ಮರ ಮುರಿದುಬಿದ್ದ ರಸ್ತೆ ಸಂಪರ್ಕ ಕಡಿತ

| Published : Jul 09 2024, 12:58 AM IST

ಸಾರಾಂಶ

ಬೃಹತ್‌ ಗಾತ್ರದ ಮರ ಬಿದ್ದ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ಹಿನ್ನೆಲೆ ವಾಹನಗಳು ಬಳಸು ರಸ್ತೆಯಲ್ಲಿ ಸಾಗಿದವು. ಸಂಜೆ ವೇಳೆ ಮರ ತೆರವುಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ನಾಪೋಕ್ಲು - ಭಾಗಮಂಡಲ ಮುಖ್ಯರಸ್ತೆಯ ಚೋನಕೆರೆ ಎಂಬಲ್ಲಿ ಬೃಹತ್ ಗಾತ್ರದ ಮರವೊಂದು ಮುರಿದುಬಿದ್ದ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡಿತು. ಭಾರಿ ಮಳೆಯಿಂದಾಗಿ ಮರ ಬುಡ ಸಹಿತ ರಸ್ತೆಗಡ್ಡಲಾಗಿ ಮುರಿದು ಬಿದ್ದಿದ್ದರಿಂದ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಯಿತು.

ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ವಾಹನಗಳು ಕುರುಳಿ -ಎಮ್ಮೆ ಮಾಡು ಮುಖಾಂತರ ಬಳಸು ರಸ್ತೆಯಲ್ಲಿ ಸಾಗಿದವು. ಬಲ್ಲಮಾವಟಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಣವಟ್ಟೀರ ಕುಶಾಲಪ್ಪ , ನಾಪೋಕ್ಕು ಗ್ರಾಮ ಪಂಚಾಯಿತಿ ಸದಸ್ಯ ಮಾಚೆಟ್ಟಿರ ಕುಶು ಕುಶಾಲಪ್ಪ, ಅರಣ್ಯ ಇಲಾಖೆಯ ಕಾಳೇಗೌಡ ಸಿಬ್ಬಂದಿ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡು ರಸ್ತೆ ಗಡ್ಡಲಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸಿದರು. ಸುಮಾರು 2 ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತು ಸಂಜೆಯ ವೇಳೆಗೆ ಮರವನ್ನು ತೆರವುಗೊಳಿಸಲಾಯಿತು.