ಸಾರಾಂಶ
ಭೂಲೋಕದ ಸ್ವರ್ಗ ಚಂದ್ರದ್ರೋಣ ಪರ್ವತ ಶ್ರೇಣಿ । ನಿರೀಕ್ಷೆಗೂ ಮೀರಿ ಆಗಮಿಸುತ್ತಿರುವ ಪ್ರವಾಸಿಗರು
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮಳೆಗಾಲ ಆಗಮಿಸುತ್ತಿದ್ದಂತೆ ಮಲೆನಾಡು ಅಕ್ಷರಶಃ ಸ್ವರ್ಗವಾಗಿರುತ್ತದೆ. ಅದರಲ್ಲಿಯೂ ಚಂದ್ರದ್ರೋಣ ಪರ್ವತ ಶ್ರೇಣಿ ಸೌಂದರ್ಯದಲ್ಲಿ ಇನ್ನೂ ಒಂದು ಹೆಜ್ಜೆ ಮುಂದು ಹೋಗಿ ಅತಿಹೆಚ್ಚಿನ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತದೆ. ಹೀಗಾಗಿಯೇ ಮುಂಗಾರು ಆರಂಭಗೊಳ್ಳುತ್ತಿದ್ದಂತೆ ಚಂದ್ರದ್ರೋಣ ಪರ್ವತ ಶ್ರೇಣಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ 10 ಪಟ್ಟು ಹೆಚ್ಚಾಗುತ್ತದೆ. ಅದರಲ್ಲೂ ವಾರಾಂತ್ಯದಲ್ಲಂತೂ ಗಿರಿಶ್ರೇಣಿಯಲ್ಲಿ ಪ್ರವಾಸಿಗರ ನೂಕು ನುಗ್ಗಲು ಉಂಟಾಗುತ್ತಿದೆ.
ಈ ವರ್ಷವೂ ಚಂದ್ರದ್ರೋಣ ಪರ್ವತ ಶ್ರೇಣಿಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಅತಿ ಹೆಚ್ಚಾಗಿದೆ. ಹೀಗಾಗಿಯೇ ಭಾನುವಾರ ಏಕಾಏಕಿ ಗಿರಿ ಶ್ರೇಣಿಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಾದ ಕಾರಣ ನೂರಾರು ವಾಹನಗಳು ಟ್ರಾಫಿಕ್ ಜಾಮ್ ನಲ್ಲಿ ಸಿಲುಕುವಂತಾಗಿತ್ತು.ಗಿರಿ ತಪ್ಪಲಿನ ಪ್ರದೇಶವಾದ ಕೈಮರ ಚೆಕ್ ಪೋಸ್ಟ್ ನಿಂದಲೇ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇನ್ನು ಮುಳ್ಳಯ್ಯ ನಗಿರಿ ಮೇಲ್ಭಾಗದಲ್ಲಿಯೂ ನೂರಾರು ವಾಹನಗಳು ಸಾಲುಗಟ್ಟಿ ನಿಂತ ಪರಿಣಾಮ ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲು ಪೊಲೀಸರು ಹರ ಸಾಹಸ ಪಡುವಂತಾಯಿತು.ಸ್ಥಳೀಯರಿಗೆ ತೊಂದರೆ:
ವಾರಾಂತ್ಯದಲ್ಲಿ ಚಂದ್ರದ್ರೋಣ ಪರ್ವತ ಶ್ರೇಣಿಗೆ ಸಾವಿರಾರು ವಾಹನಗಳಲ್ಲಿ ಪ್ರವಾಸಿಗರು ಬರುವುದರಿಂದ ಟ್ರಾಫಿಕ್ ಜಾಮ್ ಸಾಮಾನ್ಯ ಎನ್ನುವಂತಾಗಿದೆ. ಇದರಿಂದ ಗಿರಿ ಶ್ರೇಣಿಯಲ್ಲಿರುವ ಗ್ರಾಮಗಳ ಜನ ಸಾಕಷ್ಟು ಸಂಕಷ್ಟ ಅನುಭವಿಸು ವಂತಾಗಿದೆ.ವಾರಂತ್ಯದಲ್ಲಿ ಗಿರಿ ಶ್ರೇಣಿಯಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗುವುದರಿಂದ ಇಲ್ಲಿನ ಸ್ಥಳೀಯರು ತಮ್ಮ ದಿನ ನಿತ್ಯದ ಕೆಲಸ ಕಾರ್ಯಗಳಿಗೆ ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ತೆರಳುವುದು ಸೇರಿದಂತೆ ಚಿಕ್ಕಮಗಳೂರು ನಗರಕ್ಕೆ ಬರಲು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ.--- ಬಾಕ್ಸ್ --ಪ್ರವಾಸಿ ವಾಹನಗಳನ್ನು ನಿಷೇಧಿಸಿಚಂದ್ರದ್ರೋಣ ಪರ್ವತ ಶ್ರೇಣಿಗೆ ಪ್ರವಾಸಿ ವಾಹನಗಳನ್ನು ನಿಷೇಧಿಸಬೇಕು. ಪ್ರವಾಸಿ ವಾಹನಗಳ ಬದಲಿಗೆ ಸರ್ಕಾರ ಮತ್ತು ಜಿಲ್ಲಾಡಳಿತದಿಂದಲೇ ವಾಹನಗಳ ವ್ಯವಸ್ಥೆ ಮಾಡಬೇಕು. ಆಗ ಗಿರಿ ಶ್ರೇಣಿಯಲ್ಲಿ ವಾಹನಗಳ ದಟ್ಟಣೆ ಕಡಿಮೆ ಮಾಡಲು ಸಾಧ್ಯ ಎಂದು ಪರಿಸರಾಸಕ್ತ ಜಿ. ವಿರೇಶ್ ಆಗ್ರಹಿಸಿದ್ದಾರೆ.
ಗಿರಿ ಶ್ರೇಣಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಇರುವ ಕೈಮರ ಚೆಕ್ ಪೋಸ್ಟ್ ಗಿಂತಲೂ ಹಿಂದೆಯೇ ಪ್ರವಾಸಿಗರ ವಾಹನಗಳ ಪಾರ್ಕಿಂಗ್ ಜಾಗದ ವ್ಯವಸ್ಥೆ ಮಾಡಬೇಕು. ಅಲ್ಲಿಂದ ಪ್ರವಾಸಿಗರನ್ನು ಸರ್ಕಾರದಿಂದಲೇ ಕಲ್ಪಿಸಲಾಗುವ ಮಿನಿ ಬಸ್ ಅಥವಾ ಸಫಾರಿ ವಾಹನಗಳಲ್ಲಿ ಗಿರಿ ಶ್ರೇಣಿಗೆ ಕರೆದೊಯ್ಯಬೇಕು. ಇದರಿಂದ ಗಿರಿ ಶ್ರೇಣಿಯಲ್ಲಿ ವಾಹನ ದಟ್ಟಣೆ ಕಡಿಮೆ ಯಾಗುವ ಜೊತೆಗೆ ಪ್ರವಾಸಿಗರಿಗೂ ಉತ್ತಮ ವ್ಯವಸ್ಥೆ ಕಲ್ಪಿಸಿದಂತಾಗುತ್ತದೆ. ಪರಿಸರದ ಮೇಲಿನ ಒತ್ತಡ ತಗ್ಗುತ್ತದೆ ಎಂದು ಹೇಳಿದ್ದಾರೆ.-- 6 ಕೆಸಿಕೆಎಂ 6ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ರಸ್ತೆಯಲ್ಲಿ ಭಾನುವಾರ ಸಾಲುಗಟ್ಟಿ ನಿಂತಿರುವ ಪ್ರವಾಸಿಗರ ವಾಹನಗಳು.