ಶತಾಯುಷಿ, ನಾರಾಯಣ ಅಯ್ಯಂಗಾರ್‌ಗೆ ಸನ್ಮಾನ

| Published : Jun 08 2024, 12:37 AM IST

ಸಾರಾಂಶ

ರಾಮನಗರ: ನೂರನೇ ವರ್ಷಕ್ಕೆ ಕಾಲಿಟ್ಟ ರಾಮನಗರದ ಹಿರಿಯ ಸಂಗೀತ ಚೇತನ ಬಿ.ಎಸ್. ನಾರಾಯಣ ಅಯ್ಯಂಗಾರ್ ಅವರನ್ನು ರಾಮನಗರ ಜಿಲ್ಲೆಯ ಜನರ ಪರವಾಗಿ ದಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಶುಕ್ರವಾರ ಸನ್ಮಾನಿಸಲಾಯಿತು.

ರಾಮನಗರ: ನೂರನೇ ವರ್ಷಕ್ಕೆ ಕಾಲಿಟ್ಟ ರಾಮನಗರದ ಹಿರಿಯ ಸಂಗೀತ ಚೇತನ ಬಿ.ಎಸ್. ನಾರಾಯಣ ಅಯ್ಯಂಗಾರ್ ಅವರನ್ನು ರಾಮನಗರ ಜಿಲ್ಲೆಯ ಜನರ ಪರವಾಗಿ ದಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಶುಕ್ರವಾರ ಸನ್ಮಾನಿಸಲಾಯಿತು.

ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಸಂಗೀತ ಕ್ಷೇತ್ರಕ್ಕೆ ಬಿ.ಎಸ್.ನಾರಾಯಣ ಅಯ್ಯಂಗಾರ್ ಅವರು ತಮ್ಮದೇ ಆದ ಕೊಡುಗೆ ನೀಡಿದ್ಧಾರೆ. ನೂರು ವರ್ಷ ಪೂರೈಸಿರುವ ಸಂದರ್ಭದಲ್ಲಿ ರಾಮನಗರ ಜಿಲ್ಲೆಯ ಜನರ ಪರವಾಗಿ ಅವರನ್ನು ಗೌರವಿಸಲಾಗುತ್ತಿದೆ. ಇಂತಹ ಹಿರಿಯ ಸಂಗೀತ ಕಲಾವಿದರಿಗೆ ಸರ್ಕಾರದ ಇಲಾಖೆಗಳು ಯಾವುದೇ ಪ್ರಶಸ್ತಿ ಪುರಸ್ಕಾರಗಳನ್ನು ನೀಡದಿರುವುದು ಬೇಸರದ ಸಂಗತಿ ಎಂದು ತಿಳಿಸಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಎಸ್.ರುದ್ರೇಶ್ವರ ಮಾತನಾಡಿ , ಬಿ.ಎಸ್.ನಾರಾಯಣ ಅಯ್ಯಂಗಾರ್ ಅವರ ಸಂಗೀತ ಶಾಲೆಗೆ 73 ವರ್ಷಗಳ ಹೆಗ್ಗಳಿಕೆ ಇದೆ. 1948ರಿಂದ ಪ್ರತಿವರ್ಷವೂ ನಾಡಿನ ಪ್ರಸಿದ್ಧ ಸಂಗೀತ ವಿದ್ವಾಂಸರನ್ನು ಆಹ್ವಾನಿಸಿ ಪುರಂದರದಾಸ ಹಾಗೂ ತ್ಯಾಗರಾಜರ ಆರಾಧನಾ ಮಹೋತ್ಸವ ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ ಎಂದರು.

ಬಿ.ಎಸ್.ನಾರಾಯಣ ಅಯ್ಯಂಗಾರ್ ಅವರು ಮೂರು ತಿಂಗಳಿಗೊಮ್ಮೆ ಪ್ರತಿಭೆ ಪ್ರೋತ್ಸಾಹಿಸುವ ಸಲುವಾಗಿ ತ್ರೈಮಾಸಿಕ ಸಂಗೀತಾರಾಧನೆ ನಡೆಸಿಕೊಂಡು ಬರುತ್ತಿದ್ದಾರೆ. 70 ವರ್ಷಗಳ ಇವರ ಸಂಗೀತಾರಾಧನೆಯ ಈ ಸೇವೆಗೆ ಯಾವುದೇ ಇಲಾಖೆಗಳ ಸಹಕಾರವಿಲ್ಲದೆ ಸ್ವಂತ ಹಣದಿಂದ ನಡೆಸುತ್ತಿರುವುದು ಸ್ಮರಿಸಬೇಕಾದ ವಿಚಾರವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿದ್ವಾನ್ ಎಸ್.ಎನ್. ರಂಗರಾಜು, ಎಸ್.ಎನ್. ಶ್ರೀನಿವಾಸ ಪ್ರಸನ್ನ, ಉಮಾರಂಗರಾಜು, ಸಂಗೀತ ವಿದುಷಿ ಸುಪರ್ಣಶ್ರೀನಿವಾಸ ಪ್ರಸನ್ನ, ಶ್ರೀನಿವಾಸ್, ಸುದರ್ಶನ್, ಜಯಲಕ್ಷ್ಮಿ ಶ್ರೀಧರ್, ರಮಣಿ ರಂಗರಾಜನ್ ಇತರರಿದ್ದರು.

7ಕೆಆರ್ ಎಂಎನ್ 4.ಜೆಪಿಜಿ

ದಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಿರಿಯ ಸಂಗೀತ ಚೇತನ ಬಿ.ಎಸ್.ನಾರಾಯಣ ಅಯ್ಯಂಗಾರ್ ಅವರನ್ನು ಸನ್ಮಾನಿಸಲಾಯಿತು.