ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ನಗರವನ್ನು ಕ್ಷಯ ಮುಕ್ತ ತಾಲೂಕನ್ನಾಗಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಸುನಿತಾ ಹೇಳಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ನೂರು ದಿನಗಳ ಕ್ಷಯರೋಗ ತಿಳಿವಳಿಕೆ ಮತ್ತು ನಿರ್ಮೂಲನೆ ಆಂದೋಲನ ಕುರಿತ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಕ್ಷಯರೋಗವನ್ನು ಶತ್ರುವನ್ನಾಗಿಸಿ ನಿಮ್ಮ ಮಿತ್ರನಂತೆ ಕಾಣುವ ಮೂಲಕ ಕ್ಷಯ ರೋಗಿಗಳು ಕ್ಷಯ ರೋಗದಿಂದ ಮುಕ್ತರಾಗಿ ಕ್ಷಯರೋಗ ಮುಕ್ತ ತಾಲೂಕು ಆಗುವಂತೆ ಮಾಡಲು ಎಲ್ಲರ ಸಹಭಾಗಿತ್ವ ಅತ್ಯಗತ್ಯ ಎಂದರು.
ಕ್ಷಯರೋಗ ಗುಣಪಡಿಸಬಹುದಾದ ಕಾಯಿಲೆ ಆಗಿದ್ದು, ಸರಿಯಾದ ಚಿಕಿತ್ಸೆ ಮೂಲಕ ಕ್ಷಯ ರೋಗದಿಂದ ಮುಕ್ತರಾಗಬಹುದಾಗಿದೆ. ರೋಗದ ಬಗ್ಗೆ ನಿರ್ಲಕ್ಷ್ಯ ತಾಳದೆ ಚಿಕಿತ್ಸೆ ಪಡೆದು ಕ್ಷಯ ರೋಗಿಗಳು ಕ್ಷಯ ಮುಕ್ತ ತಾಲೂಕಾಗಿಸಲು ಸಹಕರಿಸಬೇಕು ಎಂದರು. ಸಾರ್ವಜನಿಕ ಆಸ್ಪತ್ರೆ ಹಿರಿಯ ಕ್ಷಯರೋಗ ಚಿಕಿತ್ಸಾ ಮೇಲ್ವಿಚಾರಕ ಪುಟ್ಟರಾಜು, ಸಾರ್ವಜನಿಕ ಆಸ್ಪತ್ರೆ ಹಿರಿಯ ಪ್ರಯೋಗಾಲಯ ಮೇಲ್ವಿಚಾರಕ ನಂಜುಂಡಸ್ವಾಮಿ, ವಕೀಲರ ಸಂಘದ ಉಪಾಧ್ಯಕ್ಷೆ ಸಿಆರ್ ನಿರ್ಮಲ, ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಟಿ.ಸಿ ಶ್ರೀಕಾಂತ್, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ನಂದಿನಿ, ಹಿರಿಯ ವಕೀಲ ಮಾದಪ್ಪ, ವಕೀಲರ ಸಂಘದ ಮಾಜಿ ಉಪಾಧ್ಯಕ್ಷೆ ಸೀಮಾ ತಹಾಸಿನ್ ಸುಲ್ತಾನ, ವಕೀಲರಾದ ಪುಟ್ಟರಾಜು, ವೆಂಕಟಾಚಲ ಇದ್ದರು.ಹುತಾತ್ಮರ ದಿನಾಚರಣೆ:ಮಹಾತ್ಮ ಗಾಂಧೀಯವರ ನೆನಪಿಗಾಗಿ ಹುತಾತ್ಮರ ದಿನಾಚರಣೆಯನ್ನು ನ್ಯಾಯಾಲಯದ ಆವರಣದಲ್ಲಿ ಗುರುವಾರ ಸಂಜೆ ಆಚರಿಸಲಾಯಿತು. ನ್ಯಾಯಾಲಯದ ಸಿಬ್ಬಂದಿ, ವಕೀಲರು ಆರೋಗ್ಯ ಇಲಾಖೆ ಸಿಬ್ಬಂದಿ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೌನ ಆಚರಿಸುವ ಮೂಲಕ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದರು. ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಸಿ ಶ್ರೀಕಾಂತ್, ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಸುನಿತಾ, ಪ್ರಧಾನ ನ್ಯಾಯಾಧೀಶೆ ನಂದಿನಿ ಎಂ ಎನ್, ವಕೀಲರಾದ ಡಿ.ವೆಂಕಟಾಚಲ, ಮಾದಪ್ಪ ಎಂ, ಡಿ ಎಸ್ ಬಸವರಾಜು, ನ್ಯಾಯಾಲಯ ಶಿರಸ್ತೇದಾರ್ ನಂಜುಂಡಪ್ಪ, ಜಹೀರ್ ಇನ್ನಿತರರಿದ್ದರು.