ಬಹಿರಂಗ ಪ್ರಚಾರಕ್ಕೆ ಇಂದು ತೆರೆ: ಸುಗಮ ಚುನಾವಣೆಗೆ ಜಿಲ್ಲಾಡಳಿತ ಸನ್ನದ್ಧ

| Published : May 05 2024, 02:07 AM IST

ಬಹಿರಂಗ ಪ್ರಚಾರಕ್ಕೆ ಇಂದು ತೆರೆ: ಸುಗಮ ಚುನಾವಣೆಗೆ ಜಿಲ್ಲಾಡಳಿತ ಸನ್ನದ್ಧ
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಜಿಲ್ಲಾಡಳಿತ ಸನ್ನದ್ಧವಾಗಿದೆ. ಅಭ್ಯರ್ಥಿಗಳ ಬಹಿರಂಗ ಪ್ರಚಾರಕ್ಕೆ ಮೇ ೫ರ ಸಂಜೆ ೬ ಗಂಟೆಗೆ ತೆರೆ ಬೀಳಲಿದೆ. ಮೇ ೭ರ ಬೆಳಗ್ಗೆ ೭ರಿಂದ ಸಂಜೆ ೬ ಗಂಟೆವರೆಗೆ ಮತದಾನ ನಡೆಯಲಿದೆ. ಸುಗಮ ಮತದಾನಕ್ಕಾಗಿ ೧೯೮೨ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ತಿಳಿಸಿದ್ದಾರೆ.

ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಜಿಲ್ಲಾಡಳಿತ ಸನ್ನದ್ಧವಾಗಿದೆ. ಅಭ್ಯರ್ಥಿಗಳ ಬಹಿರಂಗ ಪ್ರಚಾರಕ್ಕೆ ಮೇ ೫ರ ಸಂಜೆ ೬ ಗಂಟೆಗೆ ತೆರೆ ಬೀಳಲಿದೆ. ಮೇ ೭ರ ಬೆಳಗ್ಗೆ ೭ರಿಂದ ಸಂಜೆ ೬ ಗಂಟೆವರೆಗೆ ಮತದಾನ ನಡೆಯಲಿದೆ. ಸುಗಮ ಮತದಾನಕ್ಕಾಗಿ ೧೯೮೨ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ತಿಳಿಸಿದ್ದಾರೆ.ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಸಿದ್ಧತೆ ಹಾಗೂ ಮತದಾನ ಮುಕ್ತಾಯದ ಪೂರ್ವದ ೪೮ ತಾಸಿನ ಮಾದರಿ ನೀತಿ ಸಂಹಿತೆ ಕುರಿತಾಗಿ ಶನಿವಾರ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಕ್ಷೇತ್ರ ವ್ಯಾಪ್ತಿಯಲ್ಲಿ ಸ್ಥಾಪಿಸಲಾಸದ ೧೯೮೨ ಮತಗಟ್ಟೆಗಳ ಪೈಕಿ ೩೭೦ ಮತಗಟ್ಟೆಗಳು ಸೂಕ್ಷ್ಮ, ೩೭ ದುರ್ಬಲ ಮತಗಟ್ಟೆಗಳು, ೧೨ ಆರ್ಥಿಕ ಸೂಕ್ಷ್ಮತೆ ಒಳಗೊಂಡ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಈ ಮತಗಟ್ಟೆಗಳ ಮೇಲೆ ತೀವ್ರ ನಿಗಾವಹಿಸಲಾಗಿದೆ ಎಂದು ತಿಳಿಸಿದರು.ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಉಭಯ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಲ್ಲಿ ೧೯೮೨ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ೧೬೧೪ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ಅಳವಡಿಸಲಾಗಿದೆ. ೩೮೪ ಸೂಕ್ಷ್ಮ ಮತಗಟ್ಟೆಗಳಲ್ಲಿ ಸೂಕ್ಷ್ಮ ವೀಕ್ಷಕರ ನೇಮಕಮಾಡಿ ನಿಗಾವಹಿಸಲಾಗಿದೆ. ೯೯ ಸೆಕ್ಟರ್ ಮೊಬೈಲ್‌ಗಳನ್ನು ರಚಿಸಲಾಗಿದೆ. ೨೫ ಪೊಲೀಸ್ ವೃತ್ತ ನಿರೀಕ್ಷಕರು ಹಾಗೂ ಎಂಟು ಪೊಲೀಸ್ ಉಪಾಧೀಕ್ಷಕರ ಮೇಲ್ವಿಚಾರಣೆಯಲ್ಲಿ ನಿಗಾ ವಹಿಸಲಾಗಿದೆ ಎಂದರು.ವಿದ್ಯುನ್ಮಾನ ಮತಯಂತ್ರಗಳ ಸಾಗಾಣಿಕೆ, ಮತಗಟ್ಟೆಗಳಿಗೆ ಭದ್ರತಾ ವ್ಯವಸ್ಥೆ, ಸುಗಮ ಮತದಾನ ಪ್ರಕ್ರಿಯೆಗೆ ಹಾವೇರಿ ಜಿಲ್ಲೆಯಲ್ಲಿ ಆರು ಜನ ಡಿವೈಎಸ್‌ಪಿಗಳು, ೧೯ ಜನ ಸಿಪಿಐಗಳು, ೪೫ ಜನ ಪಿಎಸ್‌ಐ, ೧೦೧ ಎಎಸ್‌ಐ, ೩೭೧ ಎಚ್.ಸಿ., ೯೬೩ ಪಿಸಿ, ೧೦೦೦ ಹೋಮ್ ಗಾರ್ಡ್, ೧೮ ಫಾರೆಸ್ಟ್ ಗಾರ್ಡ್ ಒಳಗೊಂಡಂತೆ ೨೫೨೫ ಹಾಗೂ ಮೂರು ಕೇರಳ ರಾಜ್ಯದ ಶಸ್ತ್ರಪಡೆಯ ಮೂರು ತುಕಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಸುರಕ್ಷತೆ ಹಾಗೂ ಭದ್ರತಾ ಕಾರ್ಯ ನಿರ್ವಹಿಸಲಿದೆ. ಇದೇ ಮಾದರಿಯಲ್ಲಿ ಗದಗ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಜನ ಡಿವೈಎಸ್, ೧೨ ಸಿಪಿಐ, ೩೧ ಜನ ಪಿಎಸ್‌ಐ, ೫೨ ಎ.ಎಸ್‌ಐ, ೩೯೬ ಜನ ಎಚ್.ಸಿ., ೪೮೭ ಜನ ಪಿಸಿ, ೫೪೭ ಹೋಮ್ ಗಾರ್ಡ್, ೧೦ ಜನ ಫಾರೆಸ್ಟ್ ಗಾರ್ಡ್ ಒಳಗೊಂಡಂತೆ ೧೫೨೯ ಜನ ಹಾಗೂ ಕೇರಳ ರಾಜ್ಯ ಶಸ್ತ್ರ ಪಡೆಯ ಮೂರು ಕಂಪನಿಗಳು ಸುರಕ್ಷಾ ಹಾಗೂ ಭದ್ರತಾ ಕಾರ್ಯವನ್ನು ನಿರ್ವಹಿಸಲಿವೆ ಎಂದು ಮಾಹಿತಿ ನೀಡಿದರು.

