ಮುಂದಿನ ಪೀಳಿಗೆಗೆ ವಿಷಮುಕ್ತ ಆಹಾರವನ್ನು ನೀಡಲು ನಾವು ಮುಂದಾಗಬೇಕು. ಆದ್ದರಿಂದ ಸಾವಯವ ಉತ್ಪಾದನೆ ಜಾಸ್ತಿಯಾಗಿ ಉತ್ತಮವಾದ ಬೆಳೆಯನ್ನು ನೀಡಿದಾಗ ಮಾತ್ರ ರೋಗದಿಂದ ದೂರವಾಗಬಹುದು ಎಂದು ಶಿಗ್ಗಾಂವಿಯ ಹಿರಿಯ ಸಹಾಯಕ ತೋಟಗಾರಿಕಾ ಅಧಿಕಾರಿ ಕಿಶೋರ ನಾಯಕ್ ಹೇಳಿದರು.
ಶಿಗ್ಗಾಂವಿ: ಮುಂದಿನ ಪೀಳಿಗೆಗೆ ವಿಷಮುಕ್ತ ಆಹಾರವನ್ನು ನೀಡಲು ನಾವು ಮುಂದಾಗಬೇಕು. ಆದ್ದರಿಂದ ಸಾವಯವ ಉತ್ಪಾದನೆ ಜಾಸ್ತಿಯಾಗಿ ಉತ್ತಮವಾದ ಬೆಳೆಯನ್ನು ನೀಡಿದಾಗ ಮಾತ್ರ ರೋಗದಿಂದ ದೂರವಾಗಬಹುದು ಎಂದು ಶಿಗ್ಗಾಂವಿಯ ಹಿರಿಯ ಸಹಾಯಕ ತೋಟಗಾರಿಕಾ ಅಧಿಕಾರಿ ಕಿಶೋರ ನಾಯಕ್ ಹೇಳಿದರು.
ತಾಲೂಕಿನ ಕುನ್ನೂರ ಗ್ರಾಮದ ಗ್ರಾಮ ದೇವತೆ ದೇವಸ್ಥಾನದ ಆವರಣದಲ್ಲಿ ತೋಟಗಾರಿಕೆ ಇಲಾಖೆಯ ಹಾಗೂ ಸ್ವ.ಡ್.ಕೆ.ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಪರಂಪರಾಗತ ಕೃಷಿ ವಿಕಾಸ ಯೋಜನೆಯ ರೈತರಿಗೆ ಮೂರನೇಯ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಸಾವಯವ ಉತ್ಪಾದನೆ ಜಾಸ್ತಿಯಾಗಿ ಉತ್ತಮವಾದ ಬೆಳೆಯನ್ನು ಬೆಳೆದಾಗ ಹೊರಗಿನ ದೇಶಕ್ಕೆ ರಪ್ತು ಆಗುವ ಕಡೆ ಹೆಚ್ಚಿನ ಬೆಲೆಗೆ ಮಾರಾಟವಾದಾಗ ತಮ್ಮ ಆರ್ಥಿಕ ಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ಸಾವಯವ ಮಾವು ಹೆಚ್ಚಿನ ಬೇಡಿಕೆ ಸಿಗಲಿದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಯೋಗದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಕುನ್ನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಸದುಪಯೋಗವನ್ನು ಮಾಡಿಕೊಳ್ಳಬೇಕು, ಕುನ್ನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೫೦೦ ಹೆಕ್ಟೇರ್ ಪ್ರದೇಶದಲ್ಲಿ ಮಾವು ಉತ್ಪಾದನೆಯನ್ನು ಹೆಚ್ಚಿಸುವ ಹಾಗೂ ಸಾವಯವಕ್ಕೆ ಮುಂದಾಗಬೇಕಾಗಿದೆ. ಇದಕ್ಕೆ ಬೇಕಾದ ಶೇ ೫೦ರಷ್ಟು ಸಹಾಯಧನವು ಕೂಡಾ ಇದ್ದು, ಸುತ್ತಮುತ್ತ ರೈತರು ಒಂದುಗೂಡಿ ಇದರ ಉದ್ದೇಶ ಹಾಗೂ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಮುಖ್ಯ ಸಂಪನ್ಮೂಲ ವ್ಯಕ್ತಿಗಳಾದ ಜಗದೀಶ ಶೀಲವಂತರ ಮಾತನಾಡಿ, ಎರೇಹುಳು ತೊಟ್ಟೆ ಎಕ್ಸೆನ್ ಪ್ಲಾನ್ ರಸಾಯನಿಕದಿಂದ ಸಾವಯವ ಮಾವು ಬೆಳೆಯುವುದಕ್ಕೆ ಸಾವಯವ ಕೃಷಿಗೆ ಈ ಸ್ಕೀಂ ತಂದಿದ್ದು ಮಣ್ಣು ಹಾಗೂ ನೀರಿನ ಗುಣಧರ್ಮವನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಯನ್ನು ಮಾಡಿಸುವ ವ್ಯವಸ್ಥೆ ಅಲ್ಲದೆ ಎರೇಹುಳು, ಸೇರಿದಂತೆ ಹಲವಾರು ಯೋಜನೆಗಳು ಇದರಲ್ಲಿ ಇದ್ದು, ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ವ್ಯವಸಾಯ ಸೇವಾ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಲ್.ಆರ್. ಪಾಟೀಲ ವಹಿಸಿದ್ದರು.ತರಬೇತಿ ಕಾರ್ಯಕ್ರಮದಲ್ಲಿ ಎಚ್. ಚನ್ನಬಸನಗೌಡ, ರಾಜು ಜಂಗಪ್ಪನವರ ಸೇರಿದಂತೆ ಸಾವಯವ ಅನುಕೂಲದ ಕುರಿತು ಸಮಗ್ರವಾಗಿ ತರಬೇತಿಯನ್ನು ನೀಡಿದರು.
ರೈತರಾದ ಮಲ್ಲನಗೌಡ್ರ ಪಾಟೀಲ, ಯುವ ಮುಖಂಡ ಆನಂದ ಲಮಾಣಿ ಸೇರಿದಂತೆ ಹಲವಾರು ಜನರು ಮಾತನಾಡಿದರು.ಮಾವು ಬೆಳಗಾರರ ಕುನಗಾಪಾರ್ವತಿ ಮಾವು ಬೆಳೆಗಾರರ ಸಂಘದ ನಾಯಕರಾದ ವೀರನಗೌಡ ಡಿ.ಪಾಟೀಲ, ದ್ಯಾಮವ್ವದೇವಿ ಸಂಘದ ಬಸನಗೌಡ ಬ್ಯಾಹಟ್ಟಿ, ಶಿದ್ದನಗೌಡ್ರ ಪಾಟೀಲ, ಡಾ,ಕೆ ಸಿ ಪಾಟೀಲ, ಸಹದೇವಪ್ಪ ಹರಕುಣ್ಣಿ, ಬಿ.ಎಸ್.ಹಿರೇಮಠ, ಅನೀಲಕುಮಾರ, ಶ್ರೀಕಾಂತ ಕೋಳೂರ, ಸುರೇಶಗೌಡ ಪಾಟೀಲ, ಮೈಲಾರೆಪ್ಪ ಇಂದೂರ, ಬುದ್ದಪ್ಪ ಮೋರಭದ, ಸೇರಿದಂತೆ ಹಲವಾರು ರೈತರು, ಮುಖಂಡರು ಕಾರ್ಯಕ್ರಮದಲ್ಲಿ ಇದ್ದರು.
ಕಾರ್ಯಕ್ರಮದ ಸ್ವಾಗತವನ್ನು ಕೃಷಿ ಇಲಾಖೆಯ ಮಾಬೂಲಿ ಮತ್ತೇಖಾನ ನೇರವೆರಿಸಿದರೆ ಒಂದನಾರ್ಪನೆಯನ್ನು ರಮೇಶ ಮುಂದಿನಮನಿ ನೇರವೇರಿಸಿದರು.