ಸಾರಾಂಶ
ಡಿ.ಕೆಂಪಣ್ಣನವರು ಹಿಂದಿನ ಸರ್ಕಾರದ ಅವಧಿಯಲ್ಲಿ ದೇಶಾದ್ಯಂತ ಸುದ್ದಿ ಮಾಡಿದ್ದ 40 ಪರ್ಸೆಂಟ್ ಕಮಿಷನ್ ಹಗರಣವನ್ನು ಹೊರತಂದು, ಗುತ್ತಿಗೆ ಕಾಮಗಾರಿಗಳಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದ ವಿರುದ್ಧ ಅವರು ಸೆಟೆದು ನಿಂತಿದ್ದರು. ಅವರನ್ನು ಕಳೆದುಕೊಂಡಿರುವುದು ಗುತ್ತಿಗೆದಾರರಿಗೆ ತುಂಬಲಾರದ ನಷ್ಟವಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಅವರ ನಿಧನಕ್ಕೆ ಜಿಲ್ಲಾ ಗುತ್ತಿಗೆದಾರ ಸಂಘದಿಂದ ಸಂಘದ ಕಚೇರಿಯಲ್ಲಿ ಗುತ್ತಿಗೆದಾರರು ಶ್ರದ್ಧಾಂಜಲಿ ಸಲ್ಲಿಸಿದರು. ಸಂಘದ ಜಿಲ್ಲಾ ಅಧ್ಯಕ್ಷ ಎಂ.ಎಚ್.ಯತಿರಾಜ್ ಮಾತನಾಡಿ, ಡಿ.ಕೆಂಪಣ್ಣನವರು ಹಿಂದಿನ ಸರ್ಕಾರದ ಅವಧಿಯಲ್ಲಿ ದೇಶಾದ್ಯಂತ ಸುದ್ದಿ ಮಾಡಿದ್ದ 40 ಪರ್ಸೆಂಟ್ ಕಮಿಷನ್ ಹಗರಣವನ್ನು ಹೊರತಂದು, ಗುತ್ತಿಗೆ ಕಾಮಗಾರಿಗಳಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದ ವಿರುದ್ಧ ಅವರು ಸೆಟೆದು ನಿಂತಿದ್ದರು. ಅವರನ್ನು ಕಳೆದುಕೊಂಡಿರುವುದು ಗುತ್ತಿಗೆದಾರರಿಗೆ ತುಂಬಲಾರದ ನಷ್ಟವಾಗಿದೆ.ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ವರ್ಗಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.ಮಂಡ್ಯ ಜಿಲ್ಲಾ ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಕೆ.ರವೀಂದ್ರ ಮಾತನಾಡಿ, ಡಿ.ಕೆಂಪಣ್ಣ ಅವರು ಗುತ್ತಿಗೆದಾರರಿಗೋಸ್ಕರ ತಮ್ಮ ಜೀವನವನ್ನು ಮೀಸಲಿಟ್ಟು 40 ಪರ್ಸೆಂಟ್ ಕಮಿಷನ್ ಆರೋಪದ ಸಂಚಲನ ಮೂಡಿಸಿದ್ದರು ಎಂದರು.ಗುತ್ತಿಗೆದಾರರಾದ ಜಿ.ಬಿ.ಭೈರವ, ಸಿದ್ದೇಗೌಡ, ಶ್ರೀನಿಧಿ, ಹನುಮಂತೇಗೌಡ, ದೇವರಾಜು, ವೆಂಕಟೇಶ್, ಜಿ.ಬಿ.ನವೀನ್ ಕುಮಾರ್, ತೂಬಿನಕೆರೆ ಚನ್ನೇಗೌಡ, ನಾಗರಾಜು ಇತರರಿದ್ದರು.ಇಂದು 51 ಹಿರಿಯ ನಾಗರೀಕ ದಂಪತಿಗಳಿಗೆ ಗೌರವ ಸಮರ್ಪಣೆ: ಡಾ.ರಾಮಕೃಷ್ಣೇಗೌಡ
ಕೆ.ಆರ್.ಪೇಟೆ:ತಾಲೂಕಿನ ಹೇಮಗಿರಿಯ ಆದಿಚುಂಚನಗಿರಿ ಶಾಖಾ ಮಠದ ಬಿಜಿಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಸೆ.25 ರಂದು 51 ವರ್ಷಗಳ ಸುದೀರ್ಘ ದಾಂಪತ್ಯ ಜೀವನ ಪೂರೈಸಿರುವ ಹಿರಿಯ ನಾಗರೀಕ ದಂಪತಿಗೆ ಗೌರವ ಸಮರ್ಪಣೆ ಸಮಾರಂಭ ನಡೆಯಲಿದೆ ಎಂದು ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥ ಮಹಾ ಸ್ವಾಮೀಜಿಗಳ 51ನೇ ಪಟ್ಟಾಭಿಷೇಕ ಮಹೋತ್ಸವದ ಸವಿ ನೆನಪಿಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದಿದ್ದಾರೆ.ಇದೊಂದು ವಿಶಿಷ್ಟ ಕಾರ್ಯಕ್ರಮ. ಅಭಿನಂದನೆ ಸ್ವೀಕರಿಸಲಿರುವ ಹಿರಿಯ ನಾಗರೀಕರಲ್ಲಿ ಪುರುಷರಿಗೆ 80 ವರ್ಷ ತುಂಬಿರಬೇಕು ಮತ್ತು ಅವರ ದಾಂಪತ್ಯ ಜೀವನಕ್ಕೆ 51 ವಸಂತಗಳು ತುಂಬಿರಬೇಕು. ಇಂತಹ ವಿಶಿಷ್ಟ ಮಾದರಿ ದಂಪತಿಗಳನ್ನು ಶ್ರೀ ಮಠ ಗುರುತಿಸಿದೆ.
ಬುಧವಾರ ಹೇಮಗಿರಿ ಶಾಖಾ ಮಠದಲ್ಲಿ ಭೈರವೈಕ್ಯ ಡಾ.ಬಾಲಗಂಗಾಧರನಾಥ ಮಹಾ ಸ್ವಾಮೀಜಿಗಳ ವಿಶೇಷ ಪೂಜೆ, ಹೋಮ, ಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಆನಂತರ ಹಿರಿಯ ನಾಗರೀಕ ದಂಪತಿಗಳಿಗೆ ವಿಶೇಷ ಗೌರವ ಸಮರ್ಪಣೆ ನಡೆಯಲಿದೆ. ತಾಲೂಕಿನ ಹಲವು ಗಣ್ಯರು ಮತ್ತು ತೆಂಡೇಕೆರೆ, ಬೇಬಿ, ಗವೀಮಠ, ಕೆ.ಆರ್.ನಗರ ತಾಲೂಕಿನ ಕಾಗಿನೆಲೆ ಗುರುಪೀಠದ ಸ್ವಾಮೀಜಿಗಳು ಸೇರಿದಂತೆ ಹಲವು ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ತಿಳಿಸಿದ್ದಾರೆ.