ಇಂದು ಶಿವದೂತ ಪಂಜುರ್ಲಿ ಪುಣ್ಯಕತಾನಕ ಯಕ್ಷಗಾನ

| Published : Aug 23 2024, 01:06 AM IST

ಸಾರಾಂಶ

Today Shivduta Panjurli Punyakatanaka Yakshagana

ಯಾದಗಿರಿ: ಸರ್ಕಾರಿ ಪದವಿ ಮಹಾವಿದ್ಯಾಲಯದ ಲಿಂಗೈಕ್ಯ ವಿಶ್ವನಾಥ್ ರೆಡ್ಡಿ ಮುದ್ನಾಳ ಸಭಾಂಗಣದಲ್ಲಿ ಶುಕ್ರವಾರ ರಾತ್ರಿ 7 ಗಂಟೆಗೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಮಂದಾರ್ತಿ ಉಡುಪಿ ತಂಡದಿಂದ ಕಾಂತಾರ ಖ್ಯಾತಿಯ ಶಿವಧೂತ ಪಂಜುರ್ಲಿ ಪುಣ್ಯ ಕಥಾನಕ ಯಕ್ಷಗಾನ ಪ್ರದರ್ಶಿಸಲಿದ್ದಾರೆ. ಹೆಡಗಿಮದ್ರಾ ಶ್ರೀಮಠದ ಪೀಠಾಧಿಪತಿಗಳಾದ ಪಂಡಿತಾರಾಧ್ಯ ಶಾಂತ ಮಲ್ಲಿಕಾರ್ಜುನ ಶಿವಾಚಾರ್ಯರು ಯಕ್ಷಗಾನ ಉದ್ಘಾಟದಲ್ಲಿದ್ದಾರೆ. ಮುಖ್ಯ ಅತಿಥಿಗಳಾಗಿ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್, ತುನ್ನೂರ್, ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ, ಮಾಜಿ ಸಚಿವ ಡಾ. ಎ. ಬಿ. ಮಾಲಕರೆಡ್ಡಿ, ಮಾಜಿ ಶಾಸಕ ವೆಂಕಟರೆಡ್ಡಿ ಗೌಡ ಮುದ್ನಾಳ್, ದೇವೇಂದ್ರನಾಥ್‌ ನಾದ, ಪತ್ರಕರ್ತ ಆನಂದ್ ಸೌದಿ, ಬಸುಗೌಡ ಬಿಳಾರ, ದಿನೇಶ್ ಕುಮಾರ್ ಜೈನ್, ಸುನಿಲ್ ಕುಮಾರ್ ಮೂಲಿಮನಿ, ಸ್ಯಾಮ್ಸನ್ ಮಾಳಿಕೇರಿ ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.

-----

22ವೈಡಿಆರ್‌9 ; ಯಕ್ಷಗಾನ (ಸಾಂದರ್ಭಿಕ ಚಿತ್ರ)