ವೀರ ಮರಣ ಹೊಂದಿದ ಸೈನಿಕರಿಗೆ ನಮನ

| Published : Aug 07 2025, 12:45 AM IST

ಸಾರಾಂಶ

ಕಾರ್ಗಿಲ್ ವಿಜಯ್ ದಿವಸದ ಅಂಗವಾಗಿ ಆಲೂರು ಬಸ್ ಸ್ಟ್ಯಾಂಡ್ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಶತ್ರು ರಾಷ್ಟ್ರ ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರವು ನಮಗೆ ಸೇರಬೇಕೆಂದು ಆ ಪ್ರದೇಶವನ್ನು ವಶಪಡಿಸಿಕೊಳ್ಳಲು ಮುಂದಾದಾಗ ನಮ್ಮ ಭಾರತ ದೇಶವು 1999 ಮೇ 3ನೇ ತಾರೀಕಿನಿಂದ ಜುಲೈ 26ರವರೆಗೆ ಎರಡುವರೆ ತಿಂಗಳಿಗೂ ಹೆಚ್ಚಿನ ಕಾಲ ಕಾರ್ಗಿಲ್ ಪ್ರದೇಶದಲ್ಲಿ ಯುದ್ಧವನ್ನು ನಡೆಸಿದ ಸಂದರ್ಭದಲ್ಲಿ ನಮ್ಮ ದೇಶದ ಸುಮಾರು 1533 ಸೈನಿಕರು ಮರಣ ಹೊಂದಿ ಸುಮಾರು 1536 ಸೈನಿಕರು ಗಾಯಾಳುಗಳಾಗಿ ಯುದ್ಧದಲ್ಲಿ ಹೋರಾಟ ನಡೆಸಿದರು ಎಂದು ಸ್ಮರಿಸಿದರು.

ಕನ್ನಡಪ್ರಭ ವಾರ್ತೆ ಆಲೂರು

ಶೌರ್ಯ, ತ್ಯಾಗ, ಬಲಿದಾನದ ಫಲಶೃತಿಯಿಂದಾಗಿ ಜಮ್ಮು ಮತ್ತು ಕಾಶ್ಮೀರ ನಮ್ಮಲ್ಲಿಯೇ ಉಳಿಯಲು ಕಾರಣವಾಗಿದೆ. ಕಾರ್ಗಿಲ್ ಯುದ್ಧದಲ್ಲಿ ನಮ್ಮ ದೇಶದ ವೀರ ಸೈನಿಕರ ಹೋರಾಟದ ಫಲದಿಂದಾಗಿ ಎಂದರೆ ತಪ್ಪಾಗಲಾರದು ಎಂದು ಆಲೂರು ಲಯನ್ಸ್ ಕ್ಲಬ್‌ನ ಅಧ್ಯಕ್ಷ ಬಿ ಮಂಜೇಗೌಡ ತಿಳಿಸಿದರು.

ಕಾರ್ಗಿಲ್ ವಿಜಯ್ ದಿವಸದ ಅಂಗವಾಗಿ ಆಲೂರು ಬಸ್ ಸ್ಟ್ಯಾಂಡ್ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಶತ್ರು ರಾಷ್ಟ್ರ ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರವು ನಮಗೆ ಸೇರಬೇಕೆಂದು ಆ ಪ್ರದೇಶವನ್ನು ವಶಪಡಿಸಿಕೊಳ್ಳಲು ಮುಂದಾದಾಗ ನಮ್ಮ ಭಾರತ ದೇಶವು 1999 ಮೇ 3ನೇ ತಾರೀಕಿನಿಂದ ಜುಲೈ 26ರವರೆಗೆ ಎರಡುವರೆ ತಿಂಗಳಿಗೂ ಹೆಚ್ಚಿನ ಕಾಲ ಕಾರ್ಗಿಲ್ ಪ್ರದೇಶದಲ್ಲಿ ಯುದ್ಧವನ್ನು ನಡೆಸಿದ ಸಂದರ್ಭದಲ್ಲಿ ನಮ್ಮ ದೇಶದ ಸುಮಾರು 1533 ಸೈನಿಕರು ಮರಣ ಹೊಂದಿ ಸುಮಾರು 1536 ಸೈನಿಕರು ಗಾಯಾಳುಗಳಾಗಿ ಯುದ್ಧದಲ್ಲಿ ಹೋರಾಟ ನಡೆಸಿದರು. ಇದರ ಫಲವಾಗಿ ಜುಲೈ 26ನೇ ತಾರೀಖಿನಂದು ಪಾಕಿಸ್ತಾನವು ನಮ್ಮ ಜಮ್ಮು ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಬಂದಂತ ಸಂದರ್ಭದಲ್ಲಿ ಅವರ ವಿರುದ್ಧ ಹೋರಾಡಿ ವಿಜಯವನ್ನ ಗಳಿಸಿದ ದಿನವಾಗಿದ್ದು ಅದರ ಪರಿಣಾಮ ಜಮ್ಮು ಮತ್ತು ಕಾಶ್ಮೀರವು ನಮ್ಮ ಭಾರತ ದೇಶದ ಒಂದು ಅಂಗವಾಗಿ ಉಳಿದುಕೊಂಡಿತು ಎಂದರು

ನಾವು ಯುದ್ಧದಲ್ಲಿ ಗಳಿಸಿದ ವಿಜಯವನ್ನು ಆಚರಿಸುವುದರ ಜೊತೆಗೆ ಯುದ್ಧದಲ್ಲಿ ವೀರ ಮರಣ ಹೊಂದಿದ ಸೈನಿಕರಿಗೆ ನಮನಗಳನ್ನು ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು ಇಂದು ನಾವು ಈ ಕಾರ್ಯವನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಮಂಜೇಗೌಡ, ಕಾರ್ಯದರ್ಶಿ ಶಾಂತಕುಮಾರ್, ಲಯನ್ಸ್ ಸದಸ್ಯರುಗಳಾದ ರೇಣುಕಾ ಪ್ರಸಾದ್,ಬಿ.ವಿ ಗಿರೀಶ್, ಪ್ರವೀಣ್ ಎಚ್.ಜಿ ಚಂದ್ರಶೇಖರ್, ಬಸವರಾಜು, ಪರಮೇಶ್, ರಾಮಚಂದ್ರ,ದರ್ಶನ್, ಜಗದೀಶ್, ಮಂಜುನಾಥ್, ಹುಲ್ಲಳ್ಳಿ ನಾಗರಾಜ್, ನಾಗರಾಜು, ಸುದೀಶ್, ಕೆ.ವಿ ಮಹೇಶ್, ಚಿರಾಗ್ ಸೇರಿದಂತೆ ಇತರರು ಉಪಸ್ಥಿತರಿದ್ದರು.