ಟಿಪಿಇ ಯಂತ್ರ ಕ್ಯಾನ್ಸರ್ ರೋಗಿಗಳಿಗೆ ಸಹಕಾರಿ

| Published : Jul 01 2025, 12:47 AM IST

ಟಿಪಿಇ ಯಂತ್ರ ಕ್ಯಾನ್ಸರ್ ರೋಗಿಗಳಿಗೆ ಸಹಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಕಿಮ್ಸ್‌ಗೆ ಸಾಕಷ್ಟು ಜನ ಬಡರೋಗಿಗಳು ಬರುತ್ತಾರೆ. ಅವರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಾಕಷ್ಟು ಸಂಘ ಸಂಸ್ಥೆಗಳು ವಿವಿಧ ವೈದ್ಯಕೀಯ ಪರಿಕರಿಗಳನ್ನು ನೀಡುತ್ತಿವೆ. ಅವುಗಳ ಸದ್ಬಳಕೆಯಾಗಬೇಕು ಮತ್ತು ಇದರಿಂದ ಎಷ್ಟು ರೋಗಿಗಳಿಗೆ ಉಪಯೋಗವಾಗಿದೆ ಎನ್ನುವ ಕುರಿತು ಕೆಎಂಸಿಆರ್‌ಐ ಅಂಕಿ-ಅಂಶ ಇಟ್ಟುಕೊಳ್ಳಬೇಕು.

ಹುಬ್ಬಳ್ಳಿ: ಕ್ಯಾನ್ಸರ್‌ನಿಂದ ತೊಂದರೆಯಾದಾಗ ರೋಗಿಗಳಿಗೆ ಚಿಕಿತ್ಸೆ ನೀಡಲು ಟಿಪಿಇ (ಥೆರಾಪಾಟಿಕ್ ಪ್ಲಾಸ್ಮಾ ಎಕ್ಸ್‌ಚೆಂಜ್ ಮಷಿನ್) ಸಹಕಾರಿಯಾಗಿದೆ. ಕೆಟ್ಟ ಪ್ಲಾಸ್ಮಾವನ್ನು ಈ ಟಿಪಿಇ ಯಂತ್ರ ಬೇರ್ಪಡಿಸಿ ಉತ್ತಮ ಪ್ಲಾಸ್ಮಾವನ್ನು ದೇಹದಲ್ಲಿ ಇರಿಸುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗೆ ಸಿಎಸ್‌ಆರ್‌ ಅನುದಾನದಲ್ಲಿ ₹೩೦ ಲಕ್ಷ ಬೆಲೆಯ ಟಿಪಿಇ ಯಂತ್ರವನ್ನು ವಿತರಿಸಿ ಮಾತನಾಡಿದರು.

ಈ ಯಂತ್ರ ₹30 ಲಕ್ಷ ಮೌಲ್ಯದ್ದಾಗಿದೆ. ರೋಗಿಗಳಿಗೆ ಕ್ಯಾನ್ಸರ್‌ನಿಂದ ತೊಂದರೆಯಾಗ ಈ ಯಂತ್ರ ಸಾಕಷ್ಟು ಸಹಕಾರಿಯಾಗಿದೆ. ತಂತ್ರಜ್ಞಾನ ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಿದ್ದು, ಇಂತಹ ಯಂತ್ರೋಪಕರಣಗಳು ಚಿಕಿತ್ಸೆಯಲ್ಲಿ ಬಹುಪಯೋಗಿಯಾಗಿವೆ ಎಂದರು.

ಈ ಹಿಂದಿನ ಸರ್ಕಾರದಲ್ಲಿ ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿರಲಿಲ್ಲ. ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ಉತ್ತಮ ಕಾರ್ಯ ಮಾಡುತ್ತಿದ್ದು, ವೈದ್ಯಕೀಯ ಕ್ಷೇತ್ರಕ್ಕೆ ಅನುಕೂಲ ಕಲ್ಪಿಸುವ ಕೆಲಸ ಮಾಡುತ್ತಿದೆ. ಕಿಮ್ಸ್‌ಗೆ ಸಾಕಷ್ಟು ಜನ ಬಡರೋಗಿಗಳು ಬರುತ್ತಾರೆ. ಅವರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಾಕಷ್ಟು ಸಂಘ ಸಂಸ್ಥೆಗಳು ವಿವಿಧ ವೈದ್ಯಕೀಯ ಪರಿಕರಿಗಳನ್ನು ನೀಡುತ್ತಿವೆ. ಅವುಗಳ ಸದ್ಬಳಕೆಯಾಗಬೇಕು ಮತ್ತು ಇದರಿಂದ ಎಷ್ಟು ರೋಗಿಗಳಿಗೆ ಉಪಯೋಗವಾಗಿದೆ ಎನ್ನುವ ಕುರಿತು ಕೆಎಂಸಿಆರ್‌ಐ ಅಂಕಿ-ಅಂಶ ಇಟ್ಟುಕೊಳ್ಳಬೇಕು ಎಂದು ಸೂಚಿಸಿದರು.

ಶಾಸಕ ಅರವಿಂದ ಬೆಲ್ಲದ, ಎಚ್.ಎನ್‌. ನಂದಕುಮಾರ, ನಿರ್ದೇಶಕ ಎಸ್.ಎಫ್. ಕಮ್ಮಾರ, ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ, ಡಾ. ರಾಜಶೇಖರ ಸಂಕನಾಳ, ಎಂ.ಎಸ್. ಕಳಸದ, ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ, ಡಾ‌. ಅಮೃತ ಇತರರು ಇದ್ದರು.