ಸಾರಾಂಶ
ಚನ್ನಪಟ್ಟಣ: ಯೋಗೇಶ್ವರ್ ಸೋತಾಗಲೂ, ಗೆದ್ದಾಗಲೂ ನಿಮ್ಮೊಂದಿಗೆ ಇರುತ್ತಾರೆ. ಆದರೆ, ಇನ್ನೊಬ್ಬರ ಬಗ್ಗೆ ಗೊತ್ತಿಲ್ಲ. ಮಧುಗಿರಿ, ರಾಮನಗರ, ಮಂಡ್ಯ ಆಯಿತು ಮುಂದೆ ಅವರು ಎಲ್ಲಿಗೆ ಟೂರಿಂಗ್ ಟಾಕೀಸ್ ಹೋಗುತ್ತಾರೋ ಗೊತ್ತಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕಂದಾಯ ಸಚಿವ ಕೃಷ್ಣ ಬೈರೇಗೌಡ ಪರೋಕ್ಷ ವಾಗ್ದಾಳಿ ನಡೆಸಿದರು.
ತಾಲೂಕಿನ ಕೋಡಂಬಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ಚುನಾವಣಾ ಪ್ರಚಾರ ನಡೆಸಿದ ಅವರು, ಯೋಗೇಶ್ವರ್‌ಗೆ ಈ ತಾಲೂಕಿನ ಇಂಚು-ಇಂಚು ಗೊತ್ತು, ಮನೆಮನೆ ಪರಿಚಯ ಇದೆ. ಅವರು ಎಂದಿಗೂ ನಿಮ್ಮೊಂದಿಗೆ ಇರುತ್ತಾರೆ. ಅವರು ಟೂರಿಂಗ್ ಟಾಕೀಸ್ ಅಂತು ಅಲ್ಲ ಎಂದರು.ಅವರು ಪಾರ್ಟಿ ಬಿಟ್ಟಿರಬಹುದು. ಆದರೆ, ಚನ್ನಪಟ್ಟಣ ಜನರನ್ನು ಬಿಟ್ಟಿಲ್ಲ. ತಾಲೂಕಿನ ಹಿತಚಿಂತಕರಾಗಿ ನಿಮ್ಮ ಜತೆ ಇದ್ದಾರೆ. ಇಲ್ಲಿ ಶೋ ಕ್ಲಿಕ್ ಆಗಲಿ ಬಿಡಲಿ ನಿಮ್ಮ ಜತೆ ಇರುತ್ತಾರೆ. ನೀವು ಹಾಲು ಕೊಟ್ಟರು ವಿಷ ಕೊಟ್ಟರೂ ನಿಮ್ಮ ಜತೆಯೇ ಇರುವವರ ಬೇಕಾ ಅಥವಾ ಅನುಕೂಲಕ್ಕೆ ತಕ್ಕಂತೆ ಬರುವವರು ಬೇಕಾ ಎಂದು ಪ್ರಶ್ನಿಸಿದರು.
ಅವರು ಮೇಲಿಂದ ಬಂದವರು ಮೇಲಿನ ಲೆವೆಲ್‌ನಲ್ಲೇ ಇರುತ್ತಾರೆ. ಇನ್ನೊಬ್ಬರಿಗೆ ಅವರು ಲೀಡರ್ ಆಗುವುದು ಬಿಟ್ಟರೆ ಜನರ ಕುರಿತು ಚಿಂತೆ ಇಲ್ಲ. ನಿಮ್ಮ ಜತೆಗೆ ನಾವು ಇದ್ದೇವೆ. ನಮ್ಮ ಕಡೆಯಿಂದ ತಾಲೂಕಿಗೆ ಬೇಕಾದದ್ದು ಮಾಡುತ್ತೇವೆ. ಎಲ್ಲವನ್ನು ಯೋಚಿಸಿ ಈ ಬಾರಿಯ ಚುನಾವಣೆಯಲ್ಲಿ ಯೋಗೇಶ್ವರ್ ಬೆಂಬಲಿಸಿ ಎಂದು ಮನವಿ ಮಾಡಿದರು.ಎಲ್ಲರಿಗೂ ಗ್ಯಾರೆಂಟಿ ನೀಡಿದ್ದೇವೆ: ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ರೈತರಿಗೆ ನೆರವಾಗುವ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಜಾತಿ, ಧರ್ಮ ಎನ್ನದೇ ಪಕ್ಷ ಎಂದು ಭೇದ-ಭಾವ ಮಾಡದೇ ಎಲ್ಲರಿಗೂ ಐದು ಗ್ಯಾರೆಂಟಿ ತಲುಪಿದೆ. ಗ್ಯಾರೆಂಟಿಯಿಂದ 5 ರಿಂದ 6 ಸಾವಿರ ರೂ. ಪ್ರತಿ ಬಡ ಕುಟಂಬಕ್ಕೂ ತಲುಪುತ್ತಿದೆ ಎಂದರು.
ಇನ್ನು ಮೂರೂವರೆ ವರ್ಷ ಸರ್ಕಾರ ಭದ್ರವಾಗಿ ಇರುತ್ತದೆ. ಡಿಸಿಎಂ ಭವಿಷ್ಯದಲ್ಲಿ ಇನ್ನು ಉತ್ತಮ ಎತ್ತರಕ್ಕೆ ಏರಲಿದ್ದಾರೆ ಎಂಬ ನಂಬಿಕೆ ಇದೆ. ಸಿದ್ದರಾಮಯ್ಯ, ಡಿಕೆಶಿ ಹಾಲು ನೀಡುವ ಹಸುವಿನಂತೆ, ಬುದ್ಧಿವಂತರಾದರೂ ಕಾಂಗ್ರೆಸ್ ಬೆಂಬಲಿಸಿ ಹಾಲು ಕರೆದುಕೊಳ್ಳಿ ಎಂದರು.ಪೊಟೋ೫ಸಿಪಿಟಿ೧: ತಾಲೂಕಿನ ಕೋಡಂಬಳ್ಳಿ ಜಿಪಂ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿ ಯೋಗೇಶ್ವರ್ ಹಾಗೂ ಸುರೇಶ್ ಅವರನ್ನು ಹೂವಿನಹಾರ ಹಾಕಿ ಸನ್ಮಾನಿಸಲಾಯಿತು.
ಪೊಟೋ೫ಸಿಪಿಟಿ೨: ತಾಲೂಕಿನ ಕೋಡಂಬಳ್ಳಿ ಜಿಪಂ ವ್ಯಾಪ್ತಿಯಲ್ಲಿ ಸುರೇಶ್ ಪ್ರಚಾರ ನಡೆಸಿದರು.ಪೊಟೋ೫ಸಿಪಿಟಿ೩: ತಾಲೂಕಿನ ಕೋಡಂಬಳ್ಳಿ ಜಿಪಂ ವ್ಯಾಪ್ತಿಯಲ್ಲಿ ಯೋಗೇಶ್ವರ್ ಜನರ ಬಳಿ ತೆರಳಿ ಮತಯಾಚನೆ ಮಾಡಿದರು.