ನರಸಿಂಹರಾಜಪುರ: ಹಾಡಹಗಲೇ ರಬ್ಬರ್ ಯಲ್ಲಿದ್ದ ಲಕ್ಷಾಂತರ ರು. ಕಳವುಮಾಡಿದ್ದ ಇಬ್ಬರು ಕಳ್ಳರನ್ನು ಬಂಧಿಸಿದ ನರಸಿಂಹರಾಜಪುರ ಪೊಲೀಸರು ₹1.20 ಲಕ್ಷ ನಗದು ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ.

ನರಸಿಂಹರಾಜಪುರ: ಹಾಡಹಗಲೇ ರಬ್ಬರ್ ಯಲ್ಲಿದ್ದ ಲಕ್ಷಾಂತರ ರು. ಕಳವುಮಾಡಿದ್ದ ಕಳವು ಮಾಡಿದ್ದ ಇಬ್ಬರು ಕಳ್ಳರನ್ನು ಬಂಧಿಸಿದ ನರಸಿಂಹರಾಜಪುರ ಪೊಲೀಸರು ₹1.20 ಲಕ್ಷ ನಗದು ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ.

ಬೇಲೂರಿನ ಹಣ್ಣಿನ ವ್ಯಾಪಾರಿ ಮೊಹಮ್ಮದ್ ಶಹಬಾದ್, ಪೈಂಟರ್‌ ಜೆಮ್ ಶಿದ್ ಬಂಧಿತ ಆರೋಪಿಗಳು.

ಘಟನೆಯ ವಿವರ: ನವಂಬರ್ 19 ರಂದು ಹಳೇ ಪೇಟೆ ಎನ್.ಆರ್.ಪುರ -ಶಿವಮೊಗ್ಗ ರಸ್ತೆಯ ರಬ್ಬರ್ ಅಂಗಡಿ ವ್ಯಾಪಾರಿ ಟಿನು ಥಾಮಸ್ ಮಧ್ಯಾಹ್ನ 1 ಗಂಟೆ ಸುಮಾರಿಗೆ ವ್ಯಾಪಾರಮಾಡಿದ್ದ ಹಣವನ್ನು ಟೇಬಲ್ ಡ್ರಾಕ್ಕೆ ಹಾಕಿ ಲಾಕ್ ಮಾಡಿ, ಕೆಲಸ ದವರು ಇಲ್ಲದ ಕಾರಣ ಅಂಗಡಿ ಷಟರ್ ಎಳೆದು ಸಿಂಸೆಯ ತನ್ನ ಮನೆಗೆ ಊಟಕ್ಕೆ ಹೋಗಿದ್ದರು. ಮತ್ತೆ 1.30 ರ ಬಳಿಕ ಅಂಗಡಿಗೆ ಬಂದಾಗ ಅಂಗಡಿ ಕ್ಯಾಶ್ ಟೇಬಲ್ ನ ಡ್ರಾ ಲಾಕ್ ಒಡೆದು ಹಾಕಿರುವುದು ಕಂಡು ಬಂದಿದೆ. ಪರಿಶೀಲಿಸಿದಾಗ ಡ್ರಾ ದಲ್ಲಿದ್ದ ₹2.50 ಲಕ್ಷ ಕಳುವಾಗಿರುವುದು ಕಂಡು ಬಂದಿದೆ. ಈ ಸಂಬಂಧ ದೂರು ನೀಡಿದ್ದು ನರಸಿಂಹರಾಜಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಈ ಪ್ರಕರಣ ತನಿಖೆಗೆ ನೇಮಿಸಿದ್ದ ತಂಡ ಸಿಸಿಟಿವಿ ಹಾಗೂ ವೈಜ್ಞಾನಿಕವಾಗಿ ಎಲ್ಲಾ ಆಯಾಮಗಳನ್ನು ಪರಿಶೀಲಿಸಿ ಕಳ್ಳರ ಬೆನ್ನಟ್ಟಿದ್ದಾರೆ. ಇಬ್ಬರು ಆರೋಪಿಗಳನ್ನು ಬೇಲೂರಿನಲ್ಲಿ ಪತ್ತೆ ಹಚ್ಚಿ ಬಂಧಿಸಿ ಕರೆ ತಂದು ವಿಚಾರಣೆ ನಡೆಸಿದಾಗ ಮೊಹಮ್ಮದ್ ಶಹಬಾದ್, ಜೆಮ್ ಶಿದ್ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಈ ಇಬ್ಬರು ಈ ಹಿಂದೆ ರಾಜ್ಯದ ಹಲವು ಕಳ್ಳತನದಲ್ಲಿ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.

ಇವರಿಂದ ಪೊಲೀಸರು ₹1.20 ಲಕ್ಷ ಹಾಗೂ ಅಪರಾಧಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಂಡಿದ್ದಾರೆ. ಕಳ್ಳರನ್ನು ಬಂಧಿಸಿದ ಪೊಲೀಸ್ ತಂಡವನ್ನು ಚಿಕ್ಕಮಗಳುರು ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ಕಳ್ಳತನ ಪ್ರಕರಣ ಬೇಧಿಸಲು ಎನ್.ಆರ್.ಪುರ ವೃತ್ತ ನಿರೀಕ್ಷಕ ಗುರುದತ್ ಕಾಮತ್ ಮಾರ್ಗ ದರ್ಶನದಲ್ಲಿ ಪೊಲೀಸ್ ಠಾಣಾಧಿಕಾರಿ ನಿರಂಜನಗೌಡ, ಅಪರಾಧ ವಿಭಾಗದ ಎಸ್.ಐ. ಜ್ಯೋತಿ ನೇತೃತ್ವದಲ್ಲಿ ಸಿಬ್ಬಂದಿ ಮಧು, ಯುಂಗಾಂಧರ, ಪರಮೇಶ್, ಬಿನು, ಅಮಿತ್ ಚೌಗಲೆ,ದೇವರಾಜ,ರೇವಗೊಂಡ ಬಿರಾಧರ, ಕೌಸಿಕ್, ಸ್ವರೂಪ್, ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿ ನಯಾಜ್ ಅಂಜುಂ ಹಾಗೂ ರಬ್ಬಾನಿ ಅವರನ್ನು ಸೇರಿಸಿ ತಂಡ ರಚಿಸಿದ್ದರು.