ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಆಯೋಜಕತ್ವದಲ್ಲಿ ಶ್ರೀ ಕ್ಷೇತ್ರ ಕದ್ರಿಯಲ್ಲಿ ಲಕ್ಷದೀಪೋತ್ಸವದ ಸಂದರ್ಭ ಸಂಕೀರ್ತನಾ ಭಜನೆ ನಡೆಯಿತು.ವೇದಮೂರ್ತಿ ವಾಸುದೇವ ಅಡಿಗ ಮತ್ತು ರಾಘವೇಂದ್ರ ಅಡಿಗರ ಮಾರ್ಗದರ್ಶನ, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಎ.ಜೆ. ಸಮೂಹ ಸಂಸ್ಥೆಗಳ ವಿಶ್ವಸ್ಥೆ ಶಾರದಾ ಎ.ಜೆ. ಶೆಟ್ಟಿ ದೀಪ ಬೆಳಗಿ ಉದ್ಘಾಟಿಸಿದರು. ಸಾಮೂಹಿಕ ಭಜನಾ ಕಾರ್ಯಕ್ರಮಕ್ಕೆ ಆರೂರು ಪ್ರಭಾಕರ ರಾವ್ ಮತ್ತು ಆಶಾ ಪ್ರಭಾಕರ ರಾವ್, ಶ್ರೀನಿವಾಸ ಸಮೂಹ ಸಂಸ್ಥೆಗಳ ವಿಶ್ವಸ್ಥರಾದ ವಿಜಯಲಕ್ಷ್ಮೀ ರಾವ್ ಮತ್ತು ಮಿತ್ರಾ ಶ್ರೀನಿವಾಸ ರಾವ್ ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ ಕುಂಜಾರುಗಿರಿ ಗಿರಿಬಳಗ, ಮದ್ದರಿನಾಮ ಸಂಕೀರ್ತನೋಪಾಸನಾ ಸಂಘ ಬಾಳ ಕಳವಾರು, ಶ್ರೀ ವಾದಿರಾಜ ತುಳಸಿ ಸಂಕೀರ್ತನಾ ಮಂಡಳಿ ಪಡುಬಿದ್ರಿ, ಶಿವಳ್ಳಿ ಸ್ಪಂದನಾ ಮಹಿಳಾ ಬಳಗ ಸುರತ್ಕಲ್ ವಲಯ, ಶಿವಳ್ಳಿ ಸ್ಪಂದನ ಕದ್ರಿ , ಶಿವಳ್ಳಿ ಸ್ಪಂದನ ಎಕ್ಕೂರು ವಲಯ, ಶಿವಳ್ಳಿ ಸ್ಪಂದನ ಮಹಿಳಾ ಘಟಕ ಕದ್ರಿ, ಮತ್ತಿತರ ಭಜನಾ ತಂಡಗಳು ಭಾಗವಹಿಸಿದ್ದವು.
ಭಜನೆ ಬಳಿಕ ವೇದ ವಿದ್ವಾನ್ ಕದ್ರಿ ರವಿ ಅಡಿಗ ಮತ್ತು ಅರುಣ ಅಡಿಗರ ಆಚಾರ್ಯತ್ವದಲ್ಲಿ ತುಳಸಿ ಪೂಜೆ ನೆರವೇರಿತು.ಈ ಸಂದರ್ಭ ಶ್ರೀ ದೇವಳದ ಕಾರ್ಯನಿರ್ವಹಣಾ ಅಧಿಕಾರಿ ಪ್ರವೀಣ್, ಡಾ.ಪ್ರಭಾಕರ್ ಅಡಿಗ, ಶಿವಳ್ಳಿ ಸ್ಪಂದನದ ಕೃಷ್ಣ ಭಟ್, ಎಲ್ಲೂರು ರಾಮಚಂದ್ರ ಭಟ್, ವಾಸುದೇವ ಭಟ್ ಉಜಿರೆ, ಪ್ರಭಾಕರ್ ರಾವ್ ಪೇಜಾವರ, ಸುಧಾಕರ ರಾವ್ ಪೇಜಾವರ, ರಾಮಕೃಷ್ಣ ರಾವ್, ಡಾ.ಎಂ.ಪ್ರಭಾಕರ್ ಜೋಶಿ, ಪ್ರೊ. ಎಂ.ಬಿ ಪುರಾಣಿಕ್ , ಗೋಕುಲ್ ಕದ್ರಿ, ಚಂದ್ರಶೇಖರ ಮಯ್ಯ, ಪ್ರೊ.ಜಿ.ಕೆ. ಭಟ್ ಸೇರಾಜೆ, ಅರುಣ್ ಕದ್ರಿ, ರವಿ ಶೆಟ್ಟಿ,ವೀಣಾ ಶೆಟ್ಟಿ, ನಿವೇದಿತಾ ಎನ್.ಶೆಟ್ಟಿ, ಶುಭಾ ಜಯರಾಂ ಭಟ್, ಶೋಭಾ ಸೀತಾರಾಂ ಭಟ್, ಸುಮಾ ಪ್ರಸಾದ್ ಮತ್ತಿತರರಿದ್ದರು.
ಪೂರ್ಣಿಮಾ ರಾವ್ ಪೇಜಾವರ ನಿರೂಪಿಸಿದರು.ಸುಮಾರು 200ಕ್ಕೂ ಅಧಿಕ ಮಂದಿ ಭಜನಾ ಕಲಾವಿದರು ಭಜನೆ ನಡೆಸಿ ಕೊಟ್ಟರು. ಶ್ರೀ ದೇವಳದ ಸಂಪ್ರದಾಯದಂತೆ ಜೋಗಿ ಮಠದ ಅರಸರ ಉಪಸ್ಥಿತಿಯಲ್ಲಿ ದೇವರ ಉತ್ಸವ, ಬಲಿ, ರಥೋತ್ಸವದೊಂದಿಗೆ ಲಕ್ಷದೀಪೋತ್ಸವ ಸಂಪನ್ನಗೊಂಡಿತು.