ಸಾರಾಂಶ
ಕನ್ನಡಪ್ರಭ ವಾರ್ತೆ ಸಿರುಗುಪ್ಪ
ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗಳಿಸಿರುವ ನಂದಿನಿ ಅಗಸರ ಅವರಿಗೆ ತಾಲೂಕಿನ ಬಗ್ಗೂರು ಗ್ರಾಪಂ ಕಾರ್ಯಾಲಯದಲ್ಲಿ ಗ್ರಾಪಂ ವತಿಯಿಂದ ಸನ್ಮಾನಿಸಿ, ಉಡುಗೊರೆ ನೀಡಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ನಂದಿನಿ ಅಗಸರ ಅವರು, ನಮ್ಮ ಪಾಲಕರಾದ ಯಲ್ಲಪ್ಪ, ಅಯ್ಯಮ್ಮ, ತರಬೇತುದಾರರಾದ ರಮೇಶ್ ಅವರ ಮಾರ್ಗದರ್ಶನದಲ್ಲಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಕಂಚಿನ ಪದಕ ಗಳಿಸಿದ್ದೇನೆ. ಇಡೀ ದೇಶದ್ಯಾದ್ಯಂತ ನನ್ನನ್ನು ಗೌರವಿಸುತ್ತಿರುವುದು ಸಂತಸ ತಂದಿದೆ.ಇದೇ ಗ್ರಾಪಂನ ಶ್ರೀನಗರ ಕ್ಯಾಂಪ್ ನನ್ನ ಹುಟ್ಟೂರು. ಇಲ್ಲಿ ಸನ್ಮಾನಿಸಿರುವುದು ಹೆಚ್ಚಿನ ಸಂತೋಷಕ್ಕೆ ಕಾರಣವಾಗಿದೆ ಎಂದರು.ಗ್ರಾಪಂ ಅಧ್ಯಕ್ಷ ಬಿ. ಬಸವರಾಜ್ ಮಾತನಾಡಿ, ನಂದಿನಿಯವರ ಪೋಷಕರು ಶ್ರೀನಗರ ಕ್ಯಾಂಪಿನವರಾಗಿದ್ದು, ದುಡಿಮೆಗಾಗಿ ಹಲವು ವರ್ಷಗಳ ಹಿಂದೆ ಹೈದರಾಬಾದ್‌ಗೆ ವಲಸೆ ಹೋಗಿದ್ದಾರೆಂದು ತಿಳಿದುಬಂದಿದೆ. ಕುಗ್ರಾಮದಲ್ಲಿ ಜನಿಸಿದ ನಂದಿನಿ ಪ್ರತಿಭೆಯನ್ನು ಇಡೀ ದೇಶವೇ ಮುಕ್ತ ಕಂಠದಿಂದ ಕೊಂಡಾಡುತ್ತಿದೆ ಎಂದರು.ಸಿರುಗುಪ್ಪ ನಗರಸಭೆ ಸದಸ್ಯೆ ರೇಣುಕಮ್ಮ, ಗ್ರಾಪಂ ಅಧ್ಯಕ್ಷೆ ಕೆ. ನಾಗಮ್ಮ, ಉಪಾಧ್ಯಕ್ಷ ವೀರೇಶ, ಕಾರ್ಯದರ್ಶಿ ಮಲ್ಲಯ್ಯ, ಸದಸ್ಯರಾದ ಕೆ. ಮರೆಪ್ಪ, ಚಂದ್ರಶೇಖರ, ಬಸವರಾಜಗೌಡ, ಶಿವನಗೌಡ, ಮುಖಂಡರಾದ ಹುಲುಗಪ್ಪ, ಪಂಪನಗೌಡ, ಜೆ. ಚನ್ನನಗೌಡ, ಎಂ. ಶರಣಪ್ಪಗೌಡ, ಕೆ. ಮಲ್ಲೇಶಿ, ವಿ. ವೀರೇಶ, ನಾನಿ ಇನ್ನಿತರರು ಇದ್ದರು.