ಸಾರಾಂಶ
ದೇಶದ ಒಟ್ಟು ಜನಸಂಖ್ಯೆಯ ಶೇ.8ರಷ್ಟು ಬುಡಕಟ್ಟು ಜನಾಂಗದವರಿದ್ದಾರೆ. ಅವರೆಲ್ಲರನ್ನೂ ಅಜ್ಞಾನ, ಅನಕ್ಷರತೆ ಮತ್ತು ಬಡತನದ ಸ್ಥಿತಿಯಿಂದ ಹೊರತಂದು ಸ್ವಾವಲಂಬಿ ಬದುಕು ನಡೆಸಲು ಅನುಕೂಲ ಕಲ್ಪಿಸಿಕೊಡುವ ಮೂಲಕ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕಾಗಿದೆ ಎಂದು ರೋಟರಿ ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಮಹೇಶ್ವರಿ ಪಸಾರದ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಬ್ಯಾಡಗಿ
ದೇಶದ ಒಟ್ಟು ಜನಸಂಖ್ಯೆಯ ಶೇ.8ರಷ್ಟು ಬುಡಕಟ್ಟು ಜನಾಂಗದವರಿದ್ದಾರೆ. ಅವರೆಲ್ಲರನ್ನೂ ಅಜ್ಞಾನ, ಅನಕ್ಷರತೆ ಮತ್ತು ಬಡತನದ ಸ್ಥಿತಿಯಿಂದ ಹೊರತಂದು ಸ್ವಾವಲಂಬಿ ಬದುಕು ನಡೆಸಲು ಅನುಕೂಲ ಕಲ್ಪಿಸಿಕೊಡುವ ಮೂಲಕ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕಾಗಿದೆ ಎಂದು ರೋಟರಿ ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಮಹೇಶ್ವರಿ ಪಸಾರದ ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದಲ್ಲಿ ಮೂರು ದಿನಗಳ ಕಾಲ ಜರುಗಿದ ದಾನಮ್ಮದೇವಿ ಜಾತ್ರೆ ವೇಳೆಯಲ್ಲಿ ನಿರ್ಮಿಸಲಾಗಿದ್ದ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಕೆಲಸಕ್ಕೆಂದು ಬಂದಿದ್ದ ಬುಡಕಟ್ಟು (ಅಲೆಮಾರಿ) ಜನಾಂಗದ ಕುಟುಂಬಗಳಿಗೆ ಪುಸ್ತಕ, ಬಟ್ಟೆ, ಆಹಾರ ಇತರ ದಿನನಿತ್ಯದ ಪರಿಕರಗಳನ್ನು ವಿತರಿಸಿ ಅವರು ಮಾತನಾಡಿದರು.
ಪುರಸಭೆ ಮಾಜಿ ಅಧ್ಯಕ್ಷೆ ಕವಿತಾ ಸೊಪ್ಪಿನಮಠ ಮಾತನಾಡಿ, ಬುಡಕಟ್ಟು ಜನಾಂಗದವರು ವಿಶಿಷ್ಟ ಸ್ವಭಾವವನ್ನು ಹೊಂದಿದ್ದು. ಬಹಳಷ್ಟು ಸ್ವಾಭಿಮಾನಿಗಳಾಗಿದ್ದಾರೆ. ಅವರು ಎಂದಿಗೂ ಕೈಯೊಡ್ಡಿ ಬೇಡಿ ತಿನ್ನುವಂತಹ ಸ್ಥಿತಿಯಲ್ಲಿಲ್ಲ, ಆರ್ಥಿಕವಾಗಿ ಸಬಲರಾಗಿರುವ ಸಮಾಜದ ಜನರಿಗಿಂತ ಅವರು ಸ್ಪಷ್ಟವಾಗಿ ಭಿನ್ನವಾಗಿದ್ದು, ಅನೇಕ ತಲೆಮಾರುಗಳಿಂದ ಬಂದಂತಹ ಜೀವನಶೈಲಿ ವಿಧಾನಗಳನ್ನೇ ಇಂದಿಗೂ ಮುಂದುವರಿಸಿಕೊಂಡು ಅದನ್ನೇ ಅನು ಸರಿಸುತ್ತಾ ಬದುಕನ್ನು ನಡೆಸುತ್ತಿದ್ದಾರೆ ಎಂದರು.ಎಡಿಟರ್ ಲಕ್ಷ್ಮೀ ಉಪ್ಪಾರ ಮಾತನಾಡಿ, ಬುಡಕಟ್ಟು ಜನಾಂಗದವರು ಭಾರತೀಯ ಪ್ರಜೆಗಳಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅವರಿಗೆ ಪ್ರತ್ಯೇಕ ಕಲ್ಯಾಣ ಕಾರ್ಯಕ್ರಮಗಳನ್ನು ಘೋಷಿಸಿವೆ. ಆದರೆ ಇಲ್ಲಿರುವ ಬುಡಕಟ್ಟು ಕುಟುಂಬಗಳ ಪರಿಸ್ಥಿತಿಯನ್ನು ಒಂದೊಮ್ಮೆ ಅವಲೋಕಿಸಿದಲ್ಲಿ ಹಿರಿಯರು ಸೇರಿದಂತೆ ಮಕ್ಕಳೂ ಸಹ ಶಿಕ್ಷಣ ವಂಚಿತರಾಗಿದ್ದು ಬಹಳಷ್ಟು ನೋವಿನ ಸಂಗತಿ, ಹೀಗಾಗಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯಗಳು ಇಂದಿಗೂ ಈಡೇರಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ರೂಪ ಕಡೇಕೊಪ್ಪ, ಪ್ರತಿಭಾ ಮೇಲಗಿರಿ, ವಿಜಯಲಕ್ಷ್ಮೀ ಪಾಟೀಲ, ವಿಜಯಲಕ್ಷ್ಮೀ ಗೌಡರ, ಪುಷ್ಪ ಇಂಡಿಮಠ, ಸಂಧ್ಯಾರಾಣಿ ದೇಶಪಾಂಡೆ, ಜಾನವಿ ಎಲಿ, ದಾಕ್ಷಾಯಣಿ ಹರಮಗಟ್ಟಿ, ಸುಶೀಲಾ ಕಲಶೆಟ್ಟಿ, ಸುಧಾ ಹೊಸಮನಿ ಹಾಗೂ ಅಲೆಮಾರಿ ಬುಡಕಟ್ಟು ಕಾರ್ಮಿಕ ಕುಟುಂಬದವರು ಉಪಸ್ಥಿತರಿದ್ದರು.