ ಭಾರತೀನಗರ

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗೆಲುವು ಸಾಧಿಸಲು ವಿದ್ಯಾರ್ಥಿಗಳಲ್ಲಿ ಛಲ ಮತ್ತು ಹಂಬಲವಿರಬೇಕು ಎಂದು ಇಂಡಿಯಾ 4- ಐಎಎಸ್ ಅಕಾಡೆಮಿ ಬೆಂಗಳೂರು ಆಡಳಿತ ಮಂಡಳಿ ಅಧ್ಯಕ್ಷ ಡಾ.ಸಿ.ಎಸ್.ಕೇದಾರ್ ತಿಳಿಸಿದರು.

ಭಾರತೀ ಎಜಕೇಷನ್ ಟ್ರಸ್ಟ್ ಆಶ್ರಯದ ಭಾರತೀ ಐಎಎಸ್ ಅಕಾಡೆಮಿ ಸಹಯೋಗದಲ್ಲಿ ವೃತ್ತಿ ಮಾಗದರ್ಶನ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ ವತಿಯಿಂದ ಕುವೆಂಪು ಸಭಾಂಗಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಮೇಲಿನ ಉಚಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ದೃಢವಾದ ನಿಲುವು, ಗುರಿ ಸಾಧಿಸುವ ಹಂಬಲವಿರಬೇಕು. ಇಂದು ತಮ್ಮ ಮೊಬೈಲ್‌ಗಳಲ್ಲಿ ಸಾಮಾನ್ಯ ಜ್ಞಾನಕ್ಕೆ ಅಗತ್ಯವಿರುವ ಮಾಹಿತಿಳನ್ನೆಲ್ಲಾ ಪಡೆಯಬಹುದು. ಲಭ್ಯವಿರುವ ತಾಂತ್ರಿಕತೆ ಬಳಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉತ್ತಮ ಐಎಎಸ್ ಅಧಿಕಾರಿಗಳಾಗಬಹುದು. ಭಾರತೀಯ ಆಡಳಿತ ಸೇವೆಯ ಅಧಿಕಾರಿಗಳಾಗಿ ಜಪಾನ್ ದೇಶದಂತೆಯೇ ನಮ್ಮಲ್ಲಿಯೂ ಅಭಿವೃದ್ಧಿಯ ಕ್ರಾಂತಿ ಮಾಡಬೇಕು ಎಂದರು.

ಭಾರತೀ ವಿದ್ಯಾಸಂಸ್ಥೆ ಉಚಿತವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಗಾರವನ್ನು ನೀಡಲು ಮುಂದಾಗಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಪದವಿ ಮತ್ತು ಉನ್ನತ ಪದವಿ ಪಡೆದರೆ ಸಾಲದು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಉದ್ಯೋಗಗಳನ್ನು ಅಲಂಕರಿಸಬೇಕು ಎಂದರು.

64 ಮಂದಿಗಳನ್ನು ನಾನು ಐಎಎಸ್ ಅಧಿಕಾರಿಗಳನ್ನಾಗಿ ಮಾಡಿದ್ದೇನೆ. 100 ಐಎಎಸ್ ಅಧಿಕಾರಗಳಾಗಬೇಕೆಂಬುವುದು ನನ್ನ ಇಚ್ಚೆ. ಅಲ್ಲಿಯವರೆವಿಗೂ ನನ್ನ ತರಬೇತಿ ನೀಡುವ ಪ್ರಯತ್ನವನ್ನು ನಾನು ಬಿಡುವುದಿಲ್ಲ. ವಿದ್ಯಾರ್ಥಿಗಳು ಪುಸ್ತಕಗಳನ್ನು ಓದಬೇಕು. ಒಳ್ಳೆಯ ಹವ್ಯಾಸಗಳನ್ನ ಬೆಳೆಸಿಕೊಳ್ಳಬೇಕೆಂದರು.

ಶಾಸಕ ಮಧು ಜಿ.ಮಾದೇಗೌಡ ಮಾತನಾಡಿ, ಐಎಎಸ್, ಕೆಎಎಸ್ ಅಧಿಕಾರಿಗಳನ್ನು ಹುಟ್ಟುಹಾಕಬೇಕೆಂಬುದು ಹಿರಿಯರಾದ ತಂದೆ ಜಿ.ಮಾದೇಗೌಡರ ಹೆಬ್ಬಯಕೆಯಾಗಿತ್ತು. ಹಾಗಾಗಿ ಉಚಿತ ಕಾರ್ಯಗಾರವನ್ನು ಪ್ರಾರಂಭಿಸಿದ್ದೇವೆ ಎಂದರು.

ಇಂಡಿಯಾ ಐಎಎಸ್ ಅಕಾಡೆಮಿ ಆಡಳಿತ ಮಂಡಳಿ ಸಹ ಸಂಸ್ಥಾಪಕ ಪಿ.ಸಿ.ಶ್ರೀನಿವಾಸ್ ಮಾತನಾಡಿದರು. ನ್ಯಾಯಾಧೀಶರಾಗಿ ಆಯ್ಕೆಗೊಂಡಿರುವ ಅಣ್ಣೂರು ರಂಜಿತಾ ಅವರನ್ನು ಅಭಿನಂದಿಸಲಾಯಿತು.

ಮಂಡಳಿ ವಿಭಾಗದ ನಿರ್ದೇಶಕ ಪ್ರಶಾಂತ್ ಶ್ರೀನಿವಾಸ್, ಬಿಇಟಿ ಕಾರ್ಯದರ್ಶಿ ಬಿ.ಎಂ.ನಂಜೇಗೌಡ, ಶ್ರೀರಂಗಪಟ್ಟಣ ತಹಸೀಲ್ದಾರ್ ಪರುಶುರಾಮ್ ಸೆತ್ತಿಗೇರಿ, ಅಕಾಡೆಮಿ ಸಂಯೋಜಕ ಕೆ.ಎಚ್.ಪ್ರಸನ್ನಕುಮಾರ್, ಪ್ರಾಂಶುಪಾಲ ಡಾ.ಪಿ.ನಾಗೇಂದ್ರ, ಪಿ.ಜಿ.ನಿರ್ದೇಶಕ ಎಸ್.ನಾಗರಾಜು, ಡಾ.ಸುರೇಶ್ ಉಪಸ್ಥಿತರಿದ್ದರು.