ನಾಳೆ ಸಂವೇದ ಸಂಸ್ಥೆ ಸಮಾಲೋಚನೆ, ವಾರ್ಷಿಕೋತ್ಸವ

| Published : Jan 04 2025, 12:31 AM IST

ಸಾರಾಂಶ

ಎಂಎಸ್‌ಡಿ ಸಂವೇದ ತರಬೇತಿ ಮತ್ತು ಸಂಶೋಧನಾ ಕೇಂದ್ರದಿಂದ ಮಕ್ಕಳ ಕಲಿಕೆ ಮತ್ತು ವರ್ತನೆ ಕುರಿತಂತೆ ಸಮಾಲೋಚನೆ ಹಾಗೂ ಸಂಸ್ಥೆಯ 26ನೇ ವಾರ್ಷಿಕೋತ್ಸವ ಸಮಾರಂಭ ಜ.5ರಂದು ನಗರದ ಕುವೆಂಪು ಕನ್ನಡ ಭವನದಲ್ಲಿ ನಡೆಯಲಿದೆ ಎಂದು ಸಂವೇದ ಶಾಲೆ ಮುಖ್ಯ ಶಿಕ್ಷಕ ನಾಗರಾಜ ಶಿವಪ್ಪನವರ್ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಮಕ್ಕಳ ಕಲಿಕೆ-ವರ್ತನೆ ಕುರಿತಂತೆ ತಜ್ಞರು, ವೈದ್ಯರೊಂದಿಗೆ ಚರ್ಚೆ: ನಾಗರಾಜ ಮಾಹಿತಿ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಎಂಎಸ್‌ಡಿ ಸಂವೇದ ತರಬೇತಿ ಮತ್ತು ಸಂಶೋಧನಾ ಕೇಂದ್ರದಿಂದ ಮಕ್ಕಳ ಕಲಿಕೆ ಮತ್ತು ವರ್ತನೆ ಕುರಿತಂತೆ ಸಮಾಲೋಚನೆ ಹಾಗೂ ಸಂಸ್ಥೆಯ 26ನೇ ವಾರ್ಷಿಕೋತ್ಸವ ಸಮಾರಂಭ ಜ.5ರಂದು ನಗರದ ಕುವೆಂಪು ಕನ್ನಡ ಭವನದಲ್ಲಿ ನಡೆಯಲಿದೆ ಎಂದು ಸಂವೇದ ಶಾಲೆ ಮುಖ್ಯ ಶಿಕ್ಷಕ ನಾಗರಾಜ ಶಿವಪ್ಪನವರ್ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ಸಮಾಲೋಚನೆ ಕಾರ್ಯಕ್ರಮ ನಡೆಯಲಿದೆ. ನುರಿತ ಶಿಕ್ಷಣ ತಜ್ಞರು, ಮನಃಶಾಸ್ತ್ರಜ್ಞರು, ಚಿಕಿತ್ಸಕ ಮನಃಶಾಸ್ತ್ರಜ್ಞರು, ಮನೋರೋಗ ತಜ್ಞರು, ಮಕ್ಕಳ ತಜ್ಞರು ಪಾಲ್ಗೊಂಡು, ಪಾಲಕರು, ಶಿಕ್ಷಕರಿಗೆ ಸಲಹೆ, ಸೂಚನೆ, ಮಾರ್ಗದರ್ಶನ ನೀಡಲಿದ್ದಾರೆ ಎಂದರು.

ಜೆಜೆಎಂ ವೈದ್ಯಕೀಯ ಕಾಲೇಜಿನ ಮಾನಸಿಕ ರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಆರ್.ಶಾಂತೇರಿ ಪೈ ''''''''ಎಫೆಕ್ಟಿವ್ ಆಫ್ ಅಕಾಡೆಮಿಕ್ ಪ್ರೆಷರ್ ಆನ್ ಚಿಲ್ಡ್ರನ್'''''''' ವಿಷಯವಾಗಿ, ಸಂವೇದ ಚಿಕಿತ್ಸಕ ಮನಃಶಾಸ್ತ್ರಜ್ಞ ಡಾ.ಜಿ. ಜಯರಾಮ ''''''''ಬಿಹೇವಿಯರ್ ಪ್ರಾಬ್ಲಮ್ಸ್ ಇನ್ ಚಿಲ್ಡ್ರನ್'''''''' ವಿಚಾರದ ಬಗ್ಗೆ ಮಾತನಾಡುವರು. ಮಕ್ಕಳ ತಜ್ಞರಾದ ಡಾ.ಎಂ.ಬಿ.ಕೌಜಲಗಿ, ನರರೋಗ ತಜ್ಞೆ ಡಾ.ರಚಿತಾ ಪತ್ರೆ ಹಿರೇಮಠ, ಸಿಆರ್‌ಸಿ ನಿರ್ದೇಶಕಿ ಡಾ.ಮೀನಾಕ್ಷಿ, ಬೆಂಗಳೂರಿನ ಕ್ರೈಸ್ಟ್‌ ಯುನಿವರ್ಸಿಟಿಯ ಮನಃಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಪಿ.ಪ್ರಕಾಶ, ಡಾ.ಸುರೇಂದ್ರನಾಥ ಪಿ.ನಿಶಾನಿಮಠ ಸಮಾಲೋಚಕರಾಗಿ ಭಾಗವಹಿಸುವರು ಎಂದು ಹೇಳಿದರು.

ಸಂಜೆ 5ರಿಂದ ರಾತ್ರಿ 9ರವರೆಗೆ ಸಂಸ್ಥೆ ವಾರ್ಷಿಕೋತ್ಸವವು ಡಾ.ಪಿ.ಪ್ರಕಾಶ ಅಧ್ಯಕ್ಷತೆಯಲ್ಲಿ ಧಾರವಾಡದ ಐಐಟಿ ಡೀನ್ ಔಟ್ ರೀಚ್ ಪ್ರೊ. ಎಸ್.ಎಂ.ಶಿವಪ್ರಸಾದ, ಡಿಡಿಪಿಐ ಜಿ.ಕೊಟ್ರೇಶ, ಸಂವೇದದ ಡಾ. ಜಿ.ಜಯರಾಮು, ಜಿಲ್ಲಾ ವಿಕಲಚೇತನಕರ ಸಬಲೀಕರಣ ಇಲಾಖೆ ಅಧಿಕಾರಿ ಡಾ. ಕೆ.ಕೆ.ಪ್ರಕಾಶ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಪೋಷಕರು, ಶಿಕ್ಷಕರು, ಮನಃಶಾಸ್ತ್ರಜ್ಞರು, ವೈದ್ಯರು, ಶಿಕ್ಷಣ ತಜ್ಞರು, ಎಂ.ಇಡಿ, ಬಿ.ಇಡಿ, ಡಿ.ಇಡಿ ಶಿಕ್ಷಣಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.

ಸಂವೇದ ಸಂಸ್ಥೆಯ ಖಜಾಂಚಿ ಕಮಲಾಕ್ಷಿ ಐರಣಿ, ನೀತಾ ಎನ್.ಸುರ್ವೆ, ಜಯಪ್ಪ ಶಿವನಪ್ಪನವರ್ ಇತರರು ಇದ್ದರು.

- - -

ಬಾಕ್ಸ್‌ * ಮಕ್ಕಳ ಬೌದ್ಧಿಕ ಔನ್ನತ್ಯವೇ ಉದ್ದೇಶ ಕಲಿಕಾ ನೂನ್ಯತೆಯುಳ್ಳ ಮತ್ತು ಬೌದ್ಧಿಕ ಸವಾಲು ಎದುರಿಸುತ್ತಿರುವ ಮಕ್ಕಳ ಶ್ರೇಯೋಭಿಲಾಷಿಯಾಗಿ, ಆ ಮಕ್ಕಳ ಬೌದ್ಧಿಕ ಔನ್ನತ್ಯಕ್ಕಾಗಿ ಸದಾ ಕಾರ್ಯತತ್ಪರವಾಗಿರುವ ಒಂದು ಸ್ವಯಂ ಸೇವಾ ಸಂಸ್ಥೆಯಾಗಿ ಸಂವೇದ ಕೆಲಸ ಮಾಡುತ್ತಿದೆ. ಮಕ್ಕಳ ಸಮಸ್ಯೆಗಳನ್ನು ಪ್ರಾಥಮಿಕ ಹಂತದಲ್ಲೇ ಗುರುತಿಸಿ, ಸರಿಯಾದ ತರಬೇತಿ ನೀಡಿದರೆ ಉತ್ತಮ ನಾಗರೀಕರಾಗಿ ಮಕ್ಕಳನ್ನು ಬೆಳೆಸಬಹುದು. ಆದರೆ, ಸಮಸ್ಯೆಯನ್ನು ಗುರುತಿಸುವಲ್ಲಿ ಶಿಕ್ಷಕರು, ಪಾಲಕರು ಎಡವುತ್ತಿದ್ದಾರೆ. ದೈಹಿಕ ಸಮಸ್ಯೆ ಕಣ್ಣಿಗೆ ಕಾಣುತ್ತವೆ. ಆದರೆ, ಕಲಿಕಾ ನೂನ್ಯತೆ ಕಣ್ಣಿಗೆ ಕಾಣದ ಗಂಭೀರ ಸಮಸ್ಯೆಯಾಗಿದೆ. ಮಕ್ಕಳ ಕಲಿಕಾ ಸಮಸ್ಯೆಯನ್ನು ಚಿಕ್ಕ ವಯಸ್ಸಿನಲ್ಲೇ ಗುರುತಿಸದೇ ಹೋದರೆ ಶೈಕ್ಷಣಿಕ ಪ್ರಗತಿ ಕುಂಠಿತಗೊಳ್ಳುತ್ತಾ ಸಾಗುತ್ತದೆ ಎಂದು ನಾಗರಾಜ ವಿವರಿಸಿದರು.

- - - -3ಕೆಡಿವಿಜಿ3:

ದಾವಣಗೆರೆಯಲ್ಲಿ ಶುಕ್ರವಾರ ಎಂಎಸ್‌ಡಿ ಸಂವೇದನ ತರಬೇತಿ ಮತ್ತು ಸಂಶೋಧನಾ ಕೇಂದ್ರದ ಶಾಲೆ ಮುಖ್ಯ ಶಿಕ್ಷಕ ನಾಗರಾಜ ಶಿವಪ್ಪನವರ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.