ಸಾರಾಂಶ
ಕನ್ನಡಪ್ರಭ ವಾರ್ತೆ ಐಗಳಿ
ಇಲ್ಲಿಯ ಸಿಂಧೂರ ವಸತಿಯ ಅಪ್ಪಯ್ಯ ಸ್ವಾಮಿ ದೇವಾಲಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಸಮಯ ಪ್ರಜ್ಞೆ, ಕರ್ತವ್ಯ ಪಾಲನೆಯಲ್ಲಿ ಸೇವೆ ಮಾಡುತ್ತಿರುವ ಆದರ್ಶ ಮುಖ್ಯ ಶಿಕ್ಷಕ ಎಸ್.ಎಂ. ಜನಗೌಡ ಅವರಿಗೆ ದೇವಾಲಯದ ಟ್ರಸ್ಟ್ ಕಮಿಟಿ ಪರ ಸತ್ಕರಿಸಲಾಯಿತು.ಕಮಿಟಿ ಉಪಾಧ್ಯಕ್ಷ ಮಹಾದೇವ ಹಾಲಳ್ಳಿ ಮಾತನಾಡಿ, ಜನಗೌಡ ಶಿಕ್ಷಕರು ಸಂಬಳಕ್ಕಿಂತ ಹೆಚ್ಚು ಮಕ್ಕಳಿಗೆ ವಿದ್ಯೆ ಕಲಿಸಿದ್ದಾರೆ. ಶಿಸ್ತು ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದಾರೆ. ಶಾಲೆಯ ದಾಖಲಾತಿಗಳು ಅಚ್ಚುಕಚ್ಚಾಗಿಟ್ಟು ಆದರ್ಶರಾಗಿದ್ದಾರೆ. ಇಂತಹವರನ್ನು ಸರ್ಕಾರ ಗುರುತಿಸಿ ರಾಜ್ಯ ಸರ್ಕಾರ ಪ್ರಶಸ್ತಿ ನೀಡಲಿ ಎಂದರು.ಕನ್ನಾಳದ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಜನಗೌಡ ಶಿಕ್ಷಕರು ತಾಲೂಕಿನ ತಮ್ಮದೆ ಆದ ಹೆಸರು ಗಳಿಸಿದ್ದಾರೆ. ಇವರು ಶಿಕ್ಷಕರು, ಸಾಹಿತಿಗಳು, ಕಲಾವಿದರು ಆಗಿದ್ದು, ಧಾರ್ಮಿಕ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿ ಸುಂದರ ಬದುಕು ರೂಪಿಸಿಕೊಂಡಿದ್ದಾರೆ. ಇವರಲ್ಲಿರುವ ಎಲ್ಲ ಗುಣಗಳನ್ನು ನೋಡಿ ಅಪ್ಪಯ್ಯ ಸ್ವಾಮಿ ದೇವಾಲಯದ ಕಮಿಟಿಯವರು ಆದರ್ಶ ಶಿಕ್ಷಕ ಜನಗೌಡರನ್ನು ಸತ್ಕರಿಸಿದ್ದು ಶ್ಲಾಘನೀಯ ಎಂದರು.ಟ್ರಸ್ಟ್ ಕಮಿಟಿ ಅಧ್ಯಕ್ಷ ನರಸಪ್ಪ ಸಿಂಧೂರ, ಕಾರ್ಯದರ್ಶಿ ಕೆ.ಎಸ್.ಬಿರಾದಾರ, ವಿಶ್ರಾಂತಿ ಶಿಕ್ಷಕ ನಿಂಗನಗೌಡ ಪಾಟೀಲ, ಯಕ್ಕಂಚಿಯ ಪೂಜ್ಯ ಅಡವಯ್ಯ ಸ್ವಾಮೀಜಿ, ಕೋಹಳ್ಳಿಯ ಗಂಗಾಧರ ಸ್ವಾಮೀಜಿ ಕೊಕಟನೂರಿನ ದಾನಯ್ಯ ಸ್ವಾಮೀಜಿ, ಭೀಮಣ್ಣ ಸಿಂಧೂರ, ಶೇಖರ ಬಿಜ್ಜರಗಿ, ಹಿರಿಯ ಪತ್ರಕರ್ತ ಮಲಗೌಡ ಪಾಟೀಲ ಇದ್ದರು.