೧೭.೯೨ ಲಕ್ಷ ಮತದಾರರು: ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೯,೦೨,೧೧೯ ಪುರುಷರು, ೮,೯೦,೫೭೨ ಮಹಿಳೆಯರು ಹಾಗೂ ೮೩ ಇತರೆ ಮತದಾರರು ಒಳಗೊಂಡಂತೆ ೧೭,೯೨,೭೭೪ ಜನ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.ಈ ದಾಖಲೆ ಇರಲಿ: ಮೇ ೭ ರಂದು ನಡೆಯಲಿರುವ ಮತದಾನಕ್ಕೆ ತೆರಳುವ ಮುನ್ನ ಮತದಾರರ ವೋಟರ್ ಸ್ಲೀಪ್ ಜೊತೆಗೆ ಭಾರತ ಚುನಾವಣಾ ಆಯೋಗ ನೀಡಿರುವ ಗುರುತಿನ ಪತ್ರ ಕಡ್ಡಾಯವಾಗಿದೆ. ಚುನಾವಣಾ ಆಯೋಗ ಗುರುತಿಸಿರುವ ಪೋಟೋಸಹಿತ ಈ ೧೨ ಗುರುತಿನ ಕಾರ್ಡ್‌ಗಳ ಪೈಕಿ ಯಾವುದಾದರೂ ಒಂದು ಕಾರ್ಡ್ ತೆಗೆದುಕೊಂಡು ಹೋಗಿ ಮತ ಹಾಕಬಹುದು ಎಂದರು.ಮೊಬೈಲ್ ನಿಷೇಧ:ಮತಗಟ್ಟೆ ಕೊಠಡಿಯೊಳಗೆ ಮತದಾನ ಮಾಡುವಾಗ ತೆರಳುವಾಗ ಮೊಬೈಲ್‌ಗಳನ್ನು ತೆಗೆದುಕೊಂಡು ಹೋಗಲು ಅವಕಾಶ ನಿರಾಕರಿಸಲಾಗಿದೆ.

ಮನೆಯಿಂದ ೧೭೭೦ ಜನ ಮತದಾನ: ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೬೦೯ ಜನ ವಿಶೇಷಚೇತನರು ಹಾಗೂ ೮೫ ವರ್ಷಕ್ಕಿಂತ ಮೇಲ್ಪಟ್ಟ ೧೧೬೧ ಹಿರಿಯ ಮತದಾರರು ಮನೆಯಿಂದಲೇ ಮತ ಚಲಾಯಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆ ೧೫,೫೩೧ ಹಿರಿಯ ಮತದಾರರ ಪೈಕಿ ೧೨೨೦ ಜನ ಮನೆಯಿಂದ ಮತದಾನ ಮಾಡಲು ಒಪ್ಪಿಗೆ ನೀಡಿದ್ದರು. ಈ ಪೈಕಿ ೧೧೬೧ ಜನ ಮತ ಚಲಾಯಿಸಿದ್ದಾರೆ. ೨೭,೫೯೨ ವಿಶೇಷಚೇತನ ಮತದಾರರ ಪೈಕಿ ೬೨೨ ಜನ ಮನೆಯಲ್ಲೇ ಮತದಾನಕ್ಕೆ ಒಪ್ಪಿಗೆ ಸೂಚಿಸಿ ೬೦೯ ಜನ ಮಾತ್ರ ಮತದಾನ ಮಾಡಿರುವುದಾಗಿ ತಿಳಿಸಿದರು.

ಐದು ಎಫ್‌ಐಆರ್ ದಾಖಲು: ಈವರೆಗೆ ವಿವಿಧ ಪ್ರಕರಣಗಳಡಿ ಐದು ಎಫ್‌ಐಆರ್‌ಗಳು ದಾಖಲಾಗಿವೆ. ಉಳಿದಂತೆ ರು.೧,೪೧,೭೬,೬೦೦ ನಗದು ವಶಪಡಿಸಿಕೊಳ್ಳಲಾಗಿದೆ. ರು.೧,೭೦,೪೮,೬೭೪ ಮೌಲ್ಯದ ೬೨,೯೭೨ ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ರು.೮೦,೪೨೦ ಮೌಲ್ಯದ ೩,೫೫೬ ಕೆ.ಜಿ. ಡ್ರಗ್‌ ವಶಪಡಿಸಿಕೊಳ್ಳಲಾಗಿದೆ. ರು.೨.೦೫ ಲಕ್ಷ ಮೊತ್ತದ ೨,೪೭೪ ಕೆ.ಜಿ. ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ. ರು. ೫,೯೨,೩೫೦ ಮೊತ್ತದ ವಿವಿಧ ವಸ್ತು, ಸಾಮಗ್ರಿಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ. ಈವರೆಗೆ ಒಟ್ಟಾರೆ ೩,೨೧,೧೩,೦೪೪ ಮೊತ್ತದ ನಗದು ಹಾಗೂ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ೨,೫೬೫ ಅಬಕಾರಿ ಪ್ರಕರಣಗಳು ಹಾಗೂ ಎರಡು ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದ ಪ್ರಕರಣಗಳು ದಾಖಲಿಸಿಕೊಳ್ಳಲಾಗಿದೆ ಎಂದರು.ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್ ಅವರು ಮಾಹಿತಿ ನೀಡಿ, ಬೇಸಿಗೆ ಬಿರು ಬಿಸಿಲು ಹಾಗೂ ತೀವ್ರತರ ತಾಪಮಾನ ಕಾರಣ ಎಲ್ಲ ಮತಗಟ್ಟೆಗಳಲ್ಲೂ ಮತದಾರರಿಗೆ ನೆರಳಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ. ಯಾವ ಮತಗಟ್ಟೆಗಳಲ್ಲಿ ನೆರಳಿನ ಅವಶ್ಯಕತೆ ಇದೆ ಅಲ್ಲಲ್ಲಿ ಶಾಮಿಯಾನ ಹಾಕಿ ನೆರಳಿನ ವ್ಯವಸ್ಥೆಗೆ ಸೂಚಿಸಲಾಗಿದೆ. ಹಿರಿಯ ಮತದಾರರಿಗೆ, ವಿಶೇಷಚೇತನರಿಗೆ ವ್ಹೀಲ್ ಚೇರ್ ವ್ಯವಸ್ಥೆ, ಮಕ್ಕಳಿಗೆ ತಾತ್ಕಾಲಿಕ ಫ್ಲೇಹೋಂ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಆರೋಗ್ಯ ವ್ಯವಸ್ಥೆ ಮಾಡಲಾಗಿದೆ. ಹಿರಿಯ ನಾಗರಿಕರಿಗೆ ಮತ್ತು ವಿಶೇಷಚೇತನರಿಗೆ ನೆರವು ನೀಡಲು ೧೮ ವರ್ಷದೊಳಗಿನ ಯುವಕ ಮತ್ತು ಯುವತಿಯರನ್ನು ಸ್ವಯಂ ಸೇವಕರಾಗಿ ಮತಗಟ್ಟೆಗಳಿಗೆ ನಿಯೋಜಿಸಲಾಗಿದೆ ಎಂದರು. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಐದರಂತೆ ಸಖಿ ಮತಗಟ್ಟೆಗಳು, ತಲಾ ಒಂದರಂತೆ ವಿಶೇಷಚೇತನರ ಮತಗಟ್ಟೆ, ಥೀಮ್ ಬೇಸ್ ಮತಗಟ್ಟೆ ಹಾಗೂ ಯುವ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಒಟ್ಟಾರೆ ೪೦ ಸಖಿ ಮತಗಟ್ಟೆಗಳು, ತಲಾ ಎಂಟರಂತೆ ಪಿಡಬ್ಲ್ಯೂಡಿ, ಥೀಮ್ ಹಾಗೂ ಯಂಗ್ ಮತಗಟ್ಟೆಗಳನ್ನು ತೆರೆಯಲಾಗುವುದು ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಉಪಸ್ಥಿತರಿದ್ದರು.