ಇಂದು ಪಾಲಿಕೆಯಿಂದ 68 ಜನರಿಗೆ ಧೀಮಂತ ಪ್ರಶಸ್ತಿ ಪ್ರದಾನ

| Published : Nov 01 2023, 01:00 AM IST

ಇಂದು ಪಾಲಿಕೆಯಿಂದ 68 ಜನರಿಗೆ ಧೀಮಂತ ಪ್ರಶಸ್ತಿ ಪ್ರದಾನ
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಸಾಧನೆ ಮಾಡಿದ ಮಹನೀಯರಿಗೆ ಪಾಲಿಕೆಯಿಂದ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು, ಈ ಬಾರಿ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿತ್ತು. ಪ್ರಶಸ್ತಿಗಾಗಿ ಒಟ್ಟು 25 ವಿಭಾಗಗಳಲ್ಲಿ ಸುಮಾರು 220 ಅರ್ಜಿಗಳು ಬಂದಿದ್ದವು. ಅದರಲ್ಲಿ ಅರ್ಹ 68 ಜನರನ್ನು ಆಯ್ಕೆ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಕೊಡಮಾಡುವ ಧೀಮಂತ ಪ್ರಶಸ್ತಿಗೆ 68 ಜನ ಗಣ್ಯರನ್ನು ಆಯ್ಕೆಮಾಡಲಾಗಿದ್ದು, ನ. 1ರಂದು ಸಂಜೆ 4ಕ್ಕೆಇಲ್ಲಿನ ಇಂದಿರಾ ಗಾಜಿನ ಮನೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಪಾಲಿಕೆ ಮೇಯರ್‌ ವೀಣಾ ಬರದ್ವಾಡ್‌ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಸಾಧನೆ ಮಾಡಿದ ಮಹನೀಯರಿಗೆ ಪಾಲಿಕೆಯಿಂದ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು, ಈ ಬಾರಿ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿತ್ತು. ಪ್ರಶಸ್ತಿಗಾಗಿ ಒಟ್ಟು 25 ವಿಭಾಗಗಳಲ್ಲಿ ಸುಮಾರು 220 ಅರ್ಜಿಗಳು ಬಂದಿದ್ದವು. ಅದರಲ್ಲಿ ಅರ್ಹ 68 ಜನರನ್ನು ಆಯ್ಕೆ ಮಾಡಲಾಗಿದೆ ಎಂದರು. ಶಿಕ್ಷಣ ಕ್ಷೇತ್ರದಲ್ಲಿ ಉದಯಕುಮಾರ, ಪ್ರೊ. ಕೆ.ಎಸ್‌. ಕೌಜಲಗಿ, ಡಾ. ಲಿಂಗರಾಜ ಹೊರಕೇರಿ, ಸಂಶೋಧನ ಕ್ಷೇತ್ರದಲ್ಲಿ ಡಾ. ಡಾ. ತೇಜರಾಜ ಅಮ್ಮಿನಬಾವಿ, ಡಾ. ಶ್ವೇತಾ ಮಾಳೋದೆ, ಡಾ. ಪ್ರಭು ಮಾಳೋದೆ, ಡಾ. ಪ್ರಭುಗೌಡ ಪಾಟೀಲ, ವಿಶೇಷಚೇತನದಲ್ಲಿ ನಿಧಿ ಸುಲಾಖೆ, ಕೇಶವ ತೆಲಗು, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಗುರುಪ್ರಸಾದ ಆಯಾಚಿತ, ಡಾ. ವೈ.ಎನ್‌. ಇರಕಲ್, ಡಾ. ಮಹಾವೀರ ಹಾವೇರಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ವೀರೇಶ ಹಂಡಗಿ, ಕೃಷ್ಣಿ ಶಿರೂರ, ಪ್ರಕಾಶ ನೂಲ್ವಿ, ಸುಶೀಲೇಂದ್ರ ಕುಂದರಗಿ, ಛಾಯಾಚಿತ್ರಣ ಕ್ಷೇತ್ರದಲ್ಲಿ ಗಣಪತಸಾ ಜರತಾರಘರ ಸೇರಿದಂತೆ ರಂಗಭೂಮಿ, ನೃತ್ಯ, ಸಂಗೀತ, ಕೈಗಾರಿಕೋದ್ಯಮ, ಶಿಲ್ಪಕಲೆ, ಚಿತ್ರಕಲೆ, ಯೋಗ, ಜಾನಪದ, ಕ್ರೀಡೆ, ಕೃಷಿ, ಸಾಮಾಜಿಕ, ಸಾಹಿತ್ಯ, ಹಸಿರು ಪರಿಸರ ನಿರ್ಮಾಣ, ಎನ್‌ಜಿಒ, ಸೇವಾ, ತಾಂತ್ರಿಕ, ಮಕ್ಕಳು, ಪೌರಕಾರ್ಮಿಕ, ಕನ್ನಡಪರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಒಟ್ಟು 68 ಮಹನೀಯರಿಗೆ ಧೀಮಂತ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದರು. ನ. 1ರಂದು ಬೆಳಗ್ಗೆ 9 ಗಂಟೆಗೆ ಇಲ್ಲಿನ ಸಿದ್ಧಾರೂಢರ ಮಠದಿಂದ ನೆಹರು ಕ್ರೀಡಾಂಗಣದ ವರೆಗೆ ಭುವನೇಶ್ವರಿ ದೇವಿಯ ಭಾವಚಿತ್ರ ಮೆರವಣಿಗೆಯು ಹಮ್ಮಿಕೊಳ್ಳಲಾಗಿದೆ. ಸಂಜೆ 4 ಗಂಟೆಗೆ ಇಂದಿರಾ ಗಾಜಿನ ಮನೆಯಲ್ಲಿ ಧೀಮಂತ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದರು. ಸಂಜೆ ನಡೆಯುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಉದ್ಘಾಟಿಸುವರು. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ವಿಪ ಸಭಾಪತಿ ಬಸವರಾಜ ಹೊರಟ್ಟಿ ಉಪಸ್ಥಿತರಿಲಿದ್ದಾರೆ. ಅತಿಥಿಗಳಾಗಿ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್‌. ಸುರೇಶ, ವಿಪ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಶಾಸಕರಾದ ವಿನಯ ಕುಲಕರ್ಣಿ, ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ವಿಪ ಸದಸ್ಯರಾದ ಪ್ರದೀಪ ಶೆಟ್ಟರ್‌, ಎಸ್‌.ವಿ. ಸಂಕನೂರ, ಪಾಲಿಕೆ ಉಪಮೇಯರ್‌ ಸತೀಶ ಹಾನಗಲ್ಲ, ಪಾಲಿಕೆ ಸಭಾನಾಯಕ ಶಿವು ಹಿರೇಮಠ, ವಿಪಕ್ಷ ನಾಯಕಿ ಸುವರ್ಣ ಕಲ್ಲಕುಂಟಲಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಗುಂಡೂರ, ಬೀರಪ್ಪ ಖಂಡೇಕಾರ, ನಿತೀನ್‌ ಇಂಡಿ, ಸಿದ್ಧಾರೂಢಸ್ವಾಮಿ ಮಠ ಟ್ರಸ್ಟ್‌ ಕಮಿಟಿ ಚೇರಮನ್‌ ಬಸವರಾಜ ಕಲ್ಯಾಣ ಶೆಟ್ಟರ್‌ ಸೇರಿದಂತೆ ಪಾಲಿಕೆ ಸದಸ್ಯರು ಪಾಲ್ಗೊಳ್ಳುವರು ಎಂದರು. ಈ ವೇಳೆ ಪಾಲಿಕೆ ಉಪಮೇಯರ್‌ ಸತೀಶ ಹಾನಗಲ್ಲ ಸೇರಿದಂತೆ ಪಾಲಿಕೆ ಅಧಿಕಾರಿಗಳು ಪಾಲ್ಗೊಂಡಿದ್ದರು.