ಸಾರಾಂಶ
ಕನ್ನಡಪ್ರಭ ವಾರ್ತೆ, ತರೀಕೆರೆ
ಇಂದಿನ ಮಕ್ಕಳೇ ಭವ್ಯ ಭಾರತದ ನಿರ್ಮಾತೃಗಳು ಎಂದು ನೇರಲಕೆರೆ ಗ್ರಾಮದ ಶ್ರೀ ಅಮೃತೇಶ್ವರ ಪ್ರೌಢಶಾಲೆ ಸ್ಥಳೀಯ ಸಲಹಾ ಸಮಿತಿ ಉಪಾಧ್ಯಕ್ಷ ಷಡಕ್ಷರಪ್ಪ ತಿಳಿಸಿದರು.ನೇರಲಕೆರೆ ಗ್ರಾಮದ ಶ್ರೀ ಅಮೃತೇಶ್ವರ ಪ್ರೌಢಶಾಲೆಯಿಂದ ಶಾಲೆಯಲ್ಲಿ ಏರ್ಪಡಿಸಿದ್ದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಶಾಲಾ ಆವರಣದಲ್ಲಿ ಮಕ್ಕಳ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಒಂದು ಪ್ರಾರ್ಥನಾಲಯದ ಅವಶ್ಯಕತೆ ಇದ್ದು, ಮುಂದಿನ ಗಣರಾಜ್ಯೋತ್ಸವ ಆಚರಣೆ ವೇಳೆಗೆ ಎಲ್ಲರೂ ಸೇರಿ ಒಂದು ಪ್ರಾರ್ಥನಾಲಯ ನಿರ್ಮಿಸೋಣ ಎಂದು ಹೇಳಿದರು.ಶಾಲೆ ಸಹಶಿಕ್ಷಕಿ ಮಂಜುಳ ಮಲ್ಲಿಗವಾಡ ಮಾತನಾಡಿ ಇಂದು ಗಣರಾಜ್ಯೋತ್ಸವದ ಜೊತೆಗೆ ರಾಮರಾಜ್ಯೋತ್ಸವ ಕೂಡ ಅನುಷ್ಠಾನಕ್ಕೆ ಬಂದಿದೆ. ಡಾ. ಬಿ ಆರ್ ಅಂಬೇಡ್ಕರ್ ನಮ್ಮ ದೇಶಕ್ಕೆ ಅವಶ್ಯಕವಾಗಿದ್ದ ಸಂವಿಧಾನವನ್ನು ಇತರರ ನೆರವಿನಿಂದ ಹೇಗೆ ಸಿದ್ಧಪಡಿಸಿದರು ಎಂಬುದನ್ನು ತಿಳಿಸಿದರು. ಪ್ರತಿ ಪ್ರಜೆಗಳ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ತಿಳಿಸಿದ ಅವರು ಅವುಗಳನ್ನು ನಾವು ನೆರವೇರಿಸಲೇಬೇಕು ಎಂದು ಹೇಳಿದರು.
