ಸಾರಾಂಶ
ಬೀರೂರು, ಇತಿಹಾಸ ಪ್ರಸಿದ್ಧ ಸರಸ್ವತಿಪುರಂ ಬಡಾವಣೆಯಲ್ಲಿ ನೆಲೆಸಿರುವ ಶ್ರೀ ಮೈಲಾರಲಿಂಗಸ್ವಾಮಿ ದಸರಾ ಮಹೋತ್ಸವ ಹಾಗೂ ಕಾರ್ಣೀಕೋತ್ಸವ ಅ.3ರ ಶುಕ್ರವಾರ ಬೆಳಗಿನ ಜಾವ 5 ಗಂಟೆಗೆ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಕನ್ನಡಪ್ರಭ ವಾರ್ತೆ ಬೀರೂರು
ಇತಿಹಾಸ ಪ್ರಸಿದ್ಧ ಸರಸ್ವತಿಪುರಂ ಬಡಾವಣೆಯಲ್ಲಿ ನೆಲೆಸಿರುವ ಶ್ರೀ ಮೈಲಾರಲಿಂಗಸ್ವಾಮಿ ದಸರಾ ಮಹೋತ್ಸವ ಹಾಗೂ ಕಾರ್ಣೀಕೋತ್ಸವ ಅ.3ರ ಶುಕ್ರವಾರ ಬೆಳಗಿನ ಜಾವ 5 ಗಂಟೆಗೆ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.ಸೆ.30 ರಂದು ಬೆಳಿಗ್ಗೆ ಅಮೃತ ಗಳಿಗೆಯಲ್ಲಿ ಗಂಗಾಪೂಜೆ, ರುದ್ರಾಭಿಷೇಕ, ಗಣಹೋಮ, ಪ್ರಧಾನ ಮಲ್ಲಾರಿಹೋಮ ಮಹಾ ಮಂಗಳಾರತಿ ನಂತರ ರಾತ್ರಿ ಶ್ರೀ ಸ್ವಾಮಿ ಪಟ್ಟಕ್ಕೆ ಕೂರಿಸಲಾಯಿತು.
ಅ.2ರ ಗುರುವಾರ ರಾತ್ರಿ 8ಕ್ಕೆ ವಿಶೇಷ ಪೂಜೆ ಹವನಾದಿಗಳ ನಂತರ ಪುಷ್ಪಾಲಂಕೃತ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಯನ್ನು ಪಲ್ಲಕ್ಕಿಯಲ್ಲಿ ಪಾದದ ಕೆರೆಗೆ ಹೋಗಿ ಬನ್ನಿ ಮುಡಿಯುವುದು 101ಗಣಂಗಳ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯ ಕ್ರಮ ಹಾಗೂ ಬೆಳಗಿನ ಜಾವ 4.30ಕ್ಕೆ ಶ್ರೀ ವೀರಭದ್ರಸ್ವಾಮಿ. ಶ್ರೀ ಹುಲು ಬೆಂಕಿ ಬೀರಲಿಂಗೇಶ್ವರ ಸ್ವಾಮಿ ಮಿತ್ರ ಸಮಾಜದ ಗಣಪತಿ ಮತ್ತಿತರ ದೇವರ ಸಮ್ಮುಖದಲ್ಲಿ ಸ್ವಾಮಿ ಮತ್ತು ದೊಡ್ಡ ಬಿಲ್ಲಪ್ಪನವರ ನರ್ತನ , ಸ್ವಾಮಿ ಎಲ್ಲಾ ದೇವರನ್ನು 3ಬಾರಿ ಪ್ರದಕ್ಷಿಣೆ ಹಾಕಿ ವಿಶ್ವವಿಖ್ಯಾತ ಕಾರ್ಣಿಕ ನುಡಿಮುತ್ತುಗಳು ನಡೆಯಲಿವೆ ಎಂದರು.ಅ.3 ಸಂಜೆ ದೇವಸ್ಥಾನ ಆವರಣದಲ್ಲಿ ಭಕ್ತಾಧಿ ಗಳ ಸಮ್ಮುಖದಲ್ಲಿ ದೋಣಿ ಸೇವೆ ಮತ್ತು ಅ.4ರ ಸಂಜೆ ಮೂರ್ತಿಯ ಊರಿನ ರಾಜಬೀದಿ ಉತ್ಸವ ಹಾಗೂ ಮಾಹಾತ್ಮ ಗಾಂಧಿ ವೃತ್ತದಲ್ಲಿ ಮನಮೋಹಕ ಸಿಡಿಮದ್ದಿನ ಕಾರ್ಯಕ್ರಮ ಜರುಗಲಿದ್ದು, ಊರಿನ ಪುರಸಭೆ ಹಾಗೂ ಮಿತ್ರ ಸಮಾಜದಿಂದ ಪ್ರತಿಷ್ಠಾಪಿಸಲ್ಪಟ್ಟಿರುವ ಶ್ರೀ ಸತ್ಯಗಣಪತಿ ವಿಸರ್ಜನಾ ಮಹೋತ್ಸವ ನೇರವೇರಲಿದೆ.ಕಾರ್ಯಕ್ರಮದಲ್ಲಿ ಜನನಪ್ರಿಯ ಶಾಸಕ ಕೆ.ಎಸ್.ಆಂನಂದ್, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಮತ್ತು ಮಾಜಿ ಶಾಸಕರಾದ ಬೆಳ್ಳಿ ಪ್ರಕಾಶ್, ವೈ.ಎಸ್.ವಿ.ದತ್ತ, ಕೆ.ಬಿ.ಮಲ್ಲಿಕಾರ್ಜುನ್ ಮತ್ತು ಬೀರೂರು-ಕಡೂರು ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮಿಮೋಹನ್, ಭಂಡಾರಿ ಶ್ರೀನಿವಾಸ್ ಸೇರಿದಂತೆ ಮತ್ತಿತರ ಗಣ್ಯರು ಸರ್ಕಾರಿ ಅಧಿಕಾರಿಗಳು ಭಾಗವಹಿಲಿದ್ದಾರೆ. ಶ್ರೀ ಸ್ವಾಮಿ ಭಕ್ತರು ಜಿಲ್ಲೆ ಮತ್ತು ರಾಜ್ಯದ ಎಲ್ಲಾ ಭಕ್ತಾಧಿ ಗಳು ಮತ್ತು ಸರ್ವರಿಗೂ ದಸರ ಹಬ್ಬಕ್ಕೆ ಆಹ್ವಾನಿಸಲಾಗಿದೆ.ಎಲ್ಲರೂ ಜಾತ್ರೆಯಲ್ಲಿ ಪಾಲ್ಗೊಂಡು ಸ್ವಾಮಿ ಕೃಪಾಶೀರ್ವಾದ ಪಡೆಯಬೇಕೆಂದು ತಿಳಿಸಿದ್ದಾರೆ.30 ಬೀರೂರು 1ಬೀರೂರಿನ ಸರಸ್ವತಿಪುರಂ ಬಡಾವಣೆಯಲ್ಲಿ ನೆಲೆಸಿರುವ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