ಸಾರಾಂಶ
- ಸಚಿವ ಎಸ್ಸೆಸ್ಸೆಂ ಉದ್ಘಾಟನೆ, ಶಾಸಕ ದೇವೇಂದ್ರಪ್ಪ ಅಧ್ಯಕ್ಷತೆ - - - ಜಗಳೂರು: ಪಟ್ಟಣದಲ್ಲಿ ಗುರುವಾರ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಭವನ ನೂತನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮ ಅ.17ರಂದು ಬೆಳಗ್ಗೆ 10-30 ಗಂಟೆಗೆ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ನಡೆಯಲಿದೆ. ಅಧ್ಯಕ್ಷತೆಯನ್ನು ಶಾಸಕ ಬಿ.ದೇವೇಂದ್ರಪ್ಪ ವಹಿಸಲಿದ್ದಾರೆ ಎಂದು ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುನಾಥ್ ಜಿ.ಎ. ತಿಳಿಸಿದ್ದಾರೆ.
ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಜಗಳೂರು ಪಟ್ಟಣ ಪಂಚಾಯಿತಿ ಆಶ್ರಯದಲ್ಲಿ ನಡೆಯಲಿರುವ ಕಾರ್ಯಕ್ರಮದ ಉದ್ಘಾಟನೆಯನ್ನು ತೋಟಗಾರಿಕೆ, ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ವಾಲ್ಮೀಕಿ ಜಯಂತಿ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಭವನ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕ ಬಿ.ದೇವೇಂದ್ರಪ್ಪ ಸಭೆ ಅಧ್ಯಕ್ಷತೆ ವಹಿಸುವರು.ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ವಿಧಾನ ಪರಿಷತ್ತು ಸದಸ್ಯರಾದ ಚಿದಾನಂದ ಎಂ. ಗೌಡ, ಕೆ.ಎಸ್. ನವೀನ್, ಡಿ.ಟಿ.ಶ್ರೀನಿವಾಸ್, ರವಿಕುಮಾರ್ ಎನ್., ಮಾಜಿ ಶಾಸಕರಾದ ಎಸ್ .ವಿ. ರಾಮಚಂದ್ರ, ಎಚ್.ಪಿ.ರಾಜೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೆ.ಎಸ್. ನವೀನ್ ಕುಮಾರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾದ ವೀಣಾ ಗೋಗುದ್ದುರಾಜು, ಪ.ಪಂ. ಉಪಾಧ್ಯಕ್ಷರಾದ ಜಿ.ಬಿ.ಲೋಕಮ್ಮ, ಕೆ.ಪಿ.ಪಾಲಯ್ಯ, ಎಂ.ಡಿ. ಕೀರ್ತಿಕುಮಾರ್, ಕಸಾಪ ಅಧ್ಯಕ್ಷೆ ಸುಜಾತಮ್ಮ, ವಕೀಲರ ಸಂಘದ ಅಧ್ಯಕ್ಷ ಟಿ.ಬಸವರಾಜ್, ಪಟ್ಟಣ ಪಂಚಾಯಿತಿ ಸದಸ್ಯರಾದ ಸಿದ್ದಪ್ಪ, ಮಂಜಮ್ಮ, ಟಿ.ಲಲಿ, ಷಕೀಲ್ ಅಹಮ್ಮದ್, ನಿರ್ಮಲಕುಮಾರಿ, ಬಿ.ಸರೋಜಮ್ಮ, ನಜಿರ್ ಉನ್ನಿಸಾ, ಆರ್.ತಿಪ್ಪೇಸ್ವಾಮಿ, ಎನ್.ಮಹಮ್ಮದ್ ಅಲಿ, ದೇವರಾಜ್, ಲುಕ್ಮಾನ್ ಉಲ್ಲಾಖಾನ್ ,ಬಿ.ಕೆ.ರಮೇಶ್ ಮಂಜುನಾಥ್ ಎಸ್., ಸಿ.ವಿಶಾಲಾಕ್ಷಿ ಓಬಳೇಶ್, ಜೆ.ಪಾಪಲಿಂಗಪ್ಪ, ನಾಮನಿರ್ದೇಶಿತ ಸದಸ್ಯರಾದ ಕುರಿ ಜಯ್ಯಣ್ಣ, ಬಿ.ಟಿ.ಶಾಂತಕುಮಾರ್, ತಾನಾಜಿ ಗೋಸಾಯಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ತಹಸೀಲ್ದಾರ್ ಸೈಯೀದ್ ಕಲೀಂ ಉಲ್ಲಾ ಪೋಲಿಸ್ ನಿರೀಕ್ಷರಾದ ಎಂ.ಶ್ರೀನಿವಾಸ್ ರಾವ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಡಾ. ನವೂನ್ ಸಿ. ಮಠದ್ , ಇಒ ಎನ್.ಕೆ. ಕೆಂಚಪ್ಪ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಿ.ಲೋಕ್ಯಾನಾಯ್ಕ್, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಜಿ.ಎ.ಮಂಜುನಾಥ್, ವಿವಿಧ ರಾಜಕೀಯ, ಸಂಘಟನೆಗಳ ಮುಖಂಡರು, ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.- - - (ಸಾಂದರ್ಭಿಕ ಚಿತ್ರ)