ನಿವೃತ್ತ ಶಿಕ್ಷಕ ಟಿ ಪುಟ್ಟಪ್ಪ ಮಾತನಾಡಿ. ಹಲವಾರು ಪ್ರಾಂತ್ಯಗಳ ಪ್ರಾಬಲ್ಯದಿಂದ ನಲುಗಿ ಹೋಗಿದ್ದ ಭಾರತವನ್ನು ಹೇಗೆ ಒಗ್ಗೂಡಿಸಲಾಯಿತು ಎಂಬುದನ್ನು ವರ್ಣಿಸುವ ಜೊತೆಗೆ ದೇಶದ ಸಂವಿಧಾನವನ್ನು ಹೇಗೆ ರಚಿಸಲಾಯಿತು ಎಂದು ತಿಳಿಸಿದರು.ಮುಖ್ಯ ಶಿಕ್ಷಕ ಹಾಲೇಶ್ ಕೆ ಟಿ, ದೇಶದ ಸಂವಿಧಾನವನ್ನು ಜ. 26, 1950 ರಂದು ಜಾರಿಗೆ ತಂದ ಇತಿಹಾಸ ವಿವರಿಸಿದರು, ಸಂವಿಧಾನದ ಪೂರ್ವ ಪೀಠಿಕೆಯ ವಿವಿಧ ವಿಷಯಗಳ ಅರ್ಥ ಮತ್ತು ಪ್ರಾಮುಖ್ಯತೆ ಬಗ್ಗೆ ಮಾತನಾಡಿ ಪ್ರಪಂಚದಲ್ಲೇ ಅತ್ಯಂತ ಉತ್ತಮ ಸಂವಿಧಾನ ರಚಿಸಲಾಗಿದೆ ಎಂದು ತಿಳಿಸಿದ ಅವರು ಶ್ರೀ ಅಮೃತೇಶ್ವರ ಪ್ರೌಢಶಾಲೆ ಆವರಣದ ಸೌಂದರ್ಯ ಹೆಚ್ಚಿಸುವಲ್ಲಿ ಸ್ಥಳೀಯ ಮುಖಂಡರು, ಸಮಿತಿ ಪದಾಧಿಕಾರಿಗಳ ಮತ್ತು ಹಿರಿಯ ವಿದ್ಯಾರ್ಥಿಗಳ ಕೊಡುಗೆ ಬಣ್ಣಿಸಿದರು.
ವಿದ್ಯಾರ್ಥಿನಿಯರಾದ ಆಶಾ, ಉಮಾ, ಸಹನ, ಪವಿತ್ರ, ಜಯಶ್ರೀ, ಹಂಸವೇಣಿ, ಪ್ರಕೃತಿ ಮಾತನಾಡಿದರು. ಸ್ಥಳೀಯ ಸಲಹಾ ಸಮಿತಿ ಸದಸ್ಯರಾದ ಬಸವರಾಜಪ್ಪ ಟಿ, ಎನ್ ಪಿ ಈಶ್ವರಪ್ಪ, ಗ್ರಾಮಸ್ಥರಾದ ಚಂದ್ರಪ್ಪ, ಹಾಸ್ಟೆಲ್ ವಾರ್ಡನ್ ಅಕ್ಷತ, ಸಹ ಶಿಕ್ಷಕ ಸತೀಶ್ ನಂದಿಹಳ್ಳಿ, ಸಹ ಶಿಕ್ಷಕಿ ಸವಿತ, ಗಿರಿಜಮ್ಮ, ಹೇಮಾವತಿ, ರುದ್ರಮ್ಮ, ಭಾಗ್ಯಮ್ಮ, ರತ್ನಮ್ಮ, ಅನನ್ಯ, ಶಾರದಮ್ಮ, ಪಲ್ಲವಿ, ಸಹ ಶಿಕ್ಷಕರಾದ ಖಿಜರ್‌ಖಾನ್, ರಮಾಕಾಂತ್ ಮತ್ತಿತರರು ಭಾಗವಹಿಸಿದ್ದರು.27ಕೆಟಿಆರ್.ಕೆಃ02ಃ
ತರೀಕೆರೆ ಸಮೀಪದ ನೇರಲಕೆರೆ ಗ್ರಾಮದಲ್ಲಿ ಶ್ರೀ ಅಮೃತಾಪುರ ಪ್ರೌಢಶಾಲೆಯಿಂದ ಏರ್ಪಡಿಸಿದ್ದ ಗಣರಾಜ್ಯೋತ್ಸವದಲ್ಲಿ ಸಹ ಶಿಕ್ಷಕ ಸತೀಶ್ ನಂದಿಹಳ್ಳಿ ಮಾತನಾಡಿದರು. ಸ್ಥಳೀಯ ಸಲಹಾ ಸಮಿತಿ ಉಪಾಧ್ಯಕ್ಷ ಷಡಕ್ಷರಪ್ಪ, ಮುಖ್ಯ ಶಿಕ್ಷಕ ಹಾಲೇಶ್ ಕೆ.ಟಿ ಮತ್ತಿತರರು ಇದ್ದಾರೆ.