ಬಾಳೆಲೆಯಲ್ಲಿ ಟ್ರಾಫಿಕ್ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪರದಾಡುವಂತಾಗಿದೆ.

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ ಬಾಳೆಲೆಯಲ್ಲಿ ಟ್ರಾಫಿಕ್ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪರದಾಡುವಂತಾಗಿದೆ.ಬಾಳೆಲೆ ಶ್ರೀರಾಮ ವೃತ್ತದಿಂದ ಮುಂದೆ ಮುಖ್ಯರಸ್ತೆಯಲ್ಲಿ ಪಾರ್ಕಿಂಗ್ ನಿಯಮ ಜಾರಿಯಲ್ಲಿದ್ದು ತಿಂಗಳ 15 ದಿವಸ ಮುಖ್ಯ ರಸ್ತೆಯ ಒಂದು ಬದಿ ಉಳಿದ 15 ದಿವಸ ರಸ್ತೆಯ ಮತ್ತೋಂದು ಬದಿ ನಿಲುಗಡೆ ಮಾಡಬೇಕೆಂಬ ನಿಯಮವನ್ನು ಗ್ರಾಮ ಪಂಚಾಯಿತಿ ಜಾರಿ ಮಾಡಿದೆ. ಕಳೆದೆರಡು ತಿಂಗಳಿಂದ ರಸ್ತೆಯ ಎರಡು ಕಡೆ ಕೆಲವರು ವಾಹನ ಪಾರ್ಕಿಂಗ್ ಮಾಡುತ್ತಿರುವುದರೊಂದಿಗೆ ಖಾಸಗಿ ಬಸ್‌ಗಳು, ಕೆನರಾ ಬ್ಯಾಂಕ್ ಮುಂಭಾಗ ನಿಲ್ಲಿಸುವ ಬದಲಾಗಿ ಶ್ರೀರಾಮ ವೃತ್ತದ ಸನಿಹವೇ ನಿಲ್ಲಿಸಿಕೊಳುತ್ತಿದ್ದು, ಜೊತೆಗೆ ಕೆಲವು ಸರಕು ವಾಹನಗಳು ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಲೋಡಿಂಗ್, ಅನ್ ಲೊಡಿಂಗ್ ಮಾಡುವುದರಿಂದ ಪ್ರತಿ ದಿನ ಟ್ರಾಪಿಕ್ ಜಾಮ್ ಆಗುತ್ತಿದೆ. ಇದರಿಂದ ಪಾದಚಾರಿಗಳಿಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಪೋಲೀಸ್ ಇಲಾಖೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.