ಬಸವೇಶ್ವರ ಏತ ನೀರಾವರಿಗೆ ಪ್ರಾಯೋಗಿಕ ಚಾಲನೆ

| Published : Jan 30 2025, 01:46 AM IST

ಸಾರಾಂಶ

ಮತಕ್ಷೇತ್ರದ ಉತ್ತರ ಭಾಗದ ಬಹು ನಿರೀಕ್ಷಿತ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯ ಮೊದಲ ಹಂತದ ನೀರು ಒದಗಿಸುವ ಪ್ರಾಯೋಗಿಕ ಕಾರ್ಯಕ್ಕೆ ಭಾನುವಾರ ಶಾಸಕ ರಾಜು ಕಾಗೆ ಹಾಗೂ ಅಥಣಿ‌ ಶಾಸಕ ಲಕ್ಷ್ಮಣ ಸವದಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ಮತ ಕ್ಷೇತ್ರದ ಉತ್ತರ ಭಾಗದ ಬಹು ನಿರೀಕ್ಷಿತ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯ ಮೊದಲ ಹಂತದ ನೀರು ಒದಗಿಸುವ ಪ್ರಾಯೋಗಿಕ ಕಾರ್ಯಕ್ಕೆ ಭಾನುವಾರ ಶಾಸಕ ರಾಜು ಕಾಗೆ ಹಾಗೂ ಅಥಣಿ‌ ಶಾಸಕ ಲಕ್ಷ್ಮಣ ಸವದಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಐನಾಪುರದ ಜಾಕ್‌ವೆಲ್‌ನಲ್ಲಿ ಮೊದಲ ಹಂತದ ಪ್ರಾಯೋಗಿಕ ಪರೀಕ್ಷೆಯ ಮೋಟಾರ್ ಬಟನ್ ಒತ್ತುವ ಮೂಲಕ ಚಾಲನೆ ನೀಡಿ ಮದಭಾವಿ ಗ್ರಾಮದ ಹೊರವಲಯದಲ್ಲಿ ಕಾಲುವೆ ಮೂಲಕ ನೀರಿ ಹರಿಯುವುದನ್ನು ವೀಕ್ಷಿಸಿ ಮಾತನಾಡಿದ ಶಾಸಕ ರಾಜು ಕಾಗೆ ಅವರು, ಈಗ ಪ್ರಾಯೋಗಿಕವಾಗಿ ಒಂದು ಪಂಪ್‌ನ್ನು ಪ್ರಾರಂಭಿಸಿ ಕಾಲುವೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಇದರಿಂದ ಮೊದಲನೇ ಹಂತದ ಸುಮಾರು 10 ಸಾವಿರ ಎಕರೆ ಜಮೀನುಗಳಿಗೆ ಅನುಕೂಲವಾಗಲಿದೆ. ಈ ಬೃಹತ್ ಯೋಜನೆ ಹಲವು ವರ್ಷಗಳ ಹಿಂದೆ ಪೂರ್ಣಗೊಳ್ಳಬೇಕಾಗಿತ್ತು. ಕಾರಣಾಂತರಗಳಿಂದ ಯೋಜನೆ ವಿಳಂಬವಾಗಿದ್ದು, ಬರುವ ದಿನಗಳಲ್ಲಿ ಇನ್ನು ಉಳಿದ ಕಾಮಗಾರಿ ಪೂರ್ಣಗೊಳಿಸಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಮೃತ ಹಸ್ತದಿಂದ ಯೋಜನೆಗೆ ಚಾಲನೆ ಕೊಡಿಸಿ ನನ್ನ ಮತಕ್ಷೇತ್ರದ ಉತ್ತರ ಭಾಗದ ರೈತರಿಗೆ ಅನುಕೂಲ ಮಾಡಲಾಗುವುದು ಎಂದು ಭರವಸೆ ನೀಡಿದರು.ಶಾಸಕ ಲಕ್ಷ್ಮಣ ಸವದಿ ಮಾತನಾಡಿದರು. ಮುಖಂಡರಾದ ಅರುಣ ಗಾಣಿಗೇರ, ಸುರೇಶ ಗಾಣಿಗೇರ, ಸುರೇಶ ಅಡಿಶೇರಿ, ಡಾ.ಅರವಿಂದರಾವ ಕಾರ್ಚಿ,ರಾಜು ಮದನೆ, ನೀರಾವರಿ ಇಲಾಖೆ ಇಂಜನಿಯರ್‌ ನಾಗೇಶ ಬಿ.ಎ, ಪ್ರವೀಣ ಹುಣಸಿಕಟ್ಟಿ, ಎಇಇ ಪ್ರಶಾಂತ ಪೋತದಾರ, ಬಸವರಾಜ ಗಲಗಲಿ, ವಿನಾಯಕ ಬಾಗಡಿ, ಚಂದ್ರಕಾಂತ ಇಮ್ಮಡಿ, ದತ್ತಾ ವಾಸ್ಟರ್, ಪ್ರಕಾಶ ಗಾಣಿಗೇರ, ನಾಗೇಶ ಕರಿ, ಶೇಖರ ಮಾನೆ, ರೇವಣ್ಣ ಬರೋಡೆ, ಜಾಪರ್ ಅರ್ತಾಳೆ, ಕಿರಣ ಕಾತ್ರಾಳೆ, ನಾಗೇಶ ಯಲ್ಲಟ್ಟಿ ಸೇರಿದಂತೆ ಅನೇಕರು ಇದ್ದರು.