ಜಿಂಕೆ ಮಾಂಸ ಮಾರುತ್ತಿದ್ದ ಇಬ್ಬರ ಬಂಧನ

| Published : Jan 05 2024, 01:45 AM IST

ಸಾರಾಂಶ

ಕನಕಪುರ: ಜೆಂಕೆ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ, ಅವರಿಂದ ಜಿಂಕೆ ಚರ್ಮ ಹಾಗೂ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಕನಕಪುರ: ಜೆಂಕೆ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ, ಅವರಿಂದ ಜಿಂಕೆ ಚರ್ಮ ಹಾಗೂ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಕಸಬಾ ಹೋಬಳಿ ಅರಳಾಳು ಗ್ರಾಮದ ಗೋವಿಂದಯ್ಯ(71), ಚಿಕ್ಕೋಳಯ್ಯ(61) ಬಂಧಿತರು. ಇವರಿಬ್ಬರು ಅಕ್ರಮವಾಗಿ ಶಿವನಹಳ್ಳಿ ಮೆಗಾ ಡೇರಿ ಹಿಂಭಾಗದ ಪ್ರದೇಶದಲ್ಲಿ ಜಿಂಕೆಯನ್ನು ಬೇಟೆಯಾಡಿದ್ದಾರೆ. ಅರಳಾಳು ಗ್ರಾಮದ ಪುಟ್ಟಮಾದೇಗೌಡರ ಜಮೀನಿನಲ್ಲಿ ಅದನ್ನು ಕತ್ತರಿಸಿ ಮಾಂಸ ಮಾರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ದಾಳಿ ವೇಳೆ ಜಿಂಕೆಯ ಚರ್ಮ ಹಾಗೂ ಮಾಂಸ ತೂಕ ಹಾಕಲು ಬಳಸುತ್ತಿದ್ದ ತಕ್ಕಡಿ ಸೇರಿದಂತೆ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆದು, ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ವಯ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.