ನಿಜವಾದ ಯುವ ಶಕ್ತಿ ಕ್ರೀಡೆಯಲ್ಲಿ ಕಾಣಲು ಸಾಧ್ಯ

| Published : Feb 19 2025, 12:47 AM IST

ಸಾರಾಂಶ

ಸಂಘಟನೆ ಕಟ್ಟಿ ಬೆಳೆಸುವುದು ಸವಾಲಿನದ್ದು. ಕ್ರೀಡೆಗೆ ಜಾತಿ, ಮತದ ಭೇದವಿಲ್ಲದೆ ಉತ್ಸಾಹ ಚಿಮ್ಮಿಸುವ ಶಕ್ತಿಯಿದೆ

ಯಲ್ಲಾಪುರ: ಕ್ರೀಡೆ ಜಗತ್ತಿನ ಸ್ಪರ್ಧಾತ್ಮಕ ಸವಾಲು ಎದುರಿಸಲು ನೆರವಾಗುತ್ತದೆ. ಅಲ್ಲದೇ, ಕ್ರೀಯಾಶೀಲ ಮನಸ್ಸು ಚೈತನ್ಯದಾಯಕವಾಗಿ ನಿರಂತರ ಉಳಿಯಲೂ ಕ್ರೀಡೆ ಸಹಕಾರಿ. ನಿಜವಾದ ಯುವ ಶಕ್ತಿ ಕ್ರೀಡೆಯಲ್ಲಿ ಕಾಣಲು ಸಾಧ್ಯ ಎಂದು ಸಿವಿಲ್ ಗುತ್ತಿಗೆದಾರ ಶಿವಲಿಂಗಯ್ಯ ಅಲ್ಲಯ್ಯನವರಮಠ ಹೇಳಿದರು.

ಅವರು ತಾಲೂಕಿನ ವಜ್ರಳ್ಳಿಯ ಸರ್ವೋದಯ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ವಜ್ರಳ್ಳಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪದಲ್ಲಿ ವಜ್ರಳ್ಳಿ ಪ್ರೀಮಿಯರ್ ಲೀಗ್‌ನ ಮೂರನೇ ಆವೃತ್ತಿಯಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.

ನಿವೃತ್ತ ದೈಹಿಕ ಶಿಕ್ಷಕ ಡಿ.ಜಿ. ಭಟ್ಟ ಮಾತನಾಡಿ, ಸಂಘಟನೆ ಕಟ್ಟಿ ಬೆಳೆಸುವುದು ಸವಾಲಿನದ್ದು. ಕ್ರೀಡೆಗೆ ಜಾತಿ, ಮತದ ಭೇದವಿಲ್ಲದೆ ಉತ್ಸಾಹ ಚಿಮ್ಮಿಸುವ ಶಕ್ತಿಯಿದೆ. ಹಳ್ಳಿ ಮತ್ತು ಗ್ರಾಮೀಣ ಭಾಗದ ಕ್ರೀಡೆಗಳ ಮೂಲಕ ದೈಹಿಕ ಕಸರತ್ತು ಬಿಂಬಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ವಜ್ರೇಶ್ವರಿ ಯುವಕ ಸಂಘದ ಅಧ್ಯಕ್ಷ ಸತೀಶ ಗಾಂವ್ಕರ್ ಕುಂಬ್ರಿಕೊಟ್ಟಿಗೆ ಶುಭಕೋರಿದರು. ಅತಿಥಿಗಳಾಗಿ ಗ್ರಾಪಂ ಅಧ್ಯಕ್ಷ ಭಗಿರಥ ನಾಯ್ಕ, ಆದರ್ಶ ಸೇಸ ಸಂಘದ ಅಧ್ಯಕ್ಷ ದತ್ತಾತ್ರೇಯ ಭಟ್ಟ ತಾರಗಾರ, ಗುತ್ತಿಗೆದಾರ ಗಣೇಶ ಹೆಗಡೆ, ಹುಸೇನ್ ಶೆಖ್, ಮಹೇಶ ಗಾಂವ್ಕರ ಸಾಂಬೇಕುಂಬ್ರಿ, ಸುಬ್ರಹ್ಮಣ್ಯ ಗಾಂವ್ಕರ, ಎನ್.ಸಿ ಗಾಂವ್ಕರ್ ಬಾಗಿನಕಟ್ಟಾ, ಸುದೀಪ್, ಮುನ್ನಾ, ರಾಜೇಶ್ ಗೌಡ, ಶಂಕರ ಗೌಡ, ಪರಶುರಾಮ ಉಪಸ್ಥಿತರಿದ್ದರು. ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಆರು ತಂಡಗಳು ಪಾಲ್ಗೊಂಡಿದ್ದು, ಪರಶುರಾಮ ಕಾಳೆ ನೇತೃತ್ವದ ಪವರ್ ವಾರಿಯರ್ಸ ತಂಡ ಪ್ರಥಮ, ವೀರಭದ್ರೇಶ್ವರ ತಂಡ ದ್ವಿತೀಯ ಸ್ಥಾನ ಗಳಿಸಿ ಟ್ರೋಫಿ ಸ್ವೀಕರಿಸಿದವು.

ನರೇಶ್ ಶೇರುಗಾರ ಸ್ವಾಗತಿಸಿ, ನಿರ್ವಹಿಸಿದರು.