ಸಾರಾಂಶ
ಯಲ್ಲಾಪುರ: ಕಬ್ಬು, ಭತ್ತ, ಮೆಕ್ಕೆಜೋಳ, ಬಾಳೆ, ಅಡಕೆಗಳಂತಹ ಬೆಳೆಗಳನ್ನು ಹೊಂದಿರುವ ಅರಣ್ಯದ ಗಡಿಯಲ್ಲಿರುವ ಬೆಳೆಗಳನ್ನು ತಿನ್ನಲು ಆನೆಗಳನ್ನು ಆಕರ್ಷಿಸುತ್ತವೆ. ಆನೆಗಳ ಸಂಖ್ಯೆ ಇರುವ ಪ್ರದೇಶಗಳಲ್ಲಿ ಮಾನವ ಮತ್ತು ಆನೆ ಸಂಘರ್ಷಕ್ಕೆ ಇದು ಮುಖ್ಯ ಕಾರಣವಾಗಿದೆ ಎಂದು ಪುಣೆಯ ವನ್ಯಜೀವಿಗಳ ಸಂರಕ್ಷಣಾ ರಿಸರ್ಚ್ ಸೆಂಟರಿನ ವಿಜ್ಞಾನಿ ಡಾ. ಪ್ರಾಚಿ ಮೆಹ್ತಾ ತಿಳಿಸಿದ್ದಾರೆ.
ಹಳಿಯಾಳ ತಾಲೂಕಿನ ಕುಳಗಿಯಲ್ಲಿ ಇತ್ತೀಚೆಗೆ ನಡೆದ ಸಮುದಾಯ ಆಧರಿತ ಬೆಳೆ ಸಂರಕ್ಷಣಾ ವಿಧಾನ ತರಬೇತಿ ಶಿಬಿರದಲ್ಲಿ ಮಾಹಿತಿ ನೀಡಿದ ಅವರು, ರೈತರು ತಮ್ಮ ಜಮೀನನ್ನು ಸಂರಕ್ಷಿಸಿಕೊಳ್ಳುವುದಕ್ಕೆ ಹಲವು ಮಾರ್ಗೋಪಾಯಗಳನ್ನು ನೀಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರೈತರು ತಮ್ಮ ಬೆಳೆಗಳನ್ನು ಆನೆಗಳಿಂದ ರಕ್ಷಿಸಿಕೊಳ್ಳುವುದು ಹೇಗೆ? ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್‌ಜಿಒ, ವನ್ಯಜೀವಿ ಸಂಶೋಧನೆ ಮತ್ತು ಸಂರಕ್ಷಣಾ ಸೊಸೈಟಿ(ಡಬ್ಲ್ಯುಆರ್‌ಸಿಎಸ್) ಆನೆಗಳಿಂದ ತಮ್ಮ ಬೆಳೆಗಳನ್ನು ರಕ್ಷಿಸುವ ಸರಳ ವಿಧಾನಗಳ ಕುರಿತು ರೈತರಿಗೆ ತರಬೇತಿ ನೀಡುತ್ತಿದೆ ಎಂದರು.ಡಬ್ಲ್ಯುಆರ್‌ಸಿಎಸ್ ಸಂಸ್ಥೆಯಿಂದ ಮಾರ್ಗದರ್ಶಕರಾಗಿ ತರಬೇತಿ ನೀಡಲು ಪ್ರಾಚಿ ಮೆಹ್ತಾ, ಜಯಂತ ಕುಲಕರ್ಣಿ, ಅಜೀಂ ಮುಜಾವರ್, ಅಜಿಂಕ್ಯ ಬಾಗಲ್, ಭಾವುಕ್ ವಿಜಯ್, ಶ್ರೀಹರಿ ಹೆಗ್ಡೆ ಮತ್ತು ಪ್ರಜ್ವಲ್ ಕುಮಾರ್ ಬಿಎಸ್ ಭಾಗವಹಿಸಿದ್ದರು. ಚಿತ್ತೂರಿನ ಎಸಿಎಫ್ ಸಿ. ವೇಣುಗೋಪಾಲ್, ವಲಯಾರಣ್ಯಾಧಿಕಾರಿಗಳಾದ ಜಿ. ಶಿವಣ್ಣ, ತಿವಿತಿ ನಾಯ್ಡು, ಕೆ.ಮಣಿಕಂಠೇಶ್, ರಾಕೇಶ್ ಕಲ್ವಾ, ವನ್ಯಜೀವಿ ಜೀವಶಾಸ್ತ್ರಜ್ಞರೂ ಸೇರಿದಂತೆ ಚಿತ್ತೂರು ವಿಭಾಗದ ಮತ್ತು ಉತ್ತರ ಆಂಧ್ರಪ್ರದೇಶ ವಿಭಾಗದ ೧೫ ಅಧಿಕಾರಿಗಳು ಆನೆಗಳಿಂದ ಬೆಳೆಗಳನ್ನು ಹೇಗೆ ರಕ್ಷಿಸಬೇಕು ಎಂಬುದನ್ನು ಕಲಿಯಲು ಕಾರ್ಯಾಗಾರದಲ್ಲಿ ಮಾರ್ಗದರ್ಶನ ನೀಡಿದ್ದಾರೆ.
ಡಾ. ಪ್ರಾಚಿ ಮೆಹ್ತಾ(ಮೊ. ೯೦೧೧೦೫೨೧೯೩), ಜಯಂತ ಕುಲಕರ್ಣಿ(ಮೊ. ೯೦೧೧೦೫೨೧೯೪) ಅವರನ್ನು ಸಂಪರ್ಕಿಸಿ ರೈತರು ತಮ್ಮ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು.