ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಮತ್ತು ಜಿಲ್ಲಾ ಘಟಕದಿಂದ 4ನೇ ವರ್ಷದ ಕನ್ನಡದ ಹಬ್ಬ ಹಾಗೂ 70ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಡಿ.20ರಂದು ನಗರದ ಶ್ರೀ ಶಿವಯೋಗಿ ಮಂದಿರದಲ್ಲಿ ನಡೆಯಲಿದೆ ಎಂದು ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಅವಿನಾಶ ಬಿ.ಅಭಿ ಹೇಳಿದ್ದಾರೆ.
- ಸರ್ಕಾರಿ ಶಾಲೆಗಳನ್ನು ಸರ್ಕಾರ ಮುಚ್ಚಬಾರದು: ಅವಿನಾಶ ಅಭಿ ಒತ್ತಾಯ - - -
ಕನ್ನಡಪ್ರಭ ವಾರ್ತೆ ದಾವಣಗೆರೆಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಮತ್ತು ಜಿಲ್ಲಾ ಘಟಕದಿಂದ 4ನೇ ವರ್ಷದ ಕನ್ನಡದ ಹಬ್ಬ ಹಾಗೂ 70ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಡಿ.20ರಂದು ನಗರದ ಶ್ರೀ ಶಿವಯೋಗಿ ಮಂದಿರದಲ್ಲಿ ನಡೆಯಲಿದೆ ಎಂದು ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಅವಿನಾಶ ಬಿ.ಅಭಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 6 ಗಂಟೆಗೆ ದಾವಣಗೆರೆ ಸೇರಿದಂತೆ ನೂತನ ಜಿಲ್ಲೆಗಳ ನಿರ್ಮಾತೃ, ಮಾಜಿ ಸಿಎಂ ದಿವಂಗತ ಜೆ.ಎಚ್.ಪಟೇಲ್ ಸ್ಮರಣಾರ್ಥ ವೇದಿಕೆಯಲ್ಲಿ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸಮಾರಂಭ ಉದ್ಘಾಟಿಸುವರು ಎಂದರು.ವಿವಿಧ ಸ್ಪರ್ಧೆ ವಿಜೇತ ಮಕ್ಕಳಿಗೆ ಶಾಸಕ ಬಸವರಾಜ ವಿ. ಶಿವಗಂಗಾ ಪ್ರಶಸ್ತಿ ಪ್ರದಾನ ಮಾಡುವರು. ಕನ್ನಡಾಂಬೆ ಭಾವಚಿತ್ರಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ ಮಾಲಾರ್ಪಣೆ ಮಾಡುವರು. ಸಮಗ್ರ ಕರವೇ ಪದಾಧಿಕಾರಿಗಳಿಗೆ ದಾವಣಗೆರೆ ವಿವಿ ಕುಲಪತಿ ಪ್ರೊ. ಬಿ.ಡಿ.ಕುಂಬಾರ ಗುರುತಿನ ಪತ್ರ ವಿತರಿಸುವರು. ಕನ್ನಡ ಪ್ರಾಧ್ಯಾಪಕ ಅಯೂಬ್ ಖಾನ್ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ. ವೇದಿಕೆ ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಮಾಲಾ ನಾಗರಾಜ ಸ್ವಾಗತ ಭಾಷಣ ಮಾಡುವರು ಎಂದು ಹೇಳಿದರು.
ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಎಚ್.ಎಸ್. ಶಿವಶಂಕರ, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್, ಅಭಾವೀಮ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ವಿ.ಶಿವಗಂಗಾ, ಅಬಕಾರಿ ಉಪ ಆಯುಕ್ತ ಚಿದಾನಂದ ಜನಾಯಿ, ಪಾಲಿಕೆ ಆಯುಕ್ತೆ ರೇಣುಕಾ, ತಹಸೀಲ್ದಾರ್ ಅಶ್ವತ್ಥ್, ಅಖಿಲ ಕರ್ನಾಟಕ ಹಿಂದೂ ಮಹಾಸಭಾದ ಜೆ.ಅರುಣಕುಮಾರ, ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್. ಬಡದಾಳ, ಕಾಂಗ್ರೆಸ್ ಮುಖಂಡ ಬೂದಾಳ್ ಬಾಬು, ವಕೀಲ ಪ್ರಕಾಶ ಕೆ.ಬಾತಿ, ಧನಂಜಯ, ಲಕ್ಷ್ಮಣ, ರಾಜೇಶ ಹಾಲೇಕಲ್ ಇತರರು ಭಾಗವಹಿಸುವರು ಎಂದು ತಿಳಿಸಿದರು.ವೇದಿಕೆ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಾಲಾ ನಾಗರಾಜ, ರೆಹಮಾನ್ ಖಾನ್, ಡಿ.ಜೆ.ರಾಘವೇಂದ್ರ, ಭೋಜರಾಜ, ಆನಂದ ಜಾಧವ್, ಫಯಾಜ್ ಅಹಮದ್, ಮುಸ್ತಾಫ್, ಅಕ್ಬರ್ ಭಾಷಾ, ಕುಮಾರ, ಮಹಮ್ಮದ್, ಗೌಸ್‌ಪೀರ್, ಖಾದರ್ ಸಾಬ್ ಇತರರು ಇದ್ದರು.
- - -(ಟಾಪ್ ಕೋಟ್) ಮ್ಯಾಗ್ನೆಟ್ ಶಾಲೆಗಳ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ದುಸ್ಸಾಹಸಕ್ಕೆ ಸರ್ಕಾರ ಮುಂದಾದರೆ ವೇದಿಕೆ ವತಿಯಿಂದ ರಾಜ್ಯದಲ್ಲಿ ತೀವ್ರ ಹೋರಾಟ ದಾವಗೆರೆಯಿಂದಲೇ ಶುರುವಾಗಲಿದೆ. ಡಿ.26ರಂದು ದಾವಣಗೆರೆಗೆ ಆಗಮಿಸಲಿರುವ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಶಿಕ್ಷಣ ಸಚಿವರು ಸೇರಿದಂತೆ ಜಿಲ್ಲಾ ಸಚಿವರಿಗೆ ವೇದಿಕೆ ಮನವಿ ಅರ್ಪಿಸಿ, ಸರ್ಕಾರಿ ಶಾಲೆಗಳ ರಕ್ಷಣೆಗೆ ಮನವಿ ಅರ್ಪಿಸಲಾಗುವುದು.
- ಅವಿನಾಶ ಬಿ.ಅಭಿ, ರಾಜ್ಯಾಧ್ಯಕ್ಷ.- - -
-19ಕೆಡಿವಿಜಿ9: ದಾವಣಗೆರೆಯಲ್ಲಿ ಶುಕ್ರವಾರ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಅವಿನಾಶ ವಿ. ಅಭಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.