ನಾಳೆ ರಣಜಿ ಪಂದ್ಯ: ಮೈದಾನದಲ್ಲಿ ಬೆವರಿಳಿಸಿದ ಆಟಗಾರರು

| Published : Nov 15 2025, 02:00 AM IST

ನಾಳೆ ರಣಜಿ ಪಂದ್ಯ: ಮೈದಾನದಲ್ಲಿ ಬೆವರಿಳಿಸಿದ ಆಟಗಾರರು
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ನ. 16ರಿಂದ ನಡೆಯಲಿರುವ ಕರ್ನಾಟಕ ಮತ್ತು ಚಂಡೀಗಢ ನಡುವಣ ರಣಜಿ ಪಂದ್ಯದ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಉಭಯ ತಂಡಗಳ ಆಟಗಾರರು ಅಭ್ಯಾಸ ನಡೆಸಿ ಬೆವರಿಳಿಸಿದರು.

ಹುಬ್ಬಳ್ಳಿ:

ಇಲ್ಲಿಯ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ನ. 16ರಿಂದ ನಡೆಯಲಿರುವ ಕರ್ನಾಟಕ ಮತ್ತು ಚಂಡೀಗಢ ನಡುವಣ ರಣಜಿ ಪಂದ್ಯದ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಉಭಯ ತಂಡಗಳ ಆಟಗಾರರು ಅಭ್ಯಾಸ ನಡೆಸಿ ಬೆವರಿಳಿಸಿದರು.

ಮಧ್ಯಾಹ್ನ 2.15ರ ಸುಮಾರಿಗೆ ಮೈದಾನಕ್ಕೆ ಬಂದಿಳಿದ ಉಭಯ ತಂಡದ ಆಟಗಾರರು ಸಂಜೆಯ ವರೆಗೂ ಅಭ್ಯಾಸ ನಡೆಸಿದರು. ನಂತರ ಉಭಯ ತಂಡದ ಆಟಗಾರರು ನೆಟ್ ಪ್ರ್ಯಾಕ್ಟೀಸ್‌ ಮಾಡಿ ಬೆವರು ಸುರಿಸಿದರು. ಈ ವೇಳೆ ನಗರದ ವಿವಿಧ ಕ್ರಿಕೆಟ್ ಕ್ಲಬ್‌ಗಳ ಆಟಗಾರರು ಅವರಿಗೆ ಸಾಥ್ ನೀಡಿದರು.

ವಿಶೇಷವಾಗಿ ಕರ್ನಾಟಕ ತಂಡದ ನಾಯಕ ಮಯಾಂಕ ಅಗರವಾಲ್, ಕರುಣ್ ನಾಯರ್, ಅಭಿನವ ಮನೋಹರ ರನ್ನಿಂಗ್ ಪ್ರ್ಯಾಕ್ಟಿಸ್ ಮಾಡಿದರು. ಇನ್ನೊಂದೆಡೆ ವಿದ್ವತ್ ಕಾವೇರಪ್ಪ ಬೌಲಿಂಗ್ ಅಭ್ಯಾಸ ಮಾಡಿದರು.

ಇನ್ನೊಂದೆಡೆ ಪಿಚ್ ಕ್ಯುರೇಟರ್‌ಗಳಾದ ಆರ್. ವೆಂಕಟಕೃಷ್ಣನ್, ಶ್ರೀರಾಮ ಮತ್ತು ಕೆಎಸ್‌ಸಿಎ ಧಾರವಾಡ ವಲಯದ ಹಂಗಾಮಿ ನಿಯಂತ್ರಕ ನಿಖಿಲ್ ಭೂಸದ ಮೈದಾನದ ಪರಿಶೀಲನೆ ನಡೆಸಿದರು.