ಸಾರಾಂಶ
ಆರೋಪಿಗಳು ಶಂಕರನಾರಾಯಣ ಪೊಲೀಸ್ ಠಾಣೆಯ ಸಮೀಪ ಇರುವ ಸರ್ಕಲ್ ಬಳಿ ರಸ್ತೆಯಲ್ಲಿ ಮಲಗಿದ್ದ ಒಂದು ದನವನ್ನು ಬಲವಂತವಾಗಿ ಹಿಡಿದು ಕಾರಿಗೆ ತುಂಬಿದ್ದರು. ಇನ್ನೊಂದು ದನವನ್ನು ಹಿಡಿಯುವಾಗ ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಕಾರಿನಲ್ಲಿ ಪರಾರಿಯಾಗಿದ್ದರು.
ಬೈಂದೂರು: ಇಲ್ಲಿನ ಶಂಕರನಾರಾಯಣ ಪೇಟೆಯಲ್ಲಿ ಜೂ.25 ರಂದು ಮಧ್ಯರಾತ್ರಿ ಗೋ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಶಂಕರನಾರಾಯಣ ಪೋಲಿಸರು ಬಂಧಿಸಿದ್ದಾರೆ.
ಮಂಗಳೂರು ಅಸೈಗೋಳಿ ನಿವಾಸಿ ನಿಝಾಮುದ್ದೀನ್ ಎ.ಎಚ್. ಮತ್ತು ಮಹಮ್ಮದ್ ಅನ್ಸಾರ್ ಬಂಧಿತರು. ಅವರಿಂದ ಕೃತ್ಯಕ್ಕೆ ಬಳಸಿದ್ದ ಐಷಾರಾಮಿ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಆರೋಪಿಗಳು ಶಂಕರನಾರಾಯಣ ಪೊಲೀಸ್ ಠಾಣೆಯ ಸಮೀಪ ಇರುವ ಸರ್ಕಲ್ ಬಳಿ ರಸ್ತೆಯಲ್ಲಿ ಮಲಗಿದ್ದ ಒಂದು ದನವನ್ನು ಬಲವಂತವಾಗಿ ಹಿಡಿದು ಕಾರಿಗೆ ತುಂಬಿದ್ದರು. ಇನ್ನೊಂದು ದನವನ್ನು ಹಿಡಿಯುವಾಗ ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಕಾರಿನಲ್ಲಿ ಪರಾರಿಯಾಗಿದ್ದರು.ಕಾರ್ಯಾಚರಣೆಗೆ ಇಳಿದ ಶಂಕರನಾರಾಯಣ ಠಾಣೆಯ ಎಸ್ಐಗಳಾದ ನಾಸೀರ್ ಹುಸೇನ್ ಮತ್ತು ಶಂಭುಲಿಂಗಯ್ಯ ಎಂ.ಇ. ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ನ್ಯಾಯಾಲಯವು ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.