ಬೂತ್‌ ಮಟ್ಟದಲ್ಲಿ ಮೋದಿ ಯೋಜನೆ ಮನೆ-ಮನೆಗೆ ಮುಟ್ಟಿಸಿ

| Published : Apr 15 2024, 01:20 AM IST

ಬೂತ್‌ ಮಟ್ಟದಲ್ಲಿ ಮೋದಿ ಯೋಜನೆ ಮನೆ-ಮನೆಗೆ ಮುಟ್ಟಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಬೂತ್‌ ಮಟ್ಟದಲ್ಲಿ ವಾರದ 2 ದಿನ ಮನೆ-ಮನೆಗೆ ತೆರಳಿ ಕೇಂದ್ರ ಸರ್ಕಾರದ ಮಹತ್ವ ಯೋಜನೆಗಳು ಸಕಾರಗೊಂಡಿರುವ ಕುರಿತು ಕರಪತ್ರ ನೀಡಿ ಮೋದಿ ಅವರು ದೇಶಕ್ಕೆ ನೀಡಿದ ಕೊಡುಗೆ ಕುರಿತು ಮತದಾರರಿಗೆ ತಿಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ.

ನವಲಗುಂದ:

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವದ ಯೋಜನೆಗಳನ್ನು ಮನೆ-ಮನೆಗೆ ತಲುಪಿಸಲು ಬೂತ್‌ಮಟ್ಟದ ಪದಾಧಿಕಾರಿಗಳ ಹೆಚ್ಚು ಜವಾಬ್ದಾರಿಯಿಂದ ಕಾರ್ಯ ನಿವ೯ಹಿಸಬೇಕು ಎಂದು ರಾಜ್ಯಸಭಾ ಸದಸ್ಯ ಹಾಗೂ ಚುನಾವಣಾ ಉಸ್ತುವಾರಿ ಈರಣ್ಣ ಕಡಾಡಿ ಹೇಳಿದರು.

ಪಟ್ಟಣದ ಅಣ್ಣಿಗೇರಿ ರಸ್ತೆಯಲ್ಲಿರುವ ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ನಡೆದ ಪದಾಧಿಕಾರಿಗಳ ಸಂಘಟನಾ ಸಭೆಯಲ್ಲಿ ಮಾತನಾಡಿದರು. ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆ ಅಂತ್ಯಕ್ಕಾಗಿ ಅರ್ಟಿಕಲ್-370 ಮತ್ತು 35ಎ ರದ್ದು ಮಾಡಿರುವುದು, ಪಾಕಿಸ್ತಾನ, ಅಪ್ಘಾನಿಸ್ತಾನ, ಬಾಂಗ್ಲಾದೇಶದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡಿರುವುದು ಇತಿಹಾಸದ ಪುಟದಲ್ಲಿಯೇ ಶಾಶ್ವತವಾಗಿ ಉಳಿದುಕೊಂಡಿದೆ ಎಂದರು.

ಬೂತ್‌ ಮಟ್ಟದಲ್ಲಿ ವಾರದ 2 ದಿನ ಮನೆ-ಮನೆಗೆ ತೆರಳಿ ಕೇಂದ್ರ ಸರ್ಕಾರದ ಮಹತ್ವ ಯೋಜನೆಗಳು ಸಕಾರಗೊಂಡಿರುವ ಕುರಿತು ಕರಪತ್ರ ನೀಡಿ ಮೋದಿ ಅವರು ದೇಶಕ್ಕೆ ನೀಡಿದ ಕೊಡುಗೆ ಕುರಿತು ಮತದಾರರಿಗೆ ತಿಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ವಾರದ ಒಂದು ದಿನ ಮಹಾ ಅಭಿಯಾನ ಹಮ್ಮಿಕೊಂಡು ಬಿಜೆಪಿ ಬಡವರಿಗೆ, ರೈತರಿಗೆ, ಯುವಕರಿಗೆ, ಮಹಿಳೆಯರಿಗೆ ನೀಡಿದ ಯೋಜನೆ ಕುರಿತು ತಿಳಿಸಬೇಕು ಎಂದ ಅವರು, ಇನ್ನು ಹೊಗೆ ಮುಕ್ತ ಮನೆ, ಆರೋಗ್ಯಯುಕ್ತ ಜೀವನಕ್ಕಾಗಿ 9.6 ಕೋಟಿ ಮನೆಗಳಿಗೆ ಉಚಿತ ಎಲ್‌ಪಿಜಿ ಸಂಪಕ೯ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ದೇಶದ ಸುರಕ್ಷತೆಗಾಗಿ ನರೇಂದ್ರ ಮೋದಿ ಕೊಡುಗೆ ಅಪಾರವಾಗಿದೆ. ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರೂ ಸಹ ಉತ್ತಮ ಯೋಜನೆ ನೀಡಿದ್ದರು. ಅದನ್ನು ನಾವು ಮತದಾರರಿಗೆ ತಲುಪಿಸುವ ಕೆಲಸವನ್ನು ಸರಿಯಾಗಿ ಮಾಡದ ಕಾರಣ 10 ವಷ೯ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ಮಾಡಿತು. ಇದರಿಂದ ದೇಶ ಅಧೋಗತಿಯತ್ತ ಸಾಗಿತ್ತು. ಮೋದಿ ಬಂದ ಬಳಿಕ ಅಭಿವೃದ್ಧಿಯತ್ತ ಸಾಗುತ್ತಿದೆ. ಆದರಿಂದ ಮತ್ತೊಮ್ಮೆ ಅವರನ್ನು ಪ್ರಧಾನಿಯನ್ನಾಗಿಸುವ ಮೂಲಕ ದೇಶದ ಪ್ರಗತಿಗೆ ಶ್ರಮಿಸಬೇಕಿದೆ ಎಂದು ಕರೆ ನೀಡಿದರು.

ಈ ವೇಳೆ ಎಂ. ನಾಗರಾಜು, ಮಲ್ಲಿಕಾರ್ಜುನ ಹೊಸಕೇರಿ, ಷಣ್ಮುಖ ಗುರಿಕಾರ, ಬಸಣ್ಣ ಬೆಳವಣಕಿ, ಸಿದ್ದನಗೌಡ ಪಾಟೀಲ (ಅಡ್ನೂರ), ಸಿದ್ದಣ್ಣ ಕಿಟಗೇರಿ, ನಿಂಗಪ್ಪ ಬಾರಕೇರ, ಶರಣಪ್ಪ ದಾನಪ್ಪಗೌಡರ, ಶಂಕರಗೌಡ ರಾಯನಗೌಡರ, ಬಸವರಾಜ ಕಟ್ಟಿಮನಿ, ಅಡಿವೆಪ್ಪ ಮನಮಿ, ಮೃತ್ಯುಂಜಯ ಹಿರೇಮಠ, ರಾಜಶೇಖರ ಕಂಬಳಿ, ಶರಣಪ್ಪ ಹಕ್ಕರಕಿ, ಪ್ರಭುಗೌಡ ಇಬ್ರಾಹಿಂಪೂರ, ಬಸವರಾಜ ಕಾತರಕಿ ಇದ್ದರು